ತುರ್ತು ಸಮಯದಲ್ಲಿ ಅಗತ್ಯ ಸೇವೆ

ambulance
ಪಿಲಾರು ಸಾಂತೂರು ಜವನೆರ್ ಸಂಘಟನೆ ಜೀವರಕ್ಷಕ ಆಂಬುಲೆನ್ಸನ್ನು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಲೋಕರ್ಪಾಣೆಗೊಳಿಸಿದರು. ಲಾಲಾಜಿ ಆರ್.ಮೆಂಡನ್, ರಾಜಶೇಖರ ಕೋಟ್ಯಾನ್, ಫೆಡ್ರಿಕ್ ಡಿಸೋಜ, ಮಾಧವ್ ಭಟ್, ಡಾ.ಸುಬ್ರಹ್ಮಣ್ಯ ಪ್ರಭು, ನಮಿತಾ, ಮೋಹಿನಿ ಸಿ.ಹೆಗ್ಡೆ, ವಿಶ್ವನಾಥ ಶೆಟ್ಟಿ ಪ್ರತೀಕ್ ಸಿ.ಹೆಗ್ಡೆ ಇದ್ದರು
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕರೋನಾ ಸಮಯದಲ್ಲಿ ಆಂಬುಲೆನ್ಸ್ ಸಿಗದೇ ಸಾಕಷ್ಟು ಜನ ತೊಂದರೆ ಅನುಭವಿಸಿರುವುದು ನಮ್ಮ ಮುಂದಿದೆ. ಜೀವನ್ಮರಣ ಹೋರಾಟ ತುರ್ತು ಸಮಯದಲ್ಲಿ ಜನರಿಗೆ ಅಗತ್ಯವಾಗಿರುವ ಆಂಬುಲೆನ್ಸ್ ನಮ್ಮ ಮನೆಯಂಗಳದಲ್ಲೇ ಇದ್ದಾಗ ಒಂದಷ್ಟು ಜನರ ಪ್ರಾಣ ಉಳಿಸಲು ನೆರವಾಗಲಿದೆ. ಪಿಲಾರು ಸಾಂತೂರು ಜವನೆರ್ ಸಂಘಟನೆ ಕಾರ್ಯ ಸ್ತುತ್ಯರ್ಹ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.

ಮುದರಂಗಡಿಯಲ್ಲಿ ಭಾನುವಾರ ಪಿಲಾರು ಸಾಂತೂರು ಜವನೆರ್ ಸಂಘಟನೆ ಮಹತ್ವಾಕಾಂಕ್ಷಿ ಯೋಜನೆ ಜೀವರಕ್ಷಕ ಆಂಬುಲೆನ್ಸ್ ವಿಶ್ವಶಾಂತಿ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಧರ್ಮಗುರು ಫೆಡ್ರಿಕ್ ಡಿಸೋಜ, ಆಲುಂಬೆ ಮಾಧವ್ ಭಟ್, ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಸುಬ್ರಹ್ಮಣ್ಯ ಪ್ರಭು ಶುಭ ಹಾರೈಸಿದರು.

ಪಿಲಾರು ಸಾಂತೂರು ಸಂಘಟನೆ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷ ಪ್ರತೀಕ್ ಸಿ.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಮುದರಂಗಡಿ ಗ್ರಾಪಂ ಅಧ್ಯಕ್ಷೆ ನಮಿತಾ, ಉಪಾಧ್ಯಕ್ಷೆ ಮೋಹಿನಿ ಸಿ.ಹೆಗ್ಡೆ, ಜಿಪಂ ಮಾಜಿ ಸದಸ್ಯೆ ಶಿಲ್ಪಾ ಜಿ.ಸುವರ್ಣ, ಮುದರಂಗಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ದೇವಾಡಿಗ, ಮುದರಂಗಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ವಕೀಲ ಸಂತೋಷ್ ಮೂಡುಬೆಳ್ಳೆ, ಸಮಾಜಸೇವಕ ಸೂರಿ ಶೆಟ್ಟಿ, ಪಿಲಾರು- ಸಾಂತೂರು ಜವನೆರ್ ಸಂಘಟನೆ ಕೋಶಾಧಿಕಾರಿ ಸಚಿನ್ ಭಂಡಾರಿ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಂತ್ ಸ್ವಾಗತಿಸಿದರು. ಚಂದ್ರಹಾಸ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಶಿವರಾಮ ಭಂಡಾರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net