ಕೊಚ್ಚಿ ಹಡಗು ನಿರ್ಮಾಣ ಸಂಸ್ಥೆಯಲ್ಲಿ ಅಪ್ರೆಂಟಿಸ್​​ಷಿಪ್ : ಯಾರಿಗೆ ಅವಕಾಶ?

Exam
Published on

ಕೊಚ್ಚಿ: ಕೇಂದ್ರ ಸರ್ಕಾರದ ಪ್ರಮುಖ ಮಿನಿರತ್ನ ಕಂಪನಿಯಾದ ಕೊಚ್ಚಿ ಶಿಪ್​ಯಾರ್ಡ್ ಲಿಮಿಟೆಡ್​​ನಲ್ಲಿ ಒಂದು ವರ್ಷದ ಅಪ್ರೆಂಟಿಸ್​ಷಿಪ್​​ಗೆ ವೃತ್ತಿಪರ / ಐಟಿಐ ಪೂರೈಸಿದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಟೆಕ್ನಿಷಿಯನ್ (ವೊಕೇಷನಲ್) ಅಪ್ರೆಂಟಿಸ್​​​​ಗೆ ಒಟ್ಟು 8 ಸ್ಥಾನಗಳಿವೆ. ಸಂಬಂಧಿಸಿದ ವೃತ್ತಿಯಲ್ಲಿ ವೊಕೇಷನಲ್ ಹೈಯರ್ ಸೆಕೆಂಡರಿ ಶಿಕ್ಷಣ (ವಿಎಚ್​​ಎಸ್​ಇ) ಆಗಿರಬೇಕು. ಮಾಸಿಕ ಸ್ಟೈಫಂಡ್ 9000 ರೂ. ನೀಡಲಾಗುತ್ತದೆ.

ಟ್ರೇಡ್ ಅಪ್ರೆಂಟಿಸ್​​ಗೆ ಒಟ್ಟು 346 ಸ್ಥಾನಗಳಿವೆ. ಸಂಬಂಧಿಸಿದ ಟ್ರೇಡ್​​ನಲ್ಲಿ ಐಟಿಐ ಆಗಿರಬೇಕು. ಆಯಾ ಟ್ರೇಡ್​​ನಲ್ಲಿ ಸರ್ಟಿಫಿಕೇಟ್/ ಪ್ರೊವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಪೂರೈಸಿರಬೇಕು. ಮಾಸಿಕ 8000 ರೂ. ಸ್ಟೈಫಂಡ್ ನೀಡಲಾಗುತ್ತದೆ. ಆಗಸ್ಟ್ 4 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಕೇರಳದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೆಚ್ಚಿನ ಮಾಹಿತಿಗೆ www.cochinshipyard.com ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net