ಬೆಳ್ತಂಗಡಿ: ದ.ಕ.ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ನಡೆದ ಅಲ್ಪಸಂಖ್ಯಾತರ ಸಮಾಲೋಚನಾ ಸಭೆಯಲ್ಲಿ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಿಸಾರ್ ಅಹಮ್ಮದ್ ಅವರಿಗೆ ಹಲವಾರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜೈನ ಸಮುದಾಯದ ವತಿಯಿಂದ ಮನವಿ ನೀಡಲಾಯಿತು.
ದ.ಕ.ಜಿಲ್ಲೆಯಲ್ಲಿ ಸಸ್ಯಹಾರಿ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸುವ ಬಗ್ಗೆ, ಜೈನ ಪುರೋಹಿತರಿಗೆ ಗೌರವಧನ, ಬಸದಿಗಳಿಗೆ ಮೂಲಸೌಕರ್ಯ ನೀಡುವಂತೆ, ಬಸದಿಗಳಿಗೆ ಸೋಲಾರ್ ವ್ಯವಸ್ಥೆ ಅಳವಡಿಸುವಂತೆ, ಜೈನ್ ಸಮುದಾಯದ ಸ್ಮಶಾನ ಅಭಿವೃದ್ಧಿ ವಸತಿ ರಹಿತ ಸಮುದಾಯದವರಿಗೆ ಅನುದಾನ ನೀಡುವಂತೆ ಚರ್ಚಿಸಲಾಯಿತು.
ಧರ್ಮಸ್ಥಳದ ಡಾ.ಕೆ.ಜಯಕೀರ್ತಿ ಜೈನ್, ಅರಿಹಂತ ಜೈನ್ ಅಳದಂಗಡಿ, ನೇಮಿರಾಜ್ ಜೈನ್ ಕಾರ್ಕಳ, ಪುಷ್ಪರಾಜ್ ಜೈನ್ ಮಂಗಳೂರು, ರತ್ನಾಕರ್ ಜೈನ್ ಮಂಗಳೂರು ಉಪಸ್ಥಿತರಿದ್ದರು.
ಹರಿಕಥೆ ಭವಿಷ್ಯದ ಗಂಭೀರ ಚಿಂತನೆ : ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜಿ ಆಶಯ : ಹರಿಕಥಾ ಸಮ್ಮೇಳನಕ್ಕೆ ಚಾಲನೆ
ಪುತ್ತೂರಿಗೆ ಸುಸಜ್ಜಿತ ಕ್ರೀಡಾಂಗಣ – ಶಾಸಕ ಅಶೋಕ್ ರೈ ಘೋಷಣೆ – ೩೨ ಕೋಟಿ. ರೂ. ವೆಚ್ಚದಲ್ಲಿ ನಿರ್ಮಾಣ