PHOTOS| ಸಿನಿಮಾ ಅವಕಾಶ ಇಲ್ಲದ್ದಕ್ಕೆ ನಟಿಯಿಂದ ಅರೆ ಬೆತ್ತಲೆ ಫೋಟೋಶೂಟ್​!

95761387_302046820785561_6082913956442333617_n
Published on

ಮುಂಬೈ: ಬಾಲಿವುಡ್​ನ ಖ್ಯಾತ ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದ ಸಾಕಷ್ಟು ಕಲಾವಿದರಿಗೆ ಪ್ರೇಕ್ಷಕ ಕೈ ಹಿಡಿದಿಲ್ಲ. ಹಾಗಾಗಿ ಸಿನಿಮಾ ತ್ಯಜಿಸಿ ತಮ್ಮದೆ ಆದ ವೃತ್ತಿ ಆರಂಭಿಸಿದವರು ಸಾಕಷ್ಟು ಮಂದಿ ಕಾಣ ಸಿಗುತ್ತಾರೆ. ಅದೇ ರೀತಿ ಇದೀಗ ಬಾಲಿವುಡ್​ನ ಖ್ಯಾತ ಹಿರಿಯ ನಟಿ ಸುಚಿತ್ರ ಸೇನ್​ ಮೊಮ್ಮಗಳು ರಿಯಾ ಸೇನ್​, ಸಿನಿಮಾ ಅವಕಾಶಗಳು ಇಲ್ಲದ್ದಕ್ಕೆ ಅರೆ ಬೆತ್ತಲೆ ಫೋಟೋಶೂಟ್​ ಮಾಡಿಸಿಕೊಂಡು ಸುದ್ದಿಯಲ್ಲಿದ್ದಾರೆ.

1991ರಲ್ಲಿ ಬಾಲ ನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ್ದ ರಿಯಾ ಸೇನ್​, 1999ರಲ್ಲಿ ತಮಿಳಿನ ತಾಜ್​ಮಹಲ್​ ಸಿನಿಮಾ ಮೂಲಕ ನಾಯಕಿಯಾಗಿ ಕಾಣಿಸಿಕೊಂಡರು. ಆರಂಭದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡ ರಿಯಾ, ಕೊನೆ ಕೊನೆಗೆ ಅವಕಾಶವೇ ಇಲ್ಲದಂತಾದರು. 2013ರಲ್ಲಿ ತೆರೆಕಂಡ ರಬ್ಬಾ ಮೇ ಕ್ಯಾ ಕರೋಂ ಚಿತ್ರವೇ ಅವರ ಕೊನೇ ಹಿಂದಿ ಸಿನಿಮಾ. ಅದಾದ ಬಳಿಕ ಓರಿಯಾ, ಬೆಂಗಾಳಿ ಸಿನಿಮಾಗಳಲ್ಲಿ ನಟಿಸಿದರು. ಬಳಿಕ ವೆಬ್​ಸಿರೀಸ್​ನತ್ತ ಮುಖ ಮಾಡಿದರು. ಸದ್ಯ ಅವರ ಕೈಯಲ್ಲಿ ಯಾವ ಸಿನಿಮಾ ಆಫರ್​ಗಳು ಇಲ್ಲ ಎಂಬುದೇ ಅಚ್ಚರಿಯ ವಿಚಾರ.

ಹೀಗಿರುವಾಗಲೇ ಇತ್ತೀಚೆಗೆ ಬೋಲ್ಡ್ ಲುಕ್​ನಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡು ಮತ್ತೆ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ ರಿಯಾ. ಅವರ ಟಾಪ್​ಲೆಸ್​ ಫೋಟೋಶೂಟ್​ಗಳು ಇಂಟರ್​ನೆಟ್​ನಲ್ಲಿ ವೈರಲ್​ ಆಗುತ್ತಿವೆ. ಆ ಫೋಟೋಗಳು ಇಲ್ಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net