ಹಾಲಿವುಡ್​ನಲ್ಲಿ ಬೆಂಗಳೂರಿನ ಪ್ರತಿಭೆ ಐಸಾಕ್ ಬಾಲಚಂದ್ರನ್

Balachandran
Published on

ಅಮೇರಿಕಾದ ಪ್ರತಿಷ್ಠಿತ ಸಿನಿಮಾ ಶಾಲೆಗಳಲ್ಲಿ, ಬೆಂಗಳೂರಿನ ಹಲವು ಪ್ರತಿಭಾವಂತರು ಸಿನಿಮಾ ತರಬೇತಿ ಪಡೆಯುತ್ತಿದ್ದಾರೆ. ನಂತರ ಹಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ಐಸಾಕ್ ಬಾಲಚಂದ್ರನ್ ಸಹ ಒಬ್ಬರು. ಬೆಂಗಳೂರು ಮೂಲದ ಐಸಾಕ್ ಸದ್ಯ ನ್ಯೂಯಾರ್ಕ್​ನ ಬ್ರೂಕ್ಲಿನ್​ನಲ್ಲಿದ್ದು, ಹಾಲಿವುಡ್ ಚಿತ್ರಗಳಿಗೆ ಸಂಕಲನಕಾರ ಮತ್ತು ಸೌಂಡ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಂಕಲನ ಮತ್ತು ಸೌಂಡ್ ಡಿಸೈನ್ ಕಲಿಯುವುದಕ್ಕೆ ನಾಲ್ಕು ವರ್ಷಗಳ ಹಿಂದೆ ನಾರ್ಥ್ ಕ್ಯಾರೋಲಿನಾಗೆ ಹಾರಿದ ಐಸಾಕ್, ಅಲ್ಲಿ ಬರೀ ಚಿತ್ರ ಸಂಕಲನವಷ್ಟೇ ಅಲ್ಲ, ಸಂಭಾಷಣೆ, ಬ್ಯಾಕ್​ಗ್ರೌಂಡ್, ಸೌಂಡ್ ಎಫೆಕ್ಟ್ ್ಸ ಮುಂತಾದ ಹಲವು ವಿಭಾಗಗಳನ್ನು ಕಲಿತರು.

ಆ ನಂತರ ‘ದಿ ಓಲ್ಡ್ ಮ್ಯಾನ್’, ‘ರನ್ನಿಂಗ್’, ‘ಸ್ಪ್ರಿಂಗ್ ಬ್ರೇಕ್ ಫಾರೆವರ್’, ‘ಏಂಜಲ್ಸ್ ಆಫ್ ಅಪ್​ಟೌನ್’ ಮುಂತಾದ ಕಿರುಚಿತ್ರಗಳಿಗಲ್ಲದೆ ಮಿನಿ ವೆಬ್​ಸರಣಿಗಳಿಗೆ ಸೌಂಡ್ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ. ಚಿತ್ರಕಥೆ ಎಷ್ಟು ಮುಖ್ಯವೋ, ಹಾಳೆಯ ಮೇಲಿರುವುದು ತೆರೆಯ ಮೇಲೆ ಬರುವುದು ಸಹ ಅಷ್ಟೇ ಮುಖ್ಯ ಎಂದು ನಂಬಿರುವ ಐಸಾಕ್, ‘ನಾನು ಪ್ರತಿ ಕೆಲಸವನ್ನು ಹೊಸದೆಂದೇ ಪರಿಗಣಿಸುತ್ತೇನೆ. ಮೊದಲು ಸೂಕ್ತ ತಯಾರಿಗಳನ್ನು ಮಾಡಿಕೊಳ್ಳುತ್ತೇನೆ. ಆಗ ಕೆಲಸ ಬಹಳ ಸುಲಭವಾಗುತ್ತದೆ. ಪ್ರತಿ ಚಿತ್ರವನ್ನು ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುವುದು ಸೌಂಡ್ ಎಂದು ನಂಬಿದವನು ನಾನು’ ಎನ್ನುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net