ಸೈಬರ್​ ವಂಚನೆಗೆ ಮತ್ತೊಂದು ಬಲಿ: ಬ್ಯಾಗ್​ ವ್ಯಾಪಾರಸ್ಥನಿಂದ ಒಂದು ಲಕ್ಷಕ್ಕೂ ಹೆಚ್ಚು ಹಣ ದೋಚಿದ ಸೈಬರ್​ ಕಳ್ಳರು!|Cyber crime

cyber crime
Published on

Cyber crime: ದಿನೇ ದಿನೇ ಹೆಚ್ಚುತ್ತಿರುವ ಸೈಂಬರ್​ ವಂಚನೆ ಪ್ರಕರಣದಲ್ಲಿ 35 ವರ್ಷದ ಬ್ಯಾಗ್​ ವ್ಯಾಪಾರಸ್ಥನೊಬ್ಬ ಮದುವೆ ಆಮಂತ್ರಣ ಪತ್ರಿಕೆ ಎಂದು ವಾಟ್ಸ್​ಆಪ್​ ಲಿಂಕ್​ ಕ್ಲಿಕ್​ ಮಾಡಿ, ಸುಮಾರು 1.62 ಲಕ್ಷ ರುಪಾಯಿ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ.

ಸಂತ್ರಸ್ತ ಇರ್ಫಾನ್ ಅಬ್ದುಲ್ ಮನ್ನನ್ ಫಾರೂಕಿ ಹಣ ಕಳೆದುಕೊಂಡವರು ಎಂದು ತಿಳಿದುಬಂದಿದೆ. ಆನ್​ಲೈನ್​ ವಂಚಕರು ವಾಟ್ಸ್​ಆಪ್​ ಲಿಂಕ್​ ಬಳಸಿ ಮೊಬೈಲ್​ ಹ್ಯಾಕ್​ ಮಾಡಿ, ಅನಧಿಕೃತ ಆನ್​ಲೈನ್​ ಮೂಲಕ ಹಣವನ್ನು ದೋಚಿದ್ದಾರೆ ಎಂದು ವರದಿಯಾಗಿದೆ.

ಪರಿಚಿತರ ವಾಟ್ಸಾಪ್​ನಿಂದ ಬಂದ ಸಂದೇಶ

ಪೊಲೀಸರ ಪ್ರಕಾರ, ಉಮರವಾಡಿ ರಸ್ತೆಯ ಕುರ್ಲಾ ಪ್ರದೇಶದಲ್ಲಿ ವಾಸಿಸುತ್ತಿರುವ ಸಿರಿನ್‌ಬಾಯಿ ಚಾವ್ಲ್‌ನ ಹಾಗೂ ಬ್ಯಾಗ್​ ವ್ಯಾಪಾರಸ್ಥನಾಗಿದ್ದ ಫಾರೂಕಿ ಅವರಿಗೆ ಜುಲೈ 31 ರಂದು ರಾತ್ರಿ ಯಾಹ್ಯಾ ಭಾಯ್​ ಎಂಬುವವರಿಗೆ ಪರಿಚಿತ ವ್ಯಕ್ತಿಯ ವಾಟ್ಸ್​ಆಪ್​​ನಿಂದ ಕಳುಹಿಸಲಾದ ಸಂದೇಶದಲ್ಲಿ "Wedding Invitation.apk" ಎಂಬ ಲಿಂಕ್​ ಇತ್ತು ಎನ್ನಲಾಗಿದೆ.

ಲಿಂಕ್ ಕ್ಲಿಕ್ಕಿಸಿದ ನಂತರ ಮೊಬೈಲ್​ನಿಂದ ಅಸಮರ್ಪಕ ಕಾರ್ಯ

ಫರೂಕಿ ವಾಟ್ಸಾಪ್​ನಲ್ಲಿ ಕಳುಹಿಸಿದ ಲಿಂಕ್​ನನ್ನು ಕ್ಲಿಕ್​ ಮಾಡಿದ ತಕ್ಷಣ ಆತನ ಮೊಬೈಲ್​ ಸರಿಯಾಗಿ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಾಗೇ ಮುಂದಿನ ಮೂರು ದಿನಗಳು ಸಹ ಹಾಗೆ ಮಾಡಲಾರಂಭಿಸಿತು. ಇನ್ನು ತನ್ನ ಮೊಬೈಲ್​ನ್ನು ಸೋದರಳಿಯ ಉಮರ್​ಗೆ ತೋರಿಸಿದನು.ಆಗ ಉಮರ್​ ಫರೂಕಿ ಫೋನ್​ನಲ್ಲಿ ಸದ್ದಿಲ್ಲದೆ ಒಂದು ಆ್ಯಪ್​ ಡೌನ್​ಲೋಡ್​ ಆಗಿರುವುದನ್ನು ಕಂಡುಹಿಡಿದಿದ್ದಾನೆ.

ಆಗಸ್ಟ್ 4ರಂದು ಫರೂಕಿ ಅವರ ಮೊಬೈಲ್​ಗೆ ಜಿಯೋ ಮಾರ್ಟ್​, ನವಿ, ಹಾಗೂ ಅಕರ ಎಂಬ ಅಪರಿಚಿತ ಮೂಲಗಳಿಂದ ಸಂದೇಶವನ್ನು ಪಡೆದಿದ್ದು, ಅದನ್ನು ಮೊದಲು ತಿರಸ್ಕರಿಸಿದ್ದಾರೆ. ನಂತರ ಆತನ ಇಂಡಿಯನ್​ ಬ್ಯಾಂಕ್ ಖಾತೆಯಿಂದ 62,500ರೂ ಗಳು ಬೇರೆ ಅಕೌಂಟ್​ಗೆ ಜಮಾ ಆಗಿದ್ದನ್ನು ಕಂಡು ಬ್ಯಾಂಕ್​ಗೆ ಹೋಗಿ ವಿಚಾರಿಸಿದಾಗ ಅವರ ಖಾತೆಯಲ್ಲಿದ್ದ 1 ಲಕ್ಷ ರೂಪಾಯಿಗಳನ್ನು ಬೇರೆ ಅಕೌಂಟ್​ಗಳಿಗೆ ಡೆಬಿಟ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಫೋನ್​ ಹ್ಯಾಕ್​ ಆಗಿರುವುದನ್ನು ಒಪ್ಪಿಕೊಂಡ ಸ್ನೇಹಿತ

ಫರೂಕಿ ಅವರಿಗೆ ಲಿಂಕ್​ ಕಳುಹಿಸಿದ ವ್ಯಕ್ತಿ ಯಾಹ್ಯಾ ಭಾಯ್​ ಅವರನ್ನು ಪ್ರಶ್ನಿಸಿದಾಗ ಅವರ ಮೊಬೈಲ್​​ ಹ್ಯಾಕ್​ ಆಗಿದ್ದು, 2 ದಿನಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಫರೂಕಿ ತಾನು ಮೋಸ ಹೋಗಿರುವುದನ್ನು ಕಂಡುಕೊಂಡಿದ್ದು, ಸೈಬರ್​ ಅಪರಾಧ ಸಹಾಯವಾಣಿಗೆ ವರದಿ ಮಾಡಿದ್ದು, ನಾಗಪಾಡಾ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದೂರು ದಾಖಲಿಸಿದ್ದಾರೆ.

ಮಾಹಿತಿಯ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಮತ್ತು ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net