ನಟಿ ಶುಕ್ರವಾರ ರಾತ್ರಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದು, ದಕ್ಷಿಣ ಆಫ್ರಿಕಾದ ಸುಂದರವಾದ ಉದ್ಯಾನವನ ವಿಡಿಯೋದ ಹಿನ್ನೆಲೆಯಲ್ಲಿ, ವಾಮಿಕಾ 'ಅಮ್ಮ' ಎಂದು ಹೇಳುವುದನ್ನು ಕೇಳಬಹುದು. ಈ ವಿಡಿಯೋ ನೋಡಿದ ಅಭಿಮಾನಿಗಳು ವಾಮಿಕಾ ಧ್ವನಿ ತುಂಬಾ ಮುದ್ದಾಗಿದೆ ಎಂದು ಕಾಮೆಂಟ್ ಮಾಡಲು ಆರಂಭಿಸಿದ್ದಾರೆ. ಏತನ್ಮಧ್ಯೆ, ವಿರುಷ್ಕಾ ದಂಪತಿ ದಕ್ಷಿಣ ಆಫ್ರಿಕಾದಲ್ಲಿ ಒಂದು ಪಾರ್ಟಿಯೊಂದಿಗೆ ಹೊಸ ವರ್ಷ 2022ರನ್ನು ಸ್ವಾಗತಿಸಿದರು. ಇದರ ಕುರಿತು ನಟಿ ಮತ್ತು ವಿರಾಟ್ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ, ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಂಚಿಕೊಳ್ಳುತ್ತಿರುವ ಫೋಟೋ, ವಿಡಿಯೋಗಳು ಸಖತ್ ವೈರಲ್ ಆಗುತ್ತಿವೆ.