ನಟಿ ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ಅತ್ಯಾಚಾರ ಆರೋಪ; ಇನ್ನೊಬ್ಬಳು ಮಹಿಳೆಯಿಂದ ದೂರು ದಾಖಲು

RakhiSawanth
Published on

ಮೈಸೂರು: ನಟಿ ರಾಖಿ ಸಾವಂತ್ ಪತಿ ಮೈಸೂರಿನ ಆದಿಲ್ ಖಾನ್​ ದುರಾನಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ರಾಖಿ ನೀಡಿದ್ದ ದೂರಿನ ಮೇರೆಗೆ ನ್ಯಾಯಾಂಗ ಬಂಧನದಲ್ಲಿ ಇರುವ ಆದಿಲ್ ವಿರುದ್ಧ ಈಗ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ.

ಶಕಿಬಾವೊಸ ಎಂಬಾಕೆ ಈ ದೂರು ನೀಡಿದ್ದಾಳೆ. ಇರಾನಿ ಮೂಲದ ಈಕೆ ಮೈಸೂರಿನ ಯಾದವಗಿರಿಯಲ್ಲಿ ನೆಲೆಸಿದ್ದು, ಆದಿಲ್​ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬುದಾಗಿ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ನಿನ್ನೆ ದೂರು ನೀಡಿದ್ದಾಳೆ. ಯಾದವಗಿರಿಯ ಅಪಾರ್ಟ್​​ಮೆಂಟ್​ವೊಂದರಲ್ಲಿ ತನ್ನ ಮೇಲೆ 2018ರಿಂದ 2022ರ ವರೆಗೆ ಅತ್ಯಾಚಾರ ನಡೆದಿದೆ ಎಂದು ಈಕೆ ದೂರು ನೀಡಿದ್ದಾಳೆ.

ರಾಖಿ ಸಾವಂತ್ ಈಗಾಗಲೇ ಪತಿ ವಿರುದ್ಧ ವಂಚನೆ ಆರೋಪ ಮಾಡಿ ದೂರು ನೀಡಿದ್ದು, ಈ ಪ್ರಕರಣದ ಹಿನ್ನೆಲೆಯಲ್ಲಿ ಆದಿಲ್ ನ್ಯಾಯಾಂಗ ಬಂಧನದಲ್ಲಿದ್ದು, ಈಗ ಅತ್ಯಾಚಾರ ಪ್ರಕರಣವೂ ದಾಖಲಾಗಿದೆ. ಈ ಮೂಲಕ ಪ್ರಕರಣ ಮತ್ತಷ್ಟು ಕಗ್ಗಂಟಾಗಿದ್ದು, ಮುಂದೆ ಇನ್ಯಾವ ತಿರುವು ಪಡೆಯಲಿದೆ ಎಂಬ ಕುತೂಹಲವನ್ನೂ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net