

ಚಾಮರಾಜನಗರ: ಹಲವು ದನಕರುಗಳನ್ನು ತಿಂದು ಹಾಕಿದ್ದ ಚಿರತೆ ಕೊನೆಗೂ ಸೆರೆಯಾಗಿದ್ದು, ಇದೀಗ ಗ್ರಾಮಸ್ಥರು ನಿರಾಳರಾಗಿದ್ದಾರೆ.
ಗುಂಡ್ಲುಪೇಟೆ ತಾಲೂಕಿನ ಶಿವಪುರ ಶಿವಪುರ ಗ್ರಾಮದ ಮಹೇಶ್ ಎಂಬುವವರ ಜಮೀನೊಂದರಲ್ಲಿ ಬೋನು ಇಡಲಾಗಿತ್ತು. ಕಳೆದ ಒಂದು ತಿಂಗಳ ಹಿಂದೆ ಇಟ್ಟಿದ್ದ ಬಲೆಯಲ್ಲೂ ಚಿರತೆ ಸೆರೆಯಾಗಿತ್ತು. ಇದೀಗ ಮತ್ತೊಂದು ಚಿರತೆ ಸೆರೆ ಸಿಕ್ಕಿದೆ.
ಗ್ರಾಮಕ್ಕೆ ಆಗಮಿಸುತ್ತಿದ್ದ ಚಿರತೆ ದನಕರುಗಳನ್ನು ತಿಂದುಹಾಕುತ್ತಿತ್ತು. ಇದರಿಂದ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದರು. ಗ್ರಾಮಸ್ಥರು ನೀಡಿದ ದೂರಿನ ಮೇಲೆ ಅರಣ್ಯಾಧಿಕಾರಿಗಳು ಇದೇ ಜಾಗದಲ್ಲಿ ಮತ್ತೊಂದು ಬಲೆ ಹಾಕಿದ್ದರು.ಸದ್ಯ ಚಿರತೆಯನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ್ದು, ಗ್ರಾಮಸ್ಥರು ಮಾತ್ರ ನಿಟ್ಟುಸಿರುಬಿಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್)