ಹೂಡಿಕೆಗೆ ದಾರಿ ಯಾವುದಯ್ಯ..?

ಹೂಡಿಕೆಗೆ ದಾರಿ ಯಾವುದಯ್ಯ..?
ಹೂಡಿಕೆಗೆ ದಾರಿ ಯಾವುದಯ್ಯ..?
Published on
ಭಾರತದಲ್ಲಿ ಚಿನ್ನವನ್ನು ಆಪತ್​ ಧನವಾಗಿ ಪರಿಗಣಿಸಲಾಗಿದ್ದು, ಸಾಂಪ್ರದಾಯಿಕ ಹೂಡಿಕೆಯ ಈ ಸ್ವರೂಪವು ಹೂಡಿಕೆಯ ಇತರ ವೈವಿಧ್ಯಕ್ಕಿಂತ ಹೆಚ್ಚು ಚಾಲ್ತಿಯಲ್ಲಿದೆ. 2025ರಲ್ಲಿಯೂ ಈ ಟ್ರೆಂಡ್​ ಮುಂದುವರಿಯಿತು. 2026ರಲ್ಲಿಯೂ ಮುಂದುವರಿಯಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. 2025ರಲ್ಲಿ ಚಿನ್ನದಲ್ಲಿ ಹೂಡಿದ 1 ಲಕ್ಷ ರೂ. 1.70 ಲಕ್ಷ ರೂ. ಆಗಿದೆ. ಅಂದರೆ 70% ಭರ್ಜರಿ ಲಾಭ ನೀಡಿದೆ. ಅದೇ ಷೇರು ಮಾರುಕಟ್ಟೆಯಲ್ಲಿ ಹೂಡಿದ 1 ಲಕ್ಷ ರೂ. ತಲುಪಿರುವುದು 1.11 ಲಕ್ಷ ರೂ.ಗೆ. 11% ಸಮಾಧಾನಕರ ರಿರ್ಟನ್​ ಸಿಕ್ಕಿದೆ. 2026ರಲ್ಲಿ ಚಿನ್ನ, ಷೇರು ಮಾರುಕಟ್ಟೆ ಮತ್ತು ರಿಯಲ್​ ಎಸ್ಟೇಟ್​ನಲ್ಲಿ 12%ದಿಂದ 15%ವರೆಗೆ ರಿರ್ಟನ್​ ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು. ಅಂದರೆ 1 ಲಕ್ಷ ರೂ. ಹೂಡಿಕೆ ಮಾಡಿದರೆ 15 ಸಾವಿರ ರೂ.ಗಳ ಗಳಿಕೆ ಸಿಗಲಿದೆ.
2026 ಹೇಗಿರಲಿದೆ?
10 ಗ್ರಾಂ ಶುದ್ಧ ಚಿನ್ನದ ದರ 2026ರಲ್ಲಿ 1.80 ಲಕ್ಷ& 2 ಲಕ್ಷ ರೂ.ಗೆ ಮತ್ತು ಕೆ.ಜಿ ಬೆಳ್ಳಿ ಬೆಲೆ 3 ಲಕ್ಷ ರೂ.ಗೆ ತಲುಪುವ ಸಾಧ್ಯತೆಗಳಿವೆ ಎಂಬುದು ಮಾರುಕಟ್ಟೆ ವಿಶ್ಲೇಷಕರ ಅಭಿಪ್ರಾಯ.

ರಿಯಲ್​ ಎಸ್ಟೇಟ್​

ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಹೂಡಿಕೆ ಮಾರ್ಗ. ನಿವೇಶನ, ಕೃಷಿ ಜಮೀನು, ಸ್ವತಂತ್ರ ಮನೆ, ಫ್ಲ್ಯಾಟ್​, ವಿಲ್ಲಾ ಅಥವಾ ವಾಣಿಜ್ಯ ಆಸ್ತಿ ಖರೀದಿ ಮೂಲಕ ಹೂಡಿಕೆ ಮಾಡಬಹುದು. ಇದರಲ್ಲಿ ದೀರ್ಘಾವಧಿಯಲ್ಲಿ ಹಣ ಬೆಳೆಯುತ್ತದೆ ಮತ್ತು ಬಾಡಿಗೆ ಮೂಲಕ ಪರ್ಯಾಯ ಆದಾಯ ವಿಧಾನವನ್ನು ಕಂಡುಕೊಳ್ಳಬಹುದಾಗಿದೆ. ಸಾಧಾರಣ ರಿಸ್ಕ್​ನಲ್ಲಿ ಸ್ಥಿರವಾದ ಆದಾಯ ಬಯಸುವವರು ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಬಹುದು. ಕಳೆದ 5 ವರ್ಷಗಳ ದಾಖಲೆ ನೋಡಿದರೆ ರಿಯಲ್​ ಎಸ್ಟೇಟ್​ ವಾರ್ಷಿಕವಾಗಿ ಶೇಕಡ 12ರಿಂದ 15ರವರೆಗಿನ ರಿರ್ಟನ್​ ನೀಡಿದೆ. 2026ರಲ್ಲೂ ಇದೇ ದರ ಮುಂದುವರಿಯುವ ಸಾಧ್ಯತೆ ಇದೆ. ಮೆಟ್ರೋಪಾಲಿಟಿನ್​ ನಗರಗಳಲ್ಲಿ ಈ ಪ್ರಮಾಣ ಇನ್ನೂ ಹೆಚ್ಚು.
ಚಿನ್ನ ಮತ್ತು ಬೆಳ್ಳಿ ಹೂಡಿಕೆಯ ವಿಧಗಳು
- ಭೌತಿಕ ಚಿನ್ನ ಮತ್ತು ಬೆಳ್ಳಿ ಅಂದರೆ ನಾಣ್ಯಗಳನ್ನು ಖರೀದಿಸುವುದು.
- ಚಿನ್ನ, ಬೆಳ್ಳಿ ಎಕ್ಸಚೇಂಜ್​ ಟ್ರೇಡೆಡ್​ ಫಂಡ್ಸ್​ (ಇಟಿಎ) ಮೂಲಕ ಹೂಡಿಕೆ.
ಹೇಗೆ ಮಾಡಬಹುದು?
- ಖ್ಯಾತ ಆಭರಣ ಅಂಗಡಿಗಳಿಂದ ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಇಲ್ಲವೆ ಆಭರಣಗಳನ್ನು ಖರೀದಿಸಬಹುದು. ಆದರೆ, ಭೌತಿಕ ಚಿನ್ನ ಮತ್ತು ಬೆಳ್ಳಿಯ ವಿಷಯದಲ್ಲಿ ಸುರಕ್ಷಿತವಾಗಿ ಸಂಗ್ರಹಿಸುವ ಸಮಸ್ಯೆ ಮತ್ತು ಅಸಲಿ&ನಕಲಿ ಗುರುತಿಸುವ ತಲೆನೋವು ಇದ್ದೇ ಇರುತ್ತದೆ.
- ಚಿನ್ನ&ಬೆಳ್ಳಿ ಇಟಿಎ​ನಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್​ ಖಾತೆ ಇದ್ದರೆ ಸಾಕು. ಇದರಲ್ಲಿ ಸಂಗ್ರಹ ಅಥವಾ ಅಸಲಿ&ನಕಲಿ ಸಮಸ್ಯೆ ಇಲ್ಲ.
- ಯಾರು ಹೂಡಿಕೆ ಮಾಡಬಹುದು? ಕಡಿಮೆ ರಿಸ್ಕ್​ನಲ್ಲಿ ಉತ್ತಮ ಲಾಭಾಂಶ ಬಯಸುವವರು ಚಿನ್ನ ಮತ್ತು ಬೆಳ್ಳಿಯಲ್ಲಿ ಹೂಡಿಕೆ ಮಾಡಬಹುದು. ಹೊಸ ನಿವೇಶಕರು ಮತ್ತು ನಿವೃತ್ತಿ ಯೋಜನೆ ರೂಪಿಸುತ್ತಿರುವವರಿಗೆ ಈ ಆಯ್ಕೆ ಸೂಕ್ತ.
ಷೇರುಪೇಟೆಯಲ್ಲಿ ಹೂಡಿಕೆಗೆ 2 ಆಯ್ಕೆ
ಕಂಪನಿಗಳ ಷೇರು ಖರೀದಿ: ನೇರವಾಗಿ ಕಂಪನಿಗಳ ಷೇರುಗಳನ್ನು ಖರೀದಿಸಬಹುದು. ಇದರಲ್ಲಿ ಹೈ ರಿರ್ಟನ್​ ಇದ್ದರೂ, ಅಪಾಯದ ಮಟ್ಟ ಕೂಡ ಹೆಚ್ಚು. ಮಾರ್ಕೆಟ್​ ಕ್ರಾಶ್​, ಷೇರುಪೇಟೆಯ ತೀವ್ರ ಏರಿಳಿತ, ಕಂಪನಿಗಳ ಆಡಳಿತಕ್ಕೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದ ರಿಸರ್ಚ್​ ಹಾಗೂ ಸರಿಯಾದ ಟೈಮಿಂಗ್​ನ ಅಗತ್ಯವಿರುತ್ತದೆ. ಆಯ್ಕೆ ತಪ್ಪಾದರೆ ದೊಡ್ಡ ನಷ್ಟ ಎದುರಿಸಬೇಕಾಗುತ್ತದೆ.
ಮ್ಯೂಚುವಲ್​ ಫಂಡ್​ ಅಥವಾ ಇಂಡೆಕ್ಸ್​ ಇಟಿಎ​: ಈ ಹೂಡಿಕೆ ವಿಧಾನದಲ್ಲಿ ರಿಸ್ಕ್​ ಕಡಿಮೆ. ಏಕೆಂದರೆ, ಫಂಡ್​ ಮ್ಯಾನೇಜರ್​ಗಳು ಹೂಡಿಕೆಯನ್ನು ನಿರ್ವಹಿಸುತ್ತಾರೆ. ಇದರಲ್ಲಿ ಬೇರೆ ಬೇರೆ ಷೇರು ಅಥವಾ ಸೆಕ್ಟರ್​ಗಳಲ್ಲಿ ಹಣ ತೊಡಗಿಸಲಾಗುತ್ತದೆ. ಮ್ಯೂಚುವಲ್​ ಫಂಡ್​ಗಳು ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ ಟ್ರೇಡ್​ ಆಗುವುದಿಲ್ಲ. ಆದರೆ, ಇಟಿಎ್​ಗಳು ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ಟ್ರೇಡ್​ ಆಗುತ್ತವೆ.
ಹೇಗೆ ಮಾಡಬಹುದು?: ನೇರವಾಗಿ ಷೇರುಗಳ ಖರೀದಿ ಅಥವಾ ಮ್ಯೂಚುವಲ್​ ಫಂಡ್​ನಲ್ಲಿ ಹೂಡಿಕೆ ಆರಂಭಿಸಲು ಡಿಮ್ಯಾಟ್​ ಖಾತೆ ಅವಶ್ಯಕ. ಈಗ ಡಿಮ್ಯಾಟ್​ ಖಾತೆ ಆನ್​ಲೈನ್​ ಮೂಲಕ ತೆರೆಯಬಹುದಾಗಿದ್ದು, ಪ್ರಕ್ರಿಯೆ ಸರಳವಾಗಿದೆ. ಜೆರೋಧಾ, ಗ್ರೋ, ಆ್ಯಂಜೆಲ್​ ಒನ್​ನಂಥ ಆ್ಯಪ್​ಗಳ ಮೂಲಕ ಡಿಮ್ಯಾಟ್​ ಖಾತೆ ತೆರೆದು, ಹೂಡಿಕೆ ಆರಂಭಿಸಬಹುದು. ಒನ್​ಟೈಮ್​ ಎಸ್​ಐಪಿ ಮೂಲಕವೂ ಹೂಡಿಕೆ ಮಾಡುವ ಆಯ್ಕೆ ಇದೆ.
ಯಾರು ಮಾಡಬಹುದು?: ಸ್ವಲ್ಪ ರಿಸ್ಕ್​ ತೆಗೆದುಕೊಂಡು ದೀರ್ಘಾವಧಿಯಲ್ಲಿ ಉತ್ತಮ ರಿರ್ಟನ್​ ಬಯಸುವವರು ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್​ ಫಂಡ್ಸ್​ನಲ್ಲಿ ಹೂಡಿಕೆ ಆರಂಭಿಸಬಹುದು. ಈಗತಾನೇ ಉದ್ಯೋಗಕ್ಕೆ ಸೇರಿರುವವರು, ನೂತನ ದಂಪತಿ ಸಂಪತ್ತು ಸೃಷ್ಟಿಗಾಗಿ ಹಾಗೂ ನಿವೃತ್ತಿ ಯೋಜನೆಗಾಗಿ ಹೂಡಿಕೆ ಆರಂಭಿಸಬಹುದು. ಹಳೆಯ ದಾಖಲೆಗಳನ್ನು ಅವಲೋಕಿಸಿದರೆ ದೀರ್ಘಾವಧಿಗೆ ಮಾಡಿದ ಹೂಡಿಕೆ ಉತ್ತಮ ಲಾಭವನ್ನು ತಂದುಕೊಟ್ಟಿದೆ.
ಚಿನ್ನ ಕಳೆದ ಐದು ವರ್ಷಗಳಲ್ಲಿ 180%ಕ್ಕೂ ಹೆಚ್ಚು ರಿರ್ಟನ್​ ನೀಡಿದೆ: 2020ರಲ್ಲಿ 10 ಗ್ರಾಂ ಶುದ್ಧ ಚಿನ್ನದ ದರ <47,500 ಆಸುಪಾಸಿನಲ್ಲಿತ್ತು. 2021ರಲ್ಲಿ <48,500, 2022ರಲ್ಲಿ <54,500, 2023ರಲ್ಲಿ <62,500, 2024ರಲ್ಲಿ <75,500 ಹಾಗೂ 2025ರಲ್ಲಿ <1.40 ಲಕ್ಷ ಗಡಿ ದಾಟಿದೆ.
ಬೆಳ್ಳಿ ಕಳೆದ 5 ವರ್ಷಗಳಲ್ಲಿ ನೀಡಿರುವ ರಿರ್ಟನ್​ 300%ಕ್ಕೂ ಅಧಿಕ: 2020ರ ಡಿಸೆಂಬರ್​ನಲ್ಲಿ ಬೆಳ್ಳಿ ಪ್ರತಿ ಕೆ.ಜಿ.ಗೆ 56 ಸಾವಿರ ರೂ.ಗಳ ಆಸುಪಾಸಿನಲ್ಲಿತ್ತು. 2021ರಲ್ಲಿ 62 ಸಾವಿರ ರೂ., 2022ರಲ್ಲಿ 68 ಸಾವಿರ ರೂ., 2023ರಲ್ಲಿ 78 ಸಾವಿರ ರೂ. 2024ರಲ್ಲಿ 86 ಸಾವಿರ ರೂ. ಹಾಗೂ 2025ರಲ್ಲಿ 2.50 ಲಕ್ಷ ರೂ. ಗಡಿ ದಾಟಿದೆ.
ಬ್ಯಾಂಕ್​ನಲ್ಲಿ ನಿಗದಿತ ಮೊತ್ತವನ್ನು ನಿಶ್ಚಿತ ಠೇವಣಿಯಾಗಿ ಇರಿಸಬಹುದು ಇಲ್ಲವೆ ಬಾಂಡ್​ ಇಟಿಎ್​ ಮೂಲಕವೂ ಹೂಡಿಕೆ ಮಾಡಬಹುದು. ನಿಶ್ಚಿತ ಠೇವಣಿಗಳನ್ನು ರಾಷ್ಟ್ರೀಕೃತ ಬ್ಯಾಂಕ್​ ಅಥವಾ ಖಾಸಗಿ ರಂಗದ ಮುಂಚೂಣಿ ಬ್ಯಾಂಕ್​ಗಳಲ್ಲಿ ಇರಿಸಬಹುದು. ಹಿರಿಯ ನಾಗರಿಕರಿಗೆ 0.5% ಹೆಚ್ಚುವರಿ ಬಡ್ಡಿ ಸಿಗುತ್ತದೆ. ಎ್​ಡಿಯಲ್ಲಿ ಶೇಕಡ 6&7ರಷ್ಟು ಬಡ್ಡಿದರ ದೊರೆಯುತ್ತದೆ. ಇಲ್ಲಿ ಯಾವುದೇ ರಿಸ್ಕ್​ ಇಲ್ಲದೆ ಹಣ ಸುರತವಾಗಿರುತ್ತದೆ. ಆದರೆ, ಹಣದುಬ್ಬರದ ಪ್ರಮಾಣವನ್ನು ಗಮನಿಸಿದರೆ ಹೆಚ್ಚು ಲಾಭ ಆಗುವುದಿಲ್ಲ. ಕಾಪೋರ್ರೇಟ್​ ಬಾಂಡ್​ಗಳಲ್ಲಿ ಶೇ.10ರಿಂದ 12ರಷ್ಟು ರಿರ್ಟನ್​ ನಿರೀಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net