ಸಲ್ಮಾನ್​ ಖಾನ್​ ಕುಟುಂಬಕ್ಕೂ ಮುಳುವಾಯ್ತಾ ಸುಶಾಂತ್​ ಪ್ರಕರಣ?

salman-arbaaz
Published on

ಮುಂಬೈ: ಬಾಲಿವುಡ್​ನಲ್ಲಿ ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ಬೇರೆ ಹಾದಿಯಲ್ಲಿಯೇ ಸಾಗುತ್ತಿದೆ. ಆರಂಭದಲ್ಲಿದ್ದ ಕೌತುಕ ಇದೀಗ ಇಲ್ಲವಾಗಿ, ಸಂಪೂರ್ಣ ಡ್ರಗ್​ ಮಾಫಿಯಾದತ್ತ ತನಿಖೆಯ ಹಾದಿ ಸಾಗಿದೆ. ಇದೆಲ್ಲದರ ನಡುವೆ ಸಲ್ಮಾನ್​ ಕುಟುಂಬಕ್ಕೂ ಈ ಪ್ರಕರಣ ತಲೆನೋವಾಗಿ ಪರಿಣಮಿಸಿದೆ.

ಹೌದು, ಸುಶಾಂತ್​ ಮತ್ತು ಅವರ ಮಾಜಿ ಮ್ಯಾನೇಜರ್​ ದಿಶಾ ಸಾಲಿಯಾನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಲ್ಮಾನ್​ಖಾನ್​ ಸಹೋದರ ಅರ್ಬಾಜ್​ ಖಾನ್​ ಅವರ ಲಿಂಕ್​ ಇದೆ ಎಂಬಂಥಹ ರೀತಿಯಲ್ಲಿ ಸೋಷಿಯಲ್​ ಮೀಡಿಯಾದಲ್ಲಿ ಕೆಲ ಪೋಸ್ಟ್​ಗಳು ಮತ್ತು ವಿಡಿಯೋಗಳು ಹರಿದಾಡುತ್ತಿವೆ. ಈ ಮೂಲಕ ನನ್ನ ಮಾನ ಹಾಳು ಮಾಡುತ್ತೀದ್ದೀರಿ ಎಂದು ಆರೋಪಿಸಿರುವ ಅರ್ಬಾಜ್, ಮುಂಬೈನ ಸಿವಿಲ್​ ಕೋರ್ಟ್​ನಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದಾರೆ.

ಸೆ. 28ರಂದು ವಿಭೋರ್ ಆನಂದ್, ಸಾಕ್ಷಿ ಭಂಡಾರಿ ಸೇರಿ ಕೆಲವರು ಅರ್ಬಾಜ್​ ಖಾನ್​ ಮತ್ತವರ ಕುಟುಂಬಕ್ಕೆ ಸಂಬಂಧಿಸಿದಂತೆ ಮಾನಹಾನಿ ಮಾಡುವ ಪೋಸ್ಟ್ ಪ್ರಕಟಿಸಿದ್ದರು. ಅರ್ಬಾಜ್​ ಕಡೆಯಿಂದ ಕೇಸ್​ ದಾಖಲಾಗುತ್ತಿದ್ದಂತೆ, ಹಾಗೇ ಹಾಕಿದ ಪೋಸ್ಟ್​ಗಳನ್ನು ಹಿಂತೆಗೆದುಕೊಳ್ಳುವಂತೆಯೂ ಕೋರ್ಟ್​ ಆದೇಶಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net