

ಮೂಲ್ಕಿ: ಶಿಮಂತೂರು ಮತ್ತು ಎಳತ್ತೂರು ಗ್ರಾಮಸ್ಥರ ರಾಜನ್ ದೈವಗಳಾದ ಮಹಿಷಂದಾಯ ಮತ್ತು ಶ್ರೀ ಧರ್ಮ ಜಾರಂದಾಯ ಹಾಗೂ ಬಂಟ ದೈವಗಳ ವಾರ್ಷಿಕ ನೇಮ ತಕ್ಕಣಪಾದೆ ದೈವಸ್ಥಾನದಲ್ಲಿ ಗುರುವಾರ ನಡೆಯಿತು.
ಸಂಜೆ ಶಿಮಂತೂರು ಮಜಲಗುತ್ತು ಮನೆಯಿಂದ ತಕ್ಕಣಪಾದೆ ದೈವಸ್ಥಾನಕ್ಕೆ ಭಂಡಾರ ಹೊರಟು ರಾತ್ರಿ ಅನ್ನ ಸಂತರ್ಪಣೆ, ಮಹಿಷಂದಾಯ ದೈವದ ನೇಮ, ಶ್ರೀ ಜಾರಂದಾಯ ಹಾಗೂ ಬಂಟ ದೈವಗಳಿಗೆ ಗಗ್ಗರ ಸೇವೆ, ನೇಮ ಹಾಗೂ ಶ್ರೀ ಕೋರ‌್ದಬ್ಬು ಮತ್ತು ಜಾರಂದಾಯ ದೈವಗಳ ಭೇಟಿ ನಡೆಯಿತು.
ವಿಷ್ಣುಮೂರ್ತಿ ಭಟ್ ಶಿಮಂತೂರು, ಕಾಂಗ್ರೆಸ್ ನಾಯಕ ಮಿಥುನ್ ರೈ, ಶಿಮಂತೂರು ಶ್ರೀ ಜನಾರ್ದನ ದೇವಸ್ಥಾನ ಆಡಳಿತ ಮೊಕ್ತೇಸರ ಉದಯ ಕುಮಾರ್ ಶೆಟ್ಟಿ ಪ್ರಸಾದ ಸ್ವೀಕರಿಸಿದರು.
ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ ಯಾನೆ ಶಂಕರ್ ರೈ ಎಳತ್ತೂರುಗುತ್ತು, ಬಾಬಾ ರಂಜನ್ ಶೆಟ್ಟಿ ಮಜಲಗುತ್ತು, ಪಡುಮನೆ ಶ್ರೀಧರ್ ಶೆಟ್ಟಿ, ಮಧ್ಯಸ್ಥ ಕಿಶೋರ್ ಶೆಟ್ಟಿ, ಗಂಗಾಧರ ಶೆಟ್ಟಿ ಬರ್ಕೆತೋಟ, ಉದಯ ಕುಮಾರ್ ಶೆಟ್ಟಿ ಆಧಿಧನ್, ದಯಾನಂದ ಮಟ್ಟು, ಉತ್ತಮ್ ಪೂಜಾರಿ ಮೈಲೊಟ್ಟು, ಸುಕೇಶ್ ಶೆಟ್ಟಿ, ದಿವಾಕರ ಶೆಟ್ಟಿ ಮಜಲಗುತ್ತು ಉಪಸ್ಥಿತರಿದ್ದರು.