ಶೃಂಗೇರಿ ಮಠದ ಆಸ್ಥಾನ ಪಂಚಾಂಗಕರ್ತರಾಗಿ ನೇಮಕ

jnd
Published on

ಕುಂದಾಪುರ: ಶೃಂಗೇರಿ ಶ್ರೀ ಶಾರದಾ ಮಠದ ಜಗದ್ಗುರು ಶ್ರೀ ಭಾರತೀತೀರ್ಥ ಸ್ವಾಮೀಜಿಯವರ ಆದೇಶದಂತೆ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿಯವರು ಹಾಲಾಡಿಯ ಪಂಚಾಂಗ ಕರ್ತ, ಜೋತಿಷಿ, ವಿದ್ವಾನ್ ತಟ್ಟುವಟ್ಟು ವಾಸುದೇವ ಜೋಯಿಸರನ್ನು ಅಧಿಕೃತ ಆಸ್ಥಾನ ಪಂಚಾಂಗಕರ್ತರಾಗಿ ನೇಮಿಸಿದ್ದಾರೆ. ಈ ಹಿಂದೆ ಇವರ ತಂದೆ ತಟ್ಟುವಟ್ಟು ವಿಶ್ವನಾಥ ಜೋಯಿಸರು ಕೆಲವು ವರ್ಷಗಳ ಕಾಲ ಶೃಂಗೇರಿಯ ಪಂಚಾಂಗ ರಚನೆಯ ಜವಾಬ್ದಾರಿ ವಹಿಸಿಕೊಂಡಿದ್ದರು.

ಜೋತಿಷ ಶಾಸ್ತ್ರದ ಪಂಡಿತರಾಗಿದ್ದ ಅಜ್ಜ ತಟ್ಟುವಟ್ಟು ವಾಸುದೇವ ಭಟ್ಟರು, ಅನಂತರ ತಂದೆ ವಿಶ್ವನಾಥ ಜೋಯಿಸರು ಹಾಗೂ ಪ್ರಸ್ತುತ ವಾಸುದೇವ ಜೋಯಿಸರು ಹಾಲಾಡಿ ಪಂಚಾಂಗವನ್ನು ಪ್ರತಿ ವರ್ಷವೂ ನಿರಂತರವಾಗಿ ಪ್ರಕಟಿಸುತ್ತ ಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net