ವಿಜಯವಾಣಿ ಜನಮತ: ಮೀಸಲಾತಿ ನ್ಯಾಯಯುತವಾಗಿರಲಿ

vidhana soudha
Published on

ಇತ್ತೀಚೆಗೆ ಜಿಲ್ಲಾ ಪಂಚಾಯತ್, ತಾಲ್ಲೂಕು ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರ ಅಧಿಕಾರದ ಅವಧಿಯನ್ನು ಈಗಿರುವ 5 ವರ್ಷಗಳಿಂದ ಎರಡೂವರೆ ವರ್ಷಕ್ಕೆ ಹಾಗೂ ಮೀಸಲಾತಿಯನ್ನು 10 ವರ್ಷಗಳಿಂದ 5 ವರ್ಷಗಳಿಗೆ ಇಳಿಸುವ ಪ್ರಸ್ತಾವನೆಯನ್ನು ಸಂಪುಟದ ಮುಂದೆ ಮಂಡಿಸಲಾಗುತ್ತಿದೆ ಎಂದು ವರದಿಯಾಗಿದೆ.

ಸಂವಿಧಾನ ರಚನೆ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಯಂತೆ ಕೆಲವು ವರ್ಗದವರಿಗೆ ವಿದ್ಯಾರ್ಜನೆ, ಉದ್ಯೋಗ ಮತ್ತು ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮೀಸಲಾತಿಯನ್ನು ಹತ್ತು ವರ್ಷಗಳ ಅವಧಿಗೆ ಅಳವಡಿಸಲಾಗಿತ್ತು. ತದನಂತರ ಈ ಮೀಸಲಾತಿಯ ಅವಧಿಯನ್ನು ಪದೇಪದೆ ವಿಸ್ತರಿಸಿದ್ದೂ ಅಲ್ಲದೆ ಹೊಸ ಕ್ಷೇತ್ರಗಳಿಗೂ ವಿಸ್ತರಿಸಲಾಯಿತು. ಹಿಂದಿನ ಕಾಂಗ್ರೆಸ್ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆಯಡಿ ಜಿ.ಪಂ., ತಾಲೂಕು, ಗ್ರಾ.ಪಂ. ಅಧ್ಯಕ್ಷರ ಅವಧಿ, ಮೀಸಲಾತಿ ನಿಗದಿ ಪಡಿಸಿತು.

ಈಗಿನ ಸರ್ಕಾರ ಇದಕ್ಕೆ ತಿದ್ದುಪಡಿ ತಂದು ಹೆಚ್ಚಿನವರಿಗೆ ಅಧಿಕಾರ ಸಿಗುವಂತೆ ಮಾಡಲು ಉದ್ದೇಶಿಸಿದೆಯಂತೆ. ಹೌದು, ಅಧಿಕಾರ ಕೆಲವೇ ಜನರ ಸೊತ್ತಾಗಬಾರದೆಂಬ ವಾದವೇನೋ ಒಪ್ಪತಕ್ಕದ್ದೇ. ಆದರೆ, ಇದೇ ರೀತಿ ಅವೈಜ್ಞಾನಿಕ ಮೀಸಲಾತಿಯಿಂದ ಸಾಮಾನ್ಯ ವರ್ಗದ ಸಾಮಾನ್ಯ ಜನರು ಎಷ್ಟು ನೊಂದಿದ್ದಾರೆಂಬ ಬಗ್ಗೆ ಒಂದಿಷ್ಟು ಯೋಚಿಸಬೇಡವೇ? ರಾಜಕಾರಣಿಗಳಿಗೊಂದು ನ್ಯಾಯ, ಜನಸಾಮಾನ್ಯರಿಗೊಂದು ನ್ಯಾಯವೇ? ಮೀಸಲಾತಿ ಇರಲಿ, ಆದರೆ ನ್ಯಾಯಯುತವಾಗಿರಲಿ.

| ಮೋಹನದಾಸ ಕಿಣಿ, ಕಾಪು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net