

ಜನಸಾಮಾನ್ಯರಲ್ಲಿ ಆರೋಗ್ಯಕರ ನಿದ್ರೆಯ ಪ್ರಾಮುಖ್ಯದ ಬಗ್ಗೆ ಅರಿವು ಮೂಡಿಸಲು ‘ವರ್ಡ್ ಸ್ಲೀಪ್ ಸೊಸೈಟಿ’
ನಮ್ಮಲ್ಲಿ ಹೆಚ್ಚು ಜನರಿಗೆ ನಿದ್ರಿಸುವಾಗ ಗೊರಕೆ ಕಾಣಿಸಿಕೊಳ್ಳುತ್ತದೆ. ಗೊರಕೆ ನಿದ್ರಿಸುವಾಗ ಬರುವ ಘೊರ ಶಬ್ದ ಮಾತ್ರವಲ್ಲ, ಅದು ಉಸಿರಾಟ ಸಂಬಂಧ ತೊಂದರೆಯ ಸೂಚನೆ. ಗೊರಕೆ ಅಲ್ಪಪ್ರಮಾಣದಲ್ಲಿದ್ದರೆ ಭಯ ಪಡುವ ಅಗತ್ಯವಿಲ್ಲ. ಆದರೆ ಅತಿಯಾದ ಪ್ರಮಾಣದಲ್ಲಿ ಬರುವ ಗೊರಕೆ ಅಪಾಯ ತರುವಂಥದ್ದು. ಅದು Obstructive sleep apnea-O.S.A ತೊಂದರೆಯಾಗಿರಬಹುದು.
ಒಎಸ್ಎ ತೊಂದರೆ ಲಕ್ಷಣಗಳು
ಯಾರಲ್ಲಿ ಕಂಡುಬರುತ್ತದೆ?
ಈ ಮೇಲ್ಕಂಡಂತೆ ವಿವರಿಸಿದ ವ್ಯಕ್ತಿಗಳಲ್ಲಿ, ನಿದ್ರಿಸುವಾಗ ಕುತ್ತಿಗೆಯ ಶ್ವಾಸನಾಳ ಹೆಚ್ಚು ಕುಸಿಯುವ ಪ್ರವೃತ್ತಿ ಹೊಂದಿರುತ್ತದೆ. ಹಾಗಾಗಿ ಚಿಕ್ಕದಾದ ಶ್ವಾಸನಾಳದಿಂದ ಉಸಿರಾಡುವಾಗ ಗೊರಕೆ ಶಬ್ದ ಬರುತ್ತದೆ. ಕೆಲ ನಿಮಿಷ ಕಳೆದಂತೆ, ಗಾಢನಿದ್ರೆಗೆ ಹೋಗುವ ಸಂದರ್ಭದಲ್ಲಿ ಶ್ವಾಸನಾಳ ಸಂಪೂರ್ಣವಾಗಿ ಮುಚ್ಚುವುದರಿಂದ ಉಸಿರಾಟ ನಿಂತು ಹೋಗುತ್ತದೆ (Apnea). ಉಸಿರಾಟ ನಿಂತು ದೇಹಕ್ಕೆ ಆಮ್ಲಜನಕದ ಕೊರತೆಯಾದಾಗ ಮಿದುಳು ಎಚ್ಚೆತ್ತುಕೊಂಡು ನಿದ್ರೆಯಿಂದ ವ್ಯಕ್ತಿಯನ್ನು ಎಚ್ಚರ ಮಾಡುತ್ತದೆ. ಇದೇ ತರಹ ಅಂದಾಜು ಪ್ರತಿ 15-20 ನಿಮಿಷಕ್ಕೂ ಉಸಿರಾಟ ನಿಂತು ಹೋಗಿ ಎಚ್ಚರವಾಗುತ್ತದೆ. ಈ ಪ್ರಕ್ರಿಯೆಯಿಂದ ಒಎಸ್ಎ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿ ಗಾಢನಿದ್ರೆಗೆ ಹೋಗುವುದಿಲ್ಲ. ಆದ ಕಾರಣ ನಿದ್ರಾಹೀನತೆಯಿಂದ ಬಳಲುತ್ತಾರೆ. ಹಲವು ತಿಂಗಳು/ವರ್ಷಗಳಿಂದ ನಡೆಯುತ್ತಿರುವ ಈ ಪ್ರಕ್ರಿಯೆ ದೇಹದ ಎಲ್ಲ ಪ್ರಮುಖ ಅಂಗಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ದುಷ್ಪರಿಣಾಮಗಳು
ಸ್ಲೀಪ್ ಸ್ಟಡಿ ಪರೀಕ್ಷೆ ಎಂದರೇನು?
ಒಎಸ್ಎ ತೊಂದರೆಯನ್ನು ಖಚಿತ ಪಡಿಸಲು ಸ್ಲೀಪ್ ಸ್ಟಡಿ ಎಂಬ ಪರೀಕ್ಷೆ ಮಾಡಲಾಗುತ್ತದೆ. ಇದು ಪ್ರಮುಖವಾಗಿ ನಿದ್ರಿಸುವಾಗ ಸಂಭವಿಸುವ ತೊಂದರೆ ಆಗಿರುವುದರಿಂದ, ಈ ಪರೀಕ್ಷೆಯನ್ನು ರಾತ್ರಿ ನಿದ್ರಿಸುವಾಗSleep labನಲ್ಲಿ ನಡೆಸಲಾಗುತ್ತದೆ. 6-7 ಗಂಟೆಗಳ ಕಾಲ ಪರೀಕ್ಷೆ ನಡೆಸಿ, ಆ ವ್ಯಕ್ತಿಯ ಗೊರಕೆ ಪ್ರಮಾಣ ಎಷ್ಟಿದೆ, ಗೊರಕೆಯಿಂದ ಆಮ್ಲಜನಕ ಎಷ್ಟು ಕಡಿಮೆಯಾಗುತ್ತಿದೆ, ಎಷ್ಟು ಬಾರಿ ಉಸಿರಾಟ ನಿಂತು ಹೋಗಿ (Sleep lab) ಎಚ್ಚರಗೊಳ್ಳುತ್ತಾರೆ, ಗೊರಕೆಯಿಂದ ಮಿದುಳು, ಹೃದಯ, ಬಿ.ಪಿ ಹಾಗೂ ಶ್ವಾಸಕೋಶದ ಮೇಲೆ ಯಾವ ರೀತಿ ಪ್ರಭಾವ ಬೀರುತ್ತದೆ ಎಂಬ ಮಾಹಿತಿ ಕಲೆ ಹಾಕಲಾಗುತ್ತದೆ. ಸ್ಲೀಪ್ ಸ್ಟಡಿ ಪರೀಕ್ಷೆ ನೋವುರಹಿತವಾಗಿರುತ್ತದೆ.
ಪರಿಹಾರೋಪಾಯಗಳು
ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಶೇಕಡ 20-30 ಭಾಗದ ಜನರಲ್ಲಿ ಗೊರಕೆ ಕಾಣಿಸಿಕೊಳ್ಳುತ್ತದೆ. ಜನಸಾಮಾನ್ಯರಲ್ಲಿ ಒಎಸ್ಎ ತೊಂದರೆ ಬಗ್ಗೆ ಅರಿವು ತುಂಬ ಕಡಿಮೆ ಇದ್ದು, ಗೊರಕೆಯನ್ನು ನಿರ್ಲಕ್ಷಿಸುವವರು ಹೆಚ್ಚು. ಮೊದಲೇ ಹೇಳಿದ ಹಾಗೆ ಗೊರಕೆ ಅಲ್ಪ ಪ್ರಮಾಣದಲ್ಲಿದ್ದರೆ ಭಯ ಪಡುವ ಅಗತ್ಯವಿಲ್ಲ. ಆದರೆ ಗೊರಕೆ ಜೊತೆ ಒಎಸ್ಎ ತೊಂದರೆಯ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಕಂಡು ಸ್ಲೀಪ್ ಸ್ಟಡಿ ಮಾಡಿಸಿ, ಅವಶ್ಯವಿದ್ದರೆ ಬೇಗನೆ ಸರಿಯಾದ ಚಿಕಿತ್ಸೆ ಪಡೆದರೆ ಆರೋಗ್ಯಕರ ನಿದ್ರೆ ಪಡೆಯಬಹುದು ಹಾಗೂ ಒಎಸ್ಎ ತೊಂದರೆಯಿಂದ ಆಗುವ ದುಷ್ಪರಿಣಾಮಗಳನ್ನು ತಪ್ಪಿಸಬಹುದು.
(ಲೇಖಕರು ಶ್ವಾಸಕೋಶ ತಜ್ಞರು)