

ಕಡಬ: ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಭಾರತ ದಾಪುಗಾಲಿಡುತ್ತಿರುವ ಸಂದರ್ಭ ರಾಷ್ಟ್ರೀಯ ಚಿಂತನೆಯ ಪರಿಕಲ್ಪನೆಯ ಶಿಕ್ಷಣದ ಅವಶ್ಯಕತೆ ಇದೆ. ಆದ್ದರಿಂದ ಶಿಕ್ಷಣ ಸಂಸ್ಥೆಗಳೂ ರಾಷ್ಟ್ರೀಯ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಭಾದ ನಿರ್ದೇಶಕ ಕೃಷ್ಣ ಶೆಟ್ಟಿ ಕಡಬ ಹೇಳಿದರು.
ಶ್ರೀ ರಾಮಕುಂಜೇಶ್ವರ ಕಾಲೇಜಿನ ಸಭಾಂಗಣದಲ್ಲಿ ನಡೆದ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ವಾತನಾಡಿದರು.
ಪತ್ರಕರ್ತ ನಾಗರಾಜ ಎನ್.ಕೆ., ಸಂಸ್ಥೆಯ ಹಳೇ ವಿದ್ಯಾರ್ಥಿ, ಸುಳ್ಯದ ವಕೀಲ ಪ್ರದೀಪ್ ಕೆ.ಎಲ್, ಇನ್ನೋರ್ವ ಹಳೇ ವಿದ್ಯಾರ್ಥಿ, ನಿವೃತ್ತ ಸಬ್ಇನ್ಸ್ಪೆಕ್ಟರ್ ಕಾಸಿಂ ಕೆ, ಹೊಸಮಠ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂದ ಸಿಇಒ ಸೋಮಸುಂದರ ಶೆಟ್ಟಿ, ಪ್ರಾಂಶುಪಾಲ ಚಂದ್ರಶೇಖರ ಕೆ, ಮುಖ್ಯಶಿಕ್ಷಕ ಸತೀಶ್ ಭಟ್ ವಾತನಾಡಿದರು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಸದಸ್ಯ ಲಕ್ಷ್ಮೀನಾರಾಯಣ ರಾವ್ ಆತೂರು, ಶಿಕ್ಷಕ-ರಕ್ಷಕ ಸಂದ ಅಧ್ಯಕ್ಷ ಉಮೇಶ್, ಹಳೇ ವಿದ್ಯಾರ್ಥಿ ಸಂದ ಅಧ್ಯಕ್ಷ ಅಶೋಕ್ ಕೊಲ, ವಿದ್ಯಾರ್ಥಿ ನಾಯಕ ಅನಿರುದ್ಧ್ ಉಪಸ್ಥಿತರಿದ್ದರು.
ಶಿಕ್ಷಕ ವೆಂಕಟೇಶ್ ದಾಮ್ಲೆ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ರಾಧಾಕೃಷ್ಣ ಕೆ.ಎಸ್. ಪ್ರಸ್ತಾವಿಸಿದರು. ಶಾಲಾ ಮಂತ್ರಿಮಂಡಲದ ಕಾರ್ಯದರ್ಶಿ ಕೀರ್ತನಾ, ವಿದ್ಯಾರ್ಥಿ ಸಂದ ನಾಯಕ ಪೃಥ್ವಿರಾಜ್ ವಿದ್ಯಾರ್ಥಿ ಸಂಘದ ವರದಿ ವಾಚಿಸಿದರು. ಶಿಕ್ಷಕಿ ಸಂಧ್ಯಾ ಪಿ.ಕೆ.ನಿರೂಪಿಸಿದರು. ಶಿಕ್ಷಕ ದಿನೇಶ್ ಬಿ.ವಂದಿಸಿದರು.
ಕಿರುಚಿತ್ರಬಿಡುಗಡೆ
ಪಿ.ಯು.ಸಿ., ಹೈಸ್ಕೂಲ್ನಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆಯಲ್ಲಿ ಸಾಧನೆ ವಾಡಿದ ವಿದ್ಯಾರ್ಥಿಗಳಿಗೆ ಬಹುವಾನ ನೀಡಿ ಗೌರವಿಸಲಾಯಿತು. ದತ್ತಿನಿಧಿ ನಗದು ಬಹುವಾನ ನೀಡಲಾಯಿತು. ಕ್ರೀಡಾಕೂಟ ವಿಜೇತರಿಗೆ ಬಹುವಾನ ವಿತರಿಸಲಾಯಿತು. ಪ್ರೌಢಶಾಲಾ ವಿದ್ಯಾರ್ಥಿಗಳಾದ ನಿಶಾನ್ ಹಾಗೂ ಧನುಷ್ ರ್ವಾಣ ವಾಡಿದ ಶಾಲೆಯ ಶೈಕ್ಷಣಿಕ ಚಟುವಟಿಕೆ ಕುರಿತ ಕಿರುಚಿತ್ರ ಬಿಡುಗಡೆ ವಾಡಲಾಯಿತು. ವಿದ್ಯಾರ್ಥಿಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ವಿದ್ಯಾರ್ಥಿ ಪ್ರೀತಮ್ ಅವರನ್ನು ಉತ್ತಮ ಸ್ವಯಂಸೇವಕನ ನೆಲೆಯಲ್ಲಿ ಗೌರವಿಸಲಾಯಿತು.