ದುಡಿಮೆಗೆ ತಕ್ಕ ವೇತನ ಸಿಗುತ್ತಿಲ್ಲ : ಸಿಐಟಿಯು ಮುಖಂಡ ಬಿ.ಎಂ.ಭಟ್ ಆರೋಪ

New Project (10)
Published on

ಬೆಳ್ತಂಗಡಿ: ಅಂಗನವಾಡಿ ನೌಕರರು ತಮ್ಮ ಸಂಘಟನೆ, ಹೋರಾಟಗಳ ಮೂಲಕ ಹಲವು ಸವಲತ್ತುಗಳನ್ನು, ಸ್ವಲ್ಪ ವೇತನ ಏರಿಕೆಯನ್ನೂ ಪಡೆದುಕೊಂಡಿದ್ದರೂ ಅವರ ದುಡಿಮೆಗೆ ತಕ್ಕ ವೇತನ ಸಿಗುತ್ತಿಲ್ಲ ಎಂದು ಸಿಐಟಿಯು ಮುಖಂಡ ಬಿ.ಎಂ.ಭಟ್ ತಿಳಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ಮತ್ತು ಕಾರ್ಮಿಕ ವರ್ಗದ ಹಿತಕ್ಕೆ ಧಕ್ಕೆಯಾಗುವ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ತಾಲೂಕು ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ನೀಡಿ ಮಾತನಾಡಿದರು.

ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಕ್ರಮವಾಗಿ ಮಾಸಿಕ ಕನಿಷ್ಠ ವೇತನ ತಲಾ 36,000 ಅಥವಾ 26,000 ಆಗಬೇಕು ಮತ್ತು ಗುಜರಾತ್ ಹೈಕೋರ್ಟ್ ತೀರ್ಪಿನಂತೆ ನೌಕರರನ್ನು ಡಿ ಗ್ರೂಪ್ ನೌಕರರನ್ನಾಗಿ ಮಾನ್ಯ ಮಾಡಬೇಕು ಹಾಗೂ ಸುಪ್ರೀಂಕೋರ್ಟ್ ತೀರ್ಪಿನಂತೆ ಗ್ರಾಚ್ಯುವಿಟಿ ನೀಡಬೇಕು. ಬಿಎಲ್‌ಒ ಕೆಲಸದಿಂದ ಅವರನ್ನು ಬಿಡುಗಡೆಗೊಳಿಸಬೇಕು. ಪೋಷಣ್ ಟ್ರಾೃಕರ್ ತಾಂತ್ರಿಕ ದೋಷಗಳ ನಿವಾರಣೆ ಆಗಬೇಕು ಮತ್ತು ಪೋಷಣ್ ಟ್ರ್ಯಾಕರ್ ಹೆಸರಲ್ಲಿ ನೌಕರರಿಗೆ ತೊಂದರೆ ಕೊಡಬಾರದು ಎಂದು ಸರ್ಕಾರವನ್ನು ಆಗ್ರಹಿಸಿದರು.

ಅಂಗನವಾಡಿ ನೌಕರ ಸಂಘ ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ಗಾಯತ್ರಿದೇವಿ, ಉಪಾಧ್ಯಕ್ಷೆ ಅರುಣಾ ಬಿ., ಕಾರ್ಯದರ್ಶಿ ಜಯಲಕ್ಷ್ಮೀ, ಸುಮಿತ್ರಾ, ಕುಸುಮಾ ಬಂದಾರು, ರೈತ ಮುಖಂಡ ಲಕ್ಷ್ಮಣ ಗೌಡ, ಸಿಐಟಿಯು ಮುಖಂಡ ಧನಂಜಯ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net