Summer: ಜನರು ಬೇಸಿಗೆಯಲ್ಲಿ ತಮ್ಮ ದೇಹವನ್ನು ತಂಪಾಗಿಡಲು ಪುದೀನ ಎಲೆಗಳನ್ನು ಹೆಚ್ಚಾಗಿ ಬಳಸುತ್ತಾರೆ. ಪುದೀನ ಮತ್ತು ಕೊತ್ತಂಬರಿ ಬಳಕೆಯು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಜೊತೆಗೆ ಆಹಾರದ ಇನ್ನಷ್ಟು ಸುಂದರಗೊಳಿಸುತ್ತದೆ. ಆದರೆ ಬೇಸಿಗೆಯ ಬಿಸಿಲಿಗೆ ತರಕಾರಿಗಳು ಬೇಗನೆ ಒಣಗುತ್ತದೆ. ಬೇಸಿಗೆಯ ಉರಿ ಬಿಸಿಲಿಗೆ ಇಂತಹ ಸೊಪ್ಪುಗಳು ಕೂಡಾ ಬೇಗನೆ ಹಾಳಾಗಲು ಪ್ರಾರಂಭಿಸುತ್ತದೆ. ಹಾಗಾದರೆ ನೀವು ಕೊತ್ತಂಬರಿ ಮತ್ತು ಪುದೀನವನ್ನು ದೀರ್ಘಕಾಲದವರೆಗೆ ತಾಜಾವಾಗಿಡಬೇಕೆ? ಹಾಗಾದ್ರೆ ಈ ರೀತಿ ಮಾಡಿ.

ಕೊತ್ತುಂಬರಿ
ಕೊತ್ತಂಬರಿ ಸೊಪ್ಪನ್ನು ತರುವ ಮೊದಲು, ಉತ್ತಮ ಕೊತ್ತಂಬರಿ ಸೊಪ್ಪನ್ನು ಆರಿಸಿ. ನಂತರ ಒಂದು ನೀರಿನ ಲೋಟದಲ್ಲಿ ಸೊಪ್ಪನ್ನು ಇಡಿ, ಹೀಗೆ ಮಾಡುವುದರಿಂದ ನಾಲ್ಕರಿಂದ ಐದು ದಿನಗಳವರೆಗೆ ತಾಜಾವಾಗಿರುವ ಸೊಪ್ಪನ್ನು ಪಡೆಯಬಹುದು.
ಇದನ್ನೂ ಓದಿ: ಆಪರೇಷನ್ ಸಿಂಧೂರನಲ್ಲಿ ಹುತಾತ್ಮರಾದ 11 ಸೈನಿಕರ ಹೆಸರುಗಳನ್ನು ಬಿಡುಗಡೆ ಮಾಡಿದ ಪಾಕ್ | Operation Sindoor
ಮೊದಲು ಕೊತ್ತಂಬರಿ ಸೊಪ್ಪನ್ನು ತೊಳೆದು ಅದರ ಬೇರುಗಳನ್ನು ತೆಗೆಯಿರಿ. ನೀರು ಸರಿಯಾಗಿ ಒಣಗಿದ ನಂತರ, ಟಿಶ್ಯೂ ಪೇಪರ್ ಹಾಕಿ, ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹರಡಿರಿ, ನಂತರ ಅದನ್ನು ಒಂದು ಬಾಕ್ಸ್ನಲ್ಲಿ ಇಟ್ಟು ಫ್ರಿಡ್ಜ್ ನಲ್ಲಿಡಿ. ನೀವು ಕೊತ್ತಂಬರಿ ಸೊಪ್ಪನ್ನು ಪ್ಲಾಸ್ಟಿಕ್ ಚೀಲದಲ್ಲಿಯೂ ಸಂಗ್ರಹಿಸಬಹುದು.
ಪುದೀನ
ಪುದೀನವನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು, ಮೊದಲನೆಯದಾಗಿ ಮಾರುಕಟ್ಟೆಯಿಂದ ತಾಜಾ ಪುದೀನವನ್ನು ಖರೀದಿಸಿ.
ನಂತರ ಪುದೀನ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ, ನಂತರ ಅವುಗಳನ್ನು ಪೇಪರ್ ಟವೆಲ್ ಅಥವಾ ಟಿಶ್ಯೂ ಪೇಪರ್‌ನಲ್ಲಿ ಸುತ್ತಿ ಸುತ್ತಿ ಫ್ರಿಜ್‌ನಲ್ಲಿ ಇಡಿ. ಪುದೀನ ಎಲೆಗಳನ್ನು ಸಂಗ್ರಹಿಸಲು ನೀವು ಪ್ಲಾಸ್ಟಿಕ್ ಚೀಲವನ್ನು ಸಹ ಬಳಸಬಹುದು. ಪುದೀನ ಒಣಗಿದ ನಂತರ, ಅದನ್ನು ಕಾಗದದಲ್ಲಿ ಸುತ್ತಿ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ. ಈ ರೀತಿಯಾಗಿ ಪುದೀನವು ದೀರ್ಘಕಾಲದವರೆಗೆ ತಾಜಾವಾಗಿರುತ್ತದೆ. (ಏಜೆನ್ಸೀಸ್)
ಶೋಪಿಯಾನ್ ಎನ್‌ಕೌಂಟರ್: ಮೂವರು ಲಷ್ಕರ್ ಉಗ್ರರನ್ನು ಸದೆಬಡಿದ ಭಾರತೀಯ ಸೇನೆ | Shopian