ಮಂಗಳೂರಿನಲ್ಲಿ ಕರೊನಾ ವೈರಸ್​ಗೆ ಎರಡನೇ ಸಾವು; ಇಂದು ಮೃತಪಟ್ಟ ವೃದ್ಧೆಗೆ ಪಾರ್ಶ್ವವಾಯುವೂ ಇತ್ತು

CORONA
Published on

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ವೈರಸ್​ನಿಂದ ಎರಡನೇ ಸಾವಾಗಿದೆ. 76 ವರ್ಷದ ವೃದ್ಧೆ ಕರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸಾವಿನ ಸಂಖ್ಯೆ 18ಕ್ಕೆ ಏರಿದೆ.

ಏ.19ರಂದು ಮಹಿಳೆಯೋರ್ವರು ಕರೊನಾಕ್ಕೆ ಬಲಿಯಾಗಿದ್ದರು. ಆ ಮಹಿಳೆಯ ಅತ್ತೆ ಇವರು ಎಂದು ತಿಳಿದುಬಂದಿದೆ. ಇವರು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದರು. ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮಂಗಳೂರಿನ ಕೊವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net