More

    ಅನುಪಮಾ ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ! ಬ್ರೇಕಪ್​ಗಿಂತಲೂ ಹೆಚ್ಚು ನೋವುಂಟು ಮಾಡುತ್ತಿದೆ ಎಂದ ಫ್ಯಾನ್​

    ಹೈದರಾಬಾದ್​: ನಟಿ ಅನುಪಮಾ ಪರಮೇಶ್ವರನ್​ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಒಳ್ಳೆಯ ಫಾಲೋವರ್ಸ್​ ಇದಾರೆ. ನಿರಂತರವಾಗಿ ಫೋಟೋ ಮತ್ತು ವಿಡಿಯೋಗಳನ್ನು ಹರಿಬಿಡುವ ಮೂಲಕ ಅಭಿಮಾನಿಗಳ ಮನಸ್ಸನ್ನು ಕದಿಯುತ್ತಲೇ ಇರುತ್ತಾರೆ. ಅದರಲ್ಲೂ ತಮ್ಮ ಸಹಜ ಹಾಗೂ ಸಾಂಪ್ರದಾಯಿಕ ಲುಕ್​ನಿಂದಲೇ ಅನುಪಮಾ ಬಹುತೇಕರಿಗೆ ಇಷ್ಟವಾಗಿದ್ದಾರೆ. ಆದರೆ, ಟಾಲಿವುಡ್​ನ ಸೂಪರ್​ ಹಿಟ್​ ಡಿಜೆ ಟಿಲ್ಲು ಸಿನಿಮಾದ ಸೀಕ್ವೇಲ್​ ಟಿಲ್ಲು ಸ್ಕ್ವೇರ್​ನಲ್ಲಿ ಬೋಲ್ಡ್​ ಆಗಿ ಕಾಣಿಸಿಕೊಂಡ ಬಳಿಕ ಅನಪಮಾ ಮೇಲೆ ಕೆಲ ಅಭಿಮಾನಿಗಳು ಅಸಮಾಧಾನಗೊಂಡಿದ್ದಾರೆ.

    ಟಿಲ್ಲು ಸ್ಕ್ವೇರ್​ ಸಿನಿಮಾದಿಂದ ಬಿಡುಗಡೆಯಾಗಿರುವ ಪೋಸ್ಟರ್ ಗಳಲ್ಲಿ ಅನುಪಮಾ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್‌ನಲ್ಲಿ, ಹೊಸ ಅನುಪಮಾ ಲಿಪ್‌ಲಾಕ್ ಸೀನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅನುಪಮಾ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದಾರೆ. ಇದರ ನಡುವೆ ಅನುಪಮಾ ಇತ್ತೀಚೆಗೆ ಮಾರಿಷಸ್​ಗೆ ಭೇಟಿ ನೀಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲೂ ಅನುಪಮಾ ಹಾಟ್​ ಅವತಾರದಲ್ಲಿ ಕಾಣಿಕೊಂಡಿದ್ದು, ಕಾಮೆಂಟ್​ ಬಾಕ್ಸ್​ನಲ್ಲಿ ಅಭಿಮಾನಿಗಳು ಬೇಸರ ಹೊರಹಾಕಿದ್ದಾರೆ.

    ಟಿಲ್ಲು ಸ್ಕ್ವೇರ್​ ಸಿನಿಮಾ ಎಲ್ಲವನ್ನೂ ಬದಲಾಯಿಸಿದೆ. ನಿಮ್ಮಿಂದ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮ್ಮ ಈ ವಿಡಿಯೋ ಬ್ರೇಕಪ್​ಗಿಂತಲೂ ಹೆಚ್ಚು ನೋವುಂಟು ಮಾಡುತ್ತದೆ ಎಂದು ಅಭಿಮಾನಿಗಳ ನೋವನ್ನು ತೋಡಿಕೊಂಡಿದ್ದರೆ.

    ಅಂದಹಾಗೆ ಆಲ್ಫೋನ್ಸ್​ ಪುತ್ರೆನ್​ ನಿರ್ದೇಶನದ ಪ್ರೇಮಂ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಹೆಸರು ಮೊದಲು ಕೇಳಿಬಂದಿತು. ಮೊದಲ ಚಿತ್ರವೇ ಬ್ಲಾಕ್​ಬಸ್ಟರ್​ ಹಿಟ್​ ಆದರೂ ಕೂಡ ಅವರ ಸಿನಿ ಜರ್ನಿಯಲ್ಲಿ ಅಷ್ಟೊಂದು ಯಶಸ್ಸು ಸಿಗಲಿಲ್ಲ. ಸಾಕಷ್ಟು ಸಿನಿಮಾಗಳು ಫ್ಲಾಪ್​ ಆದವು. ತಮಿಳು, ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಮಿಂಚಿರುವ ಅನುಪಮಾ, ಪುನೀತ್​ ರಾಜ್​ಕುಮಾರ್​ ಅಭಿನಯದ ನಟಸಾರ್ವಭೌಮ ಸಿನಿಮಾದಲ್ಲೂ ನಟಿಸುವ ಮೂಲಕ ಅನುಪಮಾ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

    Anupama

    ತಮ್ಮ ಸಹಜ ಸೌಂದರ್ಯದಿಂದಲೇ ಅನುಪಮಾ ಸಾಕಷ್ಟು ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಇದುವರೆಗೂ ಹೆಚ್ಚೇನು ಬೋಲ್ಡ್​ ಪಾತ್ರಗಳಲ್ಲಿ ನಟಿಸದ ಅನುಪಮಾ ಇದೇ ಮೊದಲ ಬಾರಿಗೆ ತುಂಬಾ ಬೋಲ್ಡ್​ ಆಗಿ ನಟಿಸುವ ಮೂಲಕ ಹೊಸ ಅವತಾರದೊಂದಿಗೆ ರೀಎಂಟ್ರಿ ಕೊಟ್ಟಿದ್ದಾರೆ. ಲಿಪ್​ಲಾಕ್​, ತುಂಡುಡುಗೆ ಹಾಗೂ ಸೆಕ್ಸ್ ಡೈಲಾಗ್​ ಸೇರಿದಂತೆ ಹೊಸ ಪ್ರಯತ್ನಕ್ಕೆ ಅನುಪಮಾ ಕೈಹಾಕಿದ್ದು, ಈ ಬಾರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

    ಅಂದಹಾಗೆ ಟಿಲ್ಲು ಸ್ಕ್ವೇರ್​ ಸಿನಿಮಾ ಮಾರ್ಚ್​ 29ರಂದು ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಮಲಿಕ್​ ರಾಮ್​ ನಿರ್ದೇಶನ ಮಾಡಿದ್ದಾರೆ. ಅನುಪಮಾ ಅವರು ಜಯಂ ರವಿ ನಟನೆಯ ಸೈರೆನ್​ ಸಿನಿಮಾದಲ್ಲಿಯೂ ನಟಿಸಿದ್ದು, ಈ ಚಿತ್ರವು ಸಹ ಬಿಡುಗಡೆಗೆ ಸಜ್ಜಾಗಿದೆ. (ಏಜೆನ್ಸೀಸ್​)​

    ಉತ್ತಮ S*x ಸೆಕ್ಸ್​ ಒಂದೊಳ್ಳೆ ಆಹಾರವಿದ್ದಂತೆ! ಅನುಪಮಾ ಡೈಲಾಗ್​ ಕೇಳಿ ಬೆರಗಾದ್ರು ಫ್ಯಾನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts