ಈ ಫೋಟೋ ನೋಡಿದ್ಮೇಲೆ ಶುಭಮನ್ ಗಿಲ್–ಸಾರಾ ತೆಂಡೂಲ್ಕರ್ ರಿಲೇಶನ್‌ಶಿಪ್ ಬಗ್ಗೆ ಅಭಿಮಾನಿಗಳಿಗಿದ್ದ ಅನುಮಾನ ದೂರವಾಯ್ತು!

sara new
Published on

ಮುಂಬೈ: ಇತ್ತೀಚಿನ ದಿನಗಳಲ್ಲಿ ಸಾರಾ ತೆಂಡೂಲ್ಕರ್ ಮತ್ತು ಶುಭಮನ್ ಗಿಲ್ ಇಬ್ಬರೂ ನಿರಂತರವಾಗಿ ಸುದ್ದಿಯಲ್ಲಿದ್ದಾರೆ. ಇಬ್ಬರಿಗೂ ಸಂಬಂಧಿಸಿದ ಸುದ್ದಿಗಳು ಪ್ರತಿದಿನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಕೆಲ ಸಮಯದಿಂದ ಇಬ್ಬರೂ ರಿಲೇಶನ್‌ಶಿಪ್​​​​​ನಲ್ಲಿದ್ದಾರೆ ಎಂಬ ವರದಿಗಳು ಬರುತ್ತಲಿವೆ. ಆದರೆ ಇಲ್ಲಿಯವರೆಗೂ ಇಬ್ಬರೂ ಈ ವಿಚಾರದಲ್ಲಿ ಮೌನ ಮುರಿದಿಲ್ಲ. 2023ರ ವಿಶ್ವಕಪ್‌ನಲ್ಲಿ ಈ ಚರ್ಚೆಯು ಸಾಕಷ್ಟು ಪ್ರಸಾರವಾಯಿತು. ಇದೀಗ ಮತ್ತೊಮ್ಮೆ ಇವರಿಬ್ಬರ ಸಂಬಂಧದ ಚರ್ಚೆ ಬೆಳಕಿಗೆ ಬರುತ್ತಿದ್ದು, ಈ ಬಾರಿ ಸಾರಾ ತೆಂಡೂಲ್ಕರ್ ಅವರ ಫೋಟೋದಿಂದ ಜನರಿಗೆ ಸುಳಿವು ಸಿಕ್ಕಿದೆ. ಈ ಫೋಟೋ ನೋಡಿದ ನಂತರ ಇವರಿಬ್ಬರ ರಿಲೇಶನ್‌ಶಿಪ್ ಬಗ್ಗೆ ಅಭಿಮಾನಿಗಳಲ್ಲಿ ಇದ್ದ ಗೊಂದಲ ದೂರವಾಗಿದೆ.

ವೈರಲ್ ಆದ ಸಾರಾ ಫೋಟೋ
ಇತ್ತೀಚೆಗಷ್ಟೇ ಸಾರಾ ತೆಂಡೂಲ್ಕರ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹಪೂರ್ವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ತಮ್ಮ ಕುಟುಂಬದೊಂದಿಗೆ ಜಾಮ್‌ನಗರವನ್ನು ತಲುಪಿದ್ದರು. ಮೂರು ದಿನಗಳ ಕಾಲ ನಡೆದ ಈ ಕಾರ್ಯಕ್ರಮದ ಕೊನೆಯ ದಿನದಂದು ಫೇರ್ ಥೀಮ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕಾಗಿ ಸಾರಾ ತೆಂಡೂಲ್ಕರ್ ಅವರು ಕೆಂಪು ಲೆಹೆಂಗಾ ಧರಿಸಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳಲ್ಲಿ ಒಂದರಲ್ಲಿ, ಜನರು ಸಾರಾ ಜೊತೆ ಸಾಕು ನಾಯಿಯನ್ನು ನೋಡಿದ್ದಾರೆ, ಅದನ್ನು ನೋಡಿ ಜನರ ಅನುಮಾನ ಜಾಸ್ತಿಯಾಯಿತು. ಏಕೆಂದರೆ ಇದು ಶುಭ್‌ಮನ್ ಗಿಲ್ ಅವರ ನಾಯಿ ಎಂದು ಜನರು ಹೇಳುತ್ತಾರೆ. ಜನರು ಹಾಗೆ ಹೇಳಲು ಕಾರಣವೇನು ಮತ್ತು ಈ ಬಗ್ಗೆ ಜನರಿಗೆ ಹೇಗೆ ತಿಳಿಯಿತು ಎಂದು ನೋಡುವುದಾದರೆ ಕೆಲ ಸಮಯದ ಹಿಂದೆ ಶುಭಮನ್ ಗಿಲ್ ಕೂಡ ಒಂದು ಫೋಟೋ ಪೋಸ್ಟ್ ಮಾಡಿದ್ದರು. ಜುಲೈ 15, 2022 ರಂದು ಪೋಸ್ಟ್ ಮಾಡಿದ ಈ ಫೋಟೋದಲ್ಲಿದ್ದ ನಾಯಿಯೇ ಇದೀಗ ಸಾರಾ ತೆಂಡೂಲ್ಕರ್ ಅವರೊಂದಿಗೆ ಕಾಣಿಸಿಕೊಂಡಿದೆ.

ಆದ್ದರಿಂದ ಸಾರಾ ತೆಂಡೂಲ್ಕರ್ ಹಾಗೂ ಶುಭ್‌ಮನ್ ಗಿಲ್ ಫೋಟೋದಲ್ಲಿ ಕಾಣಿಸಿಕೊಂಡಿರುವ ನಾಯಿ ಒಂದೇ ಎಂದು ಈಗ ನೆಟ್ಟಿಗರು ಹೇಳುತ್ತಿದ್ದಾರೆ. ಇವರಿಬ್ಬರ ಜೊತೆಯಲ್ಲಿರುವ ಸಾಕು ಪ್ರಾಣಿ ಒಂದೆಯೇ ಅಥವಾ ಇಬ್ಬರ ಬಳಿ ಈ ತಳಿಯ ನಾಯಿ ಇದೆಯೇ ಎಂದು ಪ್ರಶ್ನಿಸಬಹುದಾದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನೆಟ್ಟಿಗರು ಈ ಕುರಿತು ನಿರಂತರವಾಗಿ ಚರ್ಚಿಸುತ್ತಿದ್ದಾರೆ.

ಒಟ್ಟಿಗೆ ಕಾಣಿಸಿಕೊಂಡ ಸಾರಾ ಮತ್ತು ಶುಭಮನ್ 
ಈ ಹಿಂದೆ ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಇವರಿಬ್ಬರೂ ಅಂಬಾನಿ ಕುಟುಂಬದ ಜಿಯೋ ಪ್ಲಾಜಾ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಅವರಿಬ್ಬರನ್ನೂ ಒಟ್ಟಿಗೆ ನೋಡಿದ ಜನರು ಅವರ ರಿಲೇಶನ್‌ಶಿಪ್ ದೃಢಪಡಿಸಿದರು. ಇದಾದ ಒಂದು ದಿನದ ನಂತರ ಸಾರಾ ಪಂದ್ಯ ವೀಕ್ಷಿಸಲು ಬಂದಿದ್ದರು. ಅವರು ಶುಭಮನ್ ಅವರನ್ನು ಬೆಂಬಲಿಸಿದರು. ಅದೇನೇ ಇರಲಿ ಇವರ ರಿಲೇಶನ್‌ಶಿಪ್ ಎಷ್ಟು ನಿಜ, ಎಷ್ಟು ಸುಳ್ಳು ಎಂದು ಶುಭಮನ್ ಮತ್ತು ಸಾರಾ ಬಿಟ್ಟರೆ ಇನ್ನಾರೂ ಹೇಳಲಾರರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net