More

    ಈ ಅಮೂಲ್ಯವಾದ ವಜ್ರವನ್ನು ಆತ್ಮಗಳು ಕಾಯುತ್ತವಂತೆ …

    ಬೆಂಗಳೂರು: ಈಗಾಗಲೇ ಆತ್ಮಗಳ ಸುತ್ತ ಹಲವು ಚಿತ್ರಗಳು ಕನ್ನಡದಲ್ಲಿ ಬಿಡುಗಡೆಯಾಗಿವೆ. ಈಗ ಆತ್ಮದ ಕುರಿತಾದ ಇನ್ನೊಂದು ಚಿತ್ರ ಬಿಡುಗಡೆಗೆ ಸಿದ್ಧವಾಗುತ್ತಿದೆ. ಅದೇ ‘ಅಲೈಕ್ಯಾ’. ಈ ಆತ್ಮದ ವಿಶೇಷತೆ ಏನು ಗೊತ್ತಾ? ಇದು ವಜ್ರವನ್ನು ಕಾಯುತ್ತದಂತೆ.

    ಇದನ್ನೂ ಓದಿ: ಮುಂದಿನ ವರ್ಷದ ಅತೀ ನಿರೀಕ್ಷಿತ ಚಿತ್ರಗಳ್ಯಾವುವು? ಇಲ್ಲಿದೆ ಪಟ್ಟಿ …

    ಹಿತೇಶ್ ಮೂವೀಸ್ ಲಾಂಛನದಲ್ಲಿ ಎಂ.ಭೂಪತಿ ನಿರ್ಮಿಸುತ್ತಿರುವ ಹಾರರ್ ಚಿತ್ರ ‘ಅಲೈಕ್ಯಾ’. ಈಗಾಗಲೇ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸ ಮುಕ್ತಾಯದ ಹಂತದಲ್ಲಿದೆ. ಈ ಚಿತ್ರವನ್ನು ಸಾತ್ವಿಕ್ ಎಂ.ಭೂಪತಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    ಒಂದಿಷ್ಟು ಸ್ನೇಹಿತರು ವೀಕೆಂಡ್ ಕಳೆಯಲು ಜಾಲಿ ಟ್ರಿಪ್​ಗೆ ಹೋಗುತ್ತಾರೆ. ಗೆಸ್ಟ್ ಹೌಸ್​ವೊಂದಕ್ಕೆ ತೆರಳಿ ಅಲ್ಲಿ ತಂಗುತ್ತಾರೆ. ಆ ಅತಿಥಿ ಗೃಹದಲ್ಲಿ ಆತ್ಮಗಳಿರುವುದು ತಿಳಿದುಬರುತ್ತದೆ. ಆಗ ಅವರು ಅಲ್ಲಿಂದ ತಪ್ಪಿಸಿಕೊಂಡು ಹೊರಹೋಗಲು ಸಾಕಷ್ಟು ಪ್ರಯತ್ನ ನಡೆಸಿ ವಿಫಲರಾಗುತ್ತಾರೆ. ಅ ಮನೆಯಲ್ಲಿ ಒಂದು ಅಮೂಲ್ಯವಾದ ವಜ್ರವಿದ್ದು, ಅದಕ್ಕೆ ಆತ್ಮವೊಂದು ಕಾವಲಿರುತ್ತದೆ ಕಾವಲಾಗಿರುತ್ತವೆ. ಅದರಲ್ಲಿ ಒಂದು ಅತ್ಮ ಮಾತ್ರ ಇವರನ್ನು ಅಲ್ಲಿಂದ ಹೊರ ಕಳಿಸಲು ನೋಡಿದರೆ, ಮತ್ತೊಂದು ಆತ್ಮ ಅವರನ್ನು ಅಲ್ಕೇ ಇರುವ ಹಾಗೆ ನೋಡಿಕೊಳ್ಳುತ್ತದೆ. ಈ ಆತ್ಮದಿಂದ ಅವರು ಹೇಗೆ ವಜ್ರವನ್ನು ವಶಪಡಿಸಿಕೊಳ್ಳುತ್ತಾರೆ ಎಂಬುದೇ ಈ ಚಿತ್ರದ ಕಥೆ.

    ಬೆಂಗಳೂರು, ಚಿಕ್ಕಮಗಳೂರು, ಮೇಲುಕೋಟೆ, ಸುತ್ತಮುತ್ತ ಈ ಹಾರರ್ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ, ಲವ್, ಹಾರರ್, ಸಸ್ಪೆನ್ಸ್ ಅಂಶಗಳಿರುವ ‘ಅಲೈಕ್ಯಾ’ ಚಿತ್ರಕ್ಕೆ ಸಾಯಿ ಸೋಮೇಶ್ ಅವರ ಸಂಗೀತ, ಬುಗುಡೆ ವೀರೇಶ್ ಅವರ ಛಾಯಾಗ್ರಹಣವಿದೆ.

    ಇದನ್ನೂ ಓದಿ: ಮೂರು ಸೆಕೆಂಡ್​ಗಳಲ್ಲಿ ‘ಸರ್ಕಸ್​’ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡರಂತೆ ರಣವೀರ್​ ಸಿಂಗ್​

    ‘ಅಲೈಕ್ಯಾ’ ಚಿತ್ರದಲ್ಲಿ ದರ್ಶಿನಿ ಒಡೆಯರ್​, ನಿಸರ್ಗ, ಮನ್ವೀರ್ ಚವ್ಹಾನ್, ವಿವೇಕ ಚಕ್ರವರ್ತಿ, ವಜ್ರ, ಕಾವ್ಯ ಪ್ರಕಾಶ್, ಜಾಹ್ನವಿ ಮುಂತಾದವರು ಅಭಿನಯಿಸಿದ್ದಾರೆ.

    ಕನ್ನಡ ಚಿತ್ರರಂಗಕ್ಕೆ ಮತ್ತೊಮ್ಮೆ ಎದುರಾಗಿದೆ ಕರೋನಾ ಭೀತಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts