

Vitamin D : ಸಾಮಾನ್ಯವಾಗಿ ವಿಟಮಿನ್ ಡಿ ದೇಹಕ್ಕೆ ಬಹಳಷ್ಟು ಅನೂಕಲವಾದ ಮತ್ತು ಅಗತ್ಯವಾದ ಪೋಷಾಂಶವಾಗಿದೆ. ಇದು ವಿಟಮಿನ್ ಅಲ್ಲ, ಮೂಳೆಯ ಬಲ, ರೋಗ ನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಆದರೆ, ಈ ಡಿ ವಿಟಮಿನ್ ಕೊರತೆಯಿಂದಾಗಿ ಏನೆಲ್ಲಾ ತೊಂದರೆಯಾಗುತ್ತದೆ ಗೊತ್ತೆ? ತಿಳಿಯಿರಿ.
ಬಹುತೇಕರು ಸಾಮಾನ್ಯವಾಗಿ ವಿಟಮಿನ್ ಡಿ ಎಂದ ಕ್ಷಣ ಸೂರ್ಯನ ಬೆಳಕಿನಿಂದಲೇ ಸಿಗುತ್ತದೆ ಎಂದು ತಿಳಿದಿರುತ್ತಾರೆ. ಆದರೆ, ಇತರ ಮೂಲಗಳಿಂದ ಕೂಡ ಸಿಗುತ್ತದೆ ಎಂದು ಹಲವರಿಗೆ ಗೊತ್ತಿಲ್ಲ. ಆದರೆ,ಸತ್ಯವೆಂದರೆ ಈ ವಿಟಮಿನ್ ಅನೇಕ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಕಂಡುಬರುತ್ತದೆ. ನೀವು ಬಿಸಿಲಿನಲ್ಲಿ ಹೊರಗೆ ಹೋಗಲು ಸಾಧ್ಯವಾಗದಿದ್ದರೆ ಮತ್ತು ಅದರ ಕೊರತೆಯಿಂದ ಬಳಲುತ್ತಿದ್ದರೆ, ನಿಮ್ಮ ದೇಹಕ್ಕೆ ನೈಸರ್ಗಿಕ ರೀತಿಯಲ್ಲಿ ವಿಟಮಿನ್ ಡಿ ಒದಗಿಸುವ 5 ಸೂಪರ್‌ಫುಡ್‌ಗಳ ಮಾಹಿತಿ ಇಲ್ಲಿದೆ..
1.ಕೊಬ್ಬಿನ ಮೀನು
ಕೊಬ್ಬಿನ ಮೀನುಗಳು ಅಂದರೆ ಸಾಲ್ಮನ್, ಟ್ಯೂನ, ಮ್ಯಾಕೆರೆಲ್ ವಿಟಮಿನ್ ಡಿ ಯ ಅದ್ಭುತ ಮೂಲಗಳಾಗಿವೆ. ನೀವು ಮಾಂಸಾಹಾರಿ ತಿನ್ನುತ್ತಿದ್ದರೆ ಇದು ನಿಮಗೆ ಕೇಕ್ ಮೇಲೆ ಐಸಿಂಗ್ ಮಾಡಿದಂತೆ. ಸಾಲ್ಮನ್ ನಂತಹ ಕೊಬ್ಬಿನ ಮೀನುಗಳು ಅಪಾರ ಪ್ರಮಾಣದ ವಿಟಮಿನ್ ಡಿ ಅನ್ನು ಹೊಂದಿರುತ್ತವೆ. ವಾರಕ್ಕೆ ಎರಡು ಬಾರಿ ತಿನ್ನುವ ಮೂಲಕ ನಿಮ್ಮ ದೈನಂದಿನ ಅಗತ್ಯವನ್ನು ಪೂರೈಸಬಹುದು.
2.ಮೊಟ್ಟೆಯ ಹಳದಿ ಭಾಗ
ಅನೇಕ ಜನರು ಮೊಟ್ಟೆಯ ಬಿಳಿ ಭಾಗವನ್ನು ತಿನ್ನುತ್ತಾರೆ. ಆದರೆ, ನಿಜವಾದ ಶಕ್ತಿಯು ಮೊಟ್ಟೆಯ ಹಳದಿ ಭಾಗದಲ್ಲಿ ಅಡಗಿದೆ. ಮೊಟ್ಟೆಯ ಹಳದಿ ಲೋಳೆಯಲ್ಲಿ ವಿಟಮಿನ್ ಡಿ ಇದ್ದು, ಇದು ನಿಮ್ಮ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.
3. ಹಾಲು ಮತ್ತು ಡೈರಿ ಉತ್ಪನ್ನ
ಈ ವಿಟಮಿನ್ ಡಿ ಕೊರತೆಯನ್ನು ಹಾಲು, ಮೊಸರು ಮತ್ತು ಚೀಸ್ ನಂತಹ ಡೈರಿ ಉತ್ಪನ್ನಗಳನ್ನು ದೈನಂದಿನ ಆಹಾರದಲ್ಲಿ ಸೇರಿಸುವ ಮೂಲಕ ನೀಗಿಸಬಹುದು. ಸೋಯಾ ಹಾಲು ಅಥವಾ ಬಾದಾಮಿ ಹಾಲಿನ ಬಲವರ್ಧಿತ ಆವೃತ್ತಿಗಳು ಸಹ ಲಭ್ಯವಿದೆ.
4.ಅಣಬೆ
ಸೂರ್ಯನ ಬೆಳಕಲ್ಲಿ ಬೆಳೆದ ಅಣಬೆಯಲ್ಲಿ ಸಾಮಾನ್ಯವಾಗಿ ವಿಟಮಿನ್ ಡಿ ನೈಸರ್ಗಿಕವಾಗಿರುತ್ತದೆ. ಇದನ್ನು ತನ್ನುವುದರಿಂದ ವಿಟಮಿನ್ ಡಿ ಪಡೆಯಬಹುದು. ವಿಶೇಷವಾಗಿ ಸಸ್ಯಾಹಾರಿಗಳಿಗೆ ಇದು ಉತ್ತಮ ಆಯ್ಕೆಯಾಗಿದೆ. ಅಣಬೆಗಳನ್ನು ಸ್ವಲ್ಪ ಹೊತ್ತು ಬಿಸಿಲಿನಲ್ಲಿ ಇರಿಸಿ ನಂತರ ಬೇಯಿಸಿದರೆ ಪರಿಣಾಮ ಮತ್ತಷ್ಟು ಹೆಚ್ಚಾಗುತ್ತದೆ.
5. ಧಾನ್ಯ ಮತ್ತು ಓಟ್ಸ್
ಬೆಳಗಿನ ಉಪಹಾರ ಚೆನ್ನಗಿದ್ದರೆ ದಿನದ ದೈನಂದಿನ ಚಟುವಟಿಕೆಗಳು ಕೂಡ ಚೆನ್ನಾಗಿರುತ್ತದೆ. ಮಾರುಕಟ್ಟೆಯಲ್ಲಿ ಕೆಲವು ಉಪಾಹಾರ ಧಾನ್ಯಗಳು ಮತ್ತು ಓಟ್ಸ್ ಲಭ್ಯವಿದೆ. ಇವುಗಳಲ್ಲಿ ವಿಟಮಿನ್ ಡಿ ಸೇರಿಸಲಾಗುತ್ತದೆ. ಇವುಗಳ ಸೇವೆನೆಯಿಂದ ವಿಟಮಿನ್ ಕೊರತೆ ನಿಗಿಸಬಹುದು.