

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು ವತಿಯಿಂದ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಬಲ್ಯ ಕಾರ್ಯಕ್ಷೇತ್ರದ ಮಂಜುಶ್ರೀ ಹಾಗೂ ನವಜ್ಯೋತಿ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ, ದೇರಾಜೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕುಟ್ರುಪ್ಪಾಡಿ ಗ್ರಾ.ಪಂ ಅಧ್ಯಕ್ಷೆ ಸುಮನ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ದೇವಕಿ ಎಸ್.ಕೂಡೂರು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಎಸ್ಡಿಎಂಸಿ ಅಧ್ಯಕ್ಷ ಸದಾಶಿವ ಗೌಡ, ನವಜ್ಯೋತಿ ಜ್ಞಾನವಿಕಾಸ ಕೇಂದ್ರದ ಸದಸ್ಯೆ ಅನಿತಾ ಉಪಸ್ಥಿತರಿದ್ದರು. ತಾಲೂಕು ಸಮನ್ವಯಾಧಿಕಾರಿ ಚೇತನಾ ಪ್ರಸ್ತಾಪಿಸಿದರು. ಕೇಂದ್ರದ ಸದಸ್ಯೆ ಭಾಗೀರಥಿ ಸ್ವಾಗತಿಸಿದರು. ಸಂಯೋಜಕಿ ಲಲಿತಾ ವಂದಿಸಿದರು. ಸೇವಾ ಪ್ರತಿನಿಧಿ ದುರ್ಗಾವತಿ ಕಾರ್ಯಕ್ರಮ ನಿರೂಪಿಸಿದರು.