ಕಾರವಾರ: ಅಂಕೋಲಾದಲ್ಲಿ ನೌಕಾಸೇನೆಯ ಜತೆ ನಾಗರಿಕ ವಿಮಾನ ನಿಲ್ದಾಣ (Airport) ಮಾಡಲು ರಾಜ್ಯ ಸರ್ಕಾರ ಇನ್ನೂ 70 ಕೋಟಿ ರೂ. ಬಿಡುಗಡೆ ಮಾಡಿಲ್ಲ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಎರಡು ದಿನಗಳ ಹಿಂದೆ ಆರೋಪ ಮಾಡಿದ್ದರು. ತಾಂತ್ರಿಕ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಆದರೆ, ಹಣ ಬಿಡುಗಡೆಗೆ ರಾಜ್ಯ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆಕ್ಷೇಪಿಸಿದ್ದರು. ಅದಾಗಿ ಎರಡೇ ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಕಾರ್ಯ ಚುರುಕು ಮಾಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸೋಮವಾರ ಭೂ ಸ್ವಾಧೀನ ಪರಿಹಾರ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ನೌಕಾನೆಲೆಗೆ ಭೂ ಸ್ವಾಧೀನವಾದ ಭೂಮಿಯ ಮಾಲೀಕರಿಬ್ಬರಿಗೆ ಪರಿಹಾರದ ಆದೇಶವನ್ನು ವಿತರಿಸಿದರು. ನಂತರ ಮಾತನಾಡಿದ ಅವರು, ಇದುವರೆಗೆ ಶೇ.50 ರಷ್ಟು ಭೂ ಪರಿಹಾರವನ್ನು ಸರ್ಕಾರ ಬಿಡುಗಡೆ ಮಾಡಿದೆ. ಬಾಕಿ ಹಣವನ್ನೂ ಶೀಘ್ರ ಬಿಡುಗಡೆ ಮಾಡಲಿದ್ದು, ಇನ್ನು 1 ತಿಂಗಳಲ್ಲಿ ಭೂ ಸ್ವಾಧೀನ ಪ್ರಕ್ರಿಯೆಯನ್ನು ಮುಗಿಸಿ ನೌಕಾಸೇನೆಗೆ ಜಮೀನು ಹಸ್ತಾಂತರ ಮಾಡಲಾಗುವುದು. ನಿರಾಶ್ರಿತರಾದವರಿಗೆ 60*90 ಸೈಟ್ ಕೂಡ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಎಲ್ಲಿ Airport..
ಕದಂಬ ನೌಕಾನೆಲೆಯ ಎರಡನೇ ಹಂತದ ವಿಸ್ತರಣೆಯ ಭಾಗವಾಗಿ ಅಂಕೋಲಾ ಹಲಗೇರಿಯಲ್ಲಿ ವಿಮಾನ ನಿಲ್ದಾಣ Airport ಕಾಮಗಾರಿ ನಡೆಯುತ್ತಿದೆ. ಅದರ ಜತೆಗೆ ನಾಗರಿಕ ವಿಮಾನ ನಿಲ್ದಾಣವನ್ನೂ ಫ್ರಾರಂಭಿಸಲು ರಕ್ಷಣಾ ಇಲಾಖೆ ಒಪ್ಪಿದೆ. ನೌಕಾಸೇನೆಯ ವಿಮಾನಗಳಿಗಾಗಿ ಸುಮಾರು 1 ಕಿಮೀ ರನ್ ವೇ ನಿರ್ಮಿಸಲಾಗುತ್ತಿದ್ದು, ಅದರ ಜತೆಗೆ ನಾಗರಿಕ ವಿಮಾನಯಾನಕ್ಕಾಗಿ 770 ಮೀಟರ್ ಹೆಚ್ಚುವರಿ ರನ್ ವೇ ಮಾಡಬೇಕಾಗಿದೆ. ಅದಕ್ಕಾಗಿ ಅಂಕೋಲಾದ ಬೇಲೆಕೇರಿ, ಬಾವಿಕೇರಿ, ಹಲಗೇರಿ ಮೂರು ಗ್ರಾಮಗಳಲ್ಲಿ ಸುಮಾರು 97 ಎಕರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಸಂಬಂಧ ಮೂರು ವರ್ಷದ ಹಿಂದೆಯೇ ಅಂತಿಮ ನೋಟಿಫಿಕೇಶನ್ ಹೊರಡಿಸಲಾಗಿತ್ತು. ಆದರೆ, ಜನ ಹೆಚ್ಚಿನ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದರು. ಈಗ ಸರ್ಕಾರ 11 ಕೋಟಿ ರೂ. ಹೆಚ್ಚುವರಿ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಭೂ ಸ್ವಾಧೀನ ಸಂಬಂಧ ಇರುವ ಗೊಂದಲಗಳು ಮುಕ್ತಾಯವಾಗಿದ್ದು, ಪರಿಹಾರ ನೀಡುವ ಪ್ರಕ್ರಿಯೆಗಳು ಆರಂಭವಾಗಿರಲಿಲ್ಲ.
ಹೊಂಡ ಮುಚ್ಚುವ ಕಾಮಗಾರಿ ಶೀಘ್ರ
ಈ ಬಾರಿ ಮಳೆ ಜಾಸ್ತಿಯಾಗಿದ್ದರಿಂದ ರಸ್ತೆಯಲ್ಲಿ ಸಾಕಷ್ಟು ಹೊಂಡ ಬಿದ್ದಿದೆ. ಜಿಪಂ, ಪಿಡಬ್ಲುಡಿ, ಎನ್‌ಎಚ್ ಸೇರಿ ಎಲ್ಲ ರಸ್ತೆಗಳ ಹೊಂಡ ಮುಚ್ಚಲು ಹಣ ಬಿಡುಗಡೆಯಾಗಿದೆ. ಶೀಘ್ರದಲ್ಲಿ ಹೊಂಡ ಮುಚ್ಚುವ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ನ.21 ರಂದು ಸಿಎಂ ಮುರ್ಡೇಶ್ವರಕ್ಕೆ
ನವೆಂಬರ್ .21 ಹಾಗೂ 22 ರಂದು ರಾಜ್ಯ ಮಟ್ಟದ ಮೀನುಗಾರರ ದಿನಾಚರಣೆಯನ್ನು ಮುರ್ಡೇಶ್ವರ ಗಾಲ್ಪ್ ಕೋರ್ಟ್ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಒಳನಾಡು ಹಾಗೂ ಸಮುದ್ರ ಮೀನುಗಾರರನ್ನು ಸೇರಿಸಿಕೊಂಡು ಅವರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡುವ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಲಿದ್ದಾರೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮಾಹಿತಿ ನೀಡಿದರು.
ನವೆಂಬರ್ .21 ಹಾಗೂ 22 ರಂದು ರಾಜ್ಯ ಮಟ್ಟದ ಮೀನುಗಾರರ ದಿನಾಚರಣೆಯನ್ನು ಮುರ್ಡೇಶ್ವರ ಗಾಲ್ಪ್ ಕೋರ್ಟ್ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಒಳನಾಡು ಹಾಗೂ ಸಮುದ್ರ ಮೀನುಗಾರರನ್ನು ಸೇರಿಸಿಕೊಂಡು ಅವರಿಗೆ ಇರುವ ಸೌಲಭ್ಯಗಳ ಬಗ್ಗೆ ಮಾಹಿತಿ ಕೊಡುವ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಆಗಮಿಸಲಿದ್ದಾರೆ ಎಂದು ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಮಾಹಿತಿ ನೀಡಿದರು.
ವೆಂಕಟೇಶನೇ ಕಾಪಾಡಲಿ ಈ ಸೇತುವೆ!https://www.vijayavani.net/let-venkatesh-protect-this-bridge