ಅಪ್ಪು 'ಅಪ್ಪು'ಗೆಗೆ ಅಭಿಮಾನಿಗಳ ಕಾತರ; ರೀ-ರಿಲೀಸ್ ಚಿತ್ರದ​ ಟಿಕೆಟ್​ಗಳು​ ಸೋಲ್ಡ್​ ಔಟ್​! | Appu Re-Release

ವಿಜಯವಾಣಿ - 2025-03-13T181923.709
Published on

Appu Re-Release: ಕನ್ನಡ ಚಿತ್ರರಂಗದ ಪವರ್​ ಸ್ಟಾರ್​, ನಟ ಪುನೀತ್ ರಾಜ್​ಕುಮಾರ್​ ಹೀರೋ ಆಗಿ ನಟಿಸಿದ ಮೊಟ್ಟಮೊದಲ ಸಿನಿಮಾ 'ಅಪ್ಪು' ಚಿತ್ರ ನಾಳೆ ರಾಜ್ಯಾದ್ಯಂತ ರೀ-ರಿಲೀಸ್ ಆಗುತ್ತಿದೆ.

2002ರಲ್ಲಿ ಅಪ್ಪು

ರಾಜ್ಯದ ಬಹುತೇಕ ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಪುನೀತ್ ರಾಜ್​ಕುಮಾರ್​ ಅಭಿನಯದ 2002ರಲ್ಲಿ ತೆರೆಕಂಡು, ಶತದಿನೋತ್ಸವ ಸಂಭ್ರಮ ಕಂಡಿದ್ದ 'ಅಪ್ಪು' ಸಿನಿಮಾ ನಾಳೆ (ಮಾ.14) ಮರುಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟಿಕೆಟ್​ಗಳು ನಿರೀಕ್ಷೆಗೂ ಮೀರಿ ಖರೀದಿಯಾಗಿದ್ದು, ಪುನೀತ್ ಅವರ ಅಭಿಮಾನಿ ಬಳಗ ಮತ್ತು ಸಿನಿಪ್ರಿಯರು ಮತ್ತೊಮ್ಮೆ ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ತೀರ ಕಾತರದಿಂದ ಕಾಯತೊಡಗಿದ್ದಾರೆ.

'ಅಪ್ಪು' ಆಗಮನಕ್ಕೆ ಕಾತರ

ಆನ್​ಲೈನ್​ ಟಿಕೆಟ್​ ಬುಕ್ಕಿಂಗ್ ಜೋರಾಗಿದ್ದು, ಹಲವು ಚಿತ್ರಮಂದಿರಗಳ ಮೊದಲ ಶೋ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿ ಹೌಸ್​ ಫುಲ್​ ಬೋರ್ಡ್​ ಪಡೆದಿವೆ. ಇನ್ನು ತದನಂತರದ ಶೋಗಳ ಟಿಕೆಟ್​ಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಾಗಿವೆ. ಬುಕ್ ಮೈ ಶೋ ಆ್ಯಪ್​ನಲ್ಲಿ ಬೆಂಗಳೂರಿನ ಹೆಸರಾಂತ ಚಿತ್ರಮಂದಿರಗಳು ಬೆಳಗ್ಗಿನ ಪ್ರದರ್ಶನದ ಎಲ್ಲಾ ಟಿಕೆಟ್​ಗಳು ಖರೀದಿಯಾಗಿವೆ ಎಂದು ತೋರಿಸಿವೆ.

ನಗುಮುಖದ 'ರಾಜಕುಮಾರ'

ತಮ್ಮ ಸರಳತೆ, ಸಜ್ಜನಿಕೆ, ನಗುಮುಖದ ಸ್ವಭಾವದಿಂದಲೇ ಇಂದಿಗೂ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ಬೇರೂರಿ ಕುಳಿತಿರುವ ಪುನೀತ್ ರಾಜ್​ಕುಮಾರ್​ರನ್ನು ಅಭಿಮಾನಿಗಳು ಮರೆಯುವುದಿಲ್ಲ ಅನ್ನೋದಕ್ಕೆ ಅಪ್ಪು ರೀ-ರಿಲೀಸ್ ಚಿತ್ರವೇ ಜ್ವಲಂತ ಸಾಕ್ಷಿ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್​ ಅವರ ಕ್ರೇಜ್​ ಶುರುವಾಗಿದ್ದು, ಬ್ಲಾಕ್​ಬಸ್ಟರ್​ ಹಿಟ್​ ಚಿತ್ರವನ್ನು ಮತ್ತೊಮ್ಮೆ ಚಿತ್ರಮಂದಿರದಲ್ಲಿ ನೋಡುವ ತವಕ ಅಭಿಮಾನಿಗಳಾದ್ದಾಗಿದೆ.

ಅಪ್ಪು ಶತದಿನದ ಸಂಭ್ರಮಾಚರಣೆಯ ವಿಡಿಯೋ ವ್ಯಾಪಕವಾಗಿ ಜಾಲತಾಣಗಳಲ್ಲಿ ಹರಿದಾಡಿದೆ. ವೇದಿಕೆಯಲ್ಲಿ ಪುನೀತ್ ಅವರು ಡಾ. ರಾಜ್​ಕುಮಾರ್​, ರಜನಿಕಾಂತ್​ ಮತ್ತು ಪಾರ್ವತಮ್ಮ ರಾಜ್​ಕುಮಾರ್​ ಅವರ ಆರ್ಶಿವಾದವನ್ನು ಪಡೆಯುತ್ತಿರುವುದು ದೃಶ್ಯದಲ್ಲಿ ಕಾಣಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net