ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು! ಮಾಜಿ ಸಚಿವರಿಗೆ ಸಂಕಷ್ಟದ ಮೇಲೋಂದು ಸಂಕಷ್ಟ ಎದುರಾಯ್ತು...

Ramesh Jarakiholi vvani
Ramesh Jarakiholi
Published on

ಬೆಂಗಳೂರು: ಸಿಡಿ ಕೇಸ್​ ಸಂಬಂಧ ರಮೇಶ್​ ಜಾರಕಿಹೊಳಿ ವಿರುದ್ಧ ಕಬ್ಬನ್​ ಪಾರ್ಕ್​ ಪೊಲೀಸ್​ ಠಾಣೆಗೆ ಇಂದು(ಶನಿವಾರ) ಮತ್ತೊಂದು ದೂರು ಬಂದಿದೆ.

ನಿನ್ನೆ ವಿಡಿಯೋ ಮೂಲಕ ದಿಢೀರ್ ಕಾಣಿಸಿಕೊಂಡಿದ್ದ ಸಿಡಿ ಲೇಡಿ, ತನ್ನ ವಕೀಲರ ಮೂಲಕ ರಮೇಶ್​ ವಿರುದ್ಧ ಎಫ್​ಐಆರ್ ದಾಖಲಿಸಿದ್ದರು. ಕೆಲಸ ಕೊಡಿಸುವ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ. ಜೀವ ಬೆದರಿಕೆ ಇದೆ ಎಂದು ​ದೂರಿನಲ್ಲಿ ವಿವರಿಸಿದ್ದಳು. ನಿನ್ನೆ ದಾಖಲಾದ ಕೇಸ್​ನಲ್ಲಿ ರಮೇಶ್​ ಬಂಧನ ಭೀತಿಯಲ್ಲಿರುವಾಗಲೇ ಅವರ ವಿರುದ್ಧ ಮತ್ತೊಂದು ದೂರು ಬಂದಿದೆ. ಇದನ್ನೂ ಓದಿರಿ ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ಸಿಡಿ ಕೇಸ್​ನ ಯುವತಿ ಇಂದು ಬಿಡುಗಡೆ ಮಾಡಿದ ನಾಲ್ಕನೇ ವಿಡಿಯೋದಲ್ಲೂ ತನಗೆ ಜೀವ ಬೆದರಿಕೆ ಇದೆ ಎಂದು ಅಳಲುತೋಡಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಇಂದು ಮಧ್ಯಾಹ್ನ ತೆರಳಿದ ಯುವತಿ ಪರ ವಕೀಲ ಜಗದೀಶ್​, ರಮೇಶ್​ ವಿರುದ್ಧ ಜಿವ ಬೆದರಿಕೆ ಕೇಸ್​ ದಾಖಲಿಸಿದ್ದಾರೆ.

ಎಸ್ಐಟಿ ವಿಚಾರಣೆ ಬಳಿಕ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಅಶ ಕೊಡುವಂತೆ ಕೋರಿ ವಕೀಲ ಜಗದೀಶ್, ಆಡುಗೋಡಿಯ ಟೆಕ್ನಿಕಲ್ ಸೆಲ್​ನತ್ತ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net