

8 ಲಕ್ಷ ರೂ. ಬಂಡವಾಳ, 8 ತಿಂಗಳಲ್ಲಿ ಬಿಸಿನೆಸ್ ಲಾಭಕ್ಕೆ ತರುವ ಪ್ಲ್ಯಾನ್!: ಯಶಸ್ಸು ಎನ್ನುವುದು ಪೂರ್ವತಯಾರಿ, ಪರಿಶ್ರಮ ಮತ್ತು ನಿರತರ ಕಲಿಕೆ ಪ್ರತಿಫಲ. ಯಾರು ಪರಿಶ್ರಮ ಹಾಕಿ ಸವಾಲುಗಳನ್ನು ಎದುರಿಸಿ ಕೆಲಸ ಮಾಡುವರೋ ಅವರಿಗೆ ಸೋಲಿಲ್ಲ. ಇಂತದ್ದೇ ಪ್ರಾಮಾಣಿಕ ಪ್ರಯತ್ನವನ್ನು ಕೇಶವಮೂರ್ತಿ ಮಾಡಿದ್ದಾರೆ. ಕೆಲಸ ತೊರೆಯುವ ಮುನ್ನ ಯಾವ ಉದ್ಯಮ ಕಟ್ಟುವುದು ಎನ್ನುವ ಪ್ರಶ್ನೆ ಕೇಶವಮೂರ್ತಿ ಅವರನ್ನು ಹಲವು ಬಾರಿ ಕಾಡಿದೆ. ಅದಕ್ಕೆ ಉತ್ತರ ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ ಬಗ್ಗೆ ಗೊತ್ತಾಗಿದೆ. ಫೈನಾನ್ಸಿಯಲ್ ಫ್ರೀಂ ಆಪ್ ಡೌನ್ಲೋಡ್ ಮಾಡಿ ಅಲ್ಲಿರುವ ಅನೇಕ ಬಿಸಿನೆಸ್ ಕೋರ್ಸ್ಗಳನ್ನು ಅವರು ನೋಡಿದ್ದಾರೆ. ಕೊನೆಗೆ ಆಯಿಲ್ ಮಿಲ್ ಬಿಸಿನೆಸ್ ಶುರು ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಆಯಿಲ್ ಮಿಲ್ ಘಟಕ ಆರಂಭಿಸಲು ಗಾಣ, ಘಟಕದ ಇಂಟೀರಿಯರ್, ಬೇಕಿರುವ ಲೈಸೆನ್ಸ್ ಮತ್ತಿತರ ಅನುಮತಿ, ಎಲ್ಲವೂ ಸೇರಿ ಸುಮಾರು 8 ಲಕ್ಷ ರೂ. ಬಂಡವಾಳ ಹಾಕಿದ್ದಾರೆ. 8 ಲಕ್ಷ ರೂ. ಬಂಡವಾಳವನ್ನು 8 ತಿಂಗಳಲ್ಲಿ ಹಿಂಪಡೆಯುವುದು ಹೇಗೆ ಎನ್ನುವ ಬಗ್ಗೆಯೂ ಕೇಶವಮೂರ್ತಿ ಅವರಲ್ಲಿ ಪ್ಲಾ್ಯನ್ ರೆಡಿ ಇದೆ. ಇನ್ನು ಫೈನಾನ್ಸಿಯಲ್ ಫ್ರೀಡಂ ಆಪ್ ಬದುಕು ಕಟ್ಟಿಕೊಳ್ಳಬೇಕು ಎನ್ನುವವರಿಗೆ ಮಾಹಿತಿಗಳ ಸಾಗರ ಎನ್ನುವ ಕೇಶವಮೂರ್ತಿ, ಅದರ ಬಳಕೆಯಿಂದ ತಮ್ಮ ಉದ್ಯಮದ ಕನಸು ನನಸಾದ ಬಗೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಬಿಸಿನೆಸ್ ಆರಂಭಿಸಲು ತಾಯಿ ಪ್ರೇರಣೆ: ಕೇಶವಮೂರ್ತಿ ಆಯಿಲ್ ಮಿಲ್ ಬಿಸಿನೆಸ್ ಶುರು ಮಾಡಲು ಮತ್ತೊಂದು ಪ್ರೇರಣೆ ಇದೆ. ಅವರ ತಾಯಿ ಕೋವಿಡ್ ಮೊದಲ ಅಲೆ ಸಂದರ್ಭ ಹೃದಯಾಘಾತದಿಂದ ಸಾವಿಗೀಡಾಗುತ್ತಾರೆ. ಇದಕ್ಕೆ ಕಾರಣವೇನು ಎಂದು ಉತ್ತರ ಹುಡುಕಲು ಹೊರಟ ಕೇಶವಮೂರ್ತಿ ಅವರಿಗೆ ಕಲಬೆರಕೆ ಅಡುಗೆ ಎಣ್ಣೆ ಮತ್ತು ಆಹಾರವೇ ಕಾರಣ ಎಂದು ತಿಳಿಯುತ್ತದೆ. ಈ ಘಟನೆ ಬಳಿಕ ಉತ್ತಮ ಅಡುಗೆ ಎಣ್ಣೆಯನ್ನು ಜನರಿಗೆ ಪೂರೈಸಬೇಕು ಎನ್ನುವ ಸಂಕಲ್ಪ ಮಾಡುತ್ತಾರೆ. ಅದರಂತೆ ಫೈನಾನ್ಸಿಯಲ್ ಫ್ರೀಡಂ ಆಪ್ನಿಂದ ಗಾಣದ ಎಣ್ಣೆ ಬಿಸಿನೆಸ್ ಬಗ್ಗೆ ಕಲಿತು, ಆಯಿಲ್ ಮಿಲ್ ಘಟಕ ಆರಂಭಿಸುತ್ತಾರೆ.
ಫ್ರೀಡಂ ಆ್ಯಪ್ನಲ್ಲಿ ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್: ಫೈನಾನ್ಸಿಯಲ್ ಫ್ರೀಡಂ ಆ್ಯಪ್ನಲ್ಲಿ ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಗಾಣದ ಎಣ್ಣೆ ಬಿಸಿನೆಸ್ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಗಾಣದ ಎಣ್ಣೆ ಅಂದ್ರೆ ಆಯಿಲ್ ಮಿಲ್ ಬಿಸಿನೆಸ್ನಲ್ಲಿ ಯಶಸ್ಸು ಕಂಡಿರುವ ಸಾಧಕರೇ ಇದರಲ್ಲಿ ಮಾರ್ಗದರ್ಶನ ನೀಡಿದ್ದಾರೆ. ಗಾಣದ ಎಣ್ಣೆಯ ಘಟಕ ಆರಂಭಿಸುವ ಬಗ್ಗೆ ಇಂಚಿಂಚು ಮಾಹಿತಿ ಇದರಲ್ಲಿ ಅಡಕವಾಗಿದೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್ಲೋಡ್ ಮಾಡಿ ಗಾಣದ ಎಣ್ಣೆ ಬಿಸಿನೆಸ್ ಬಗ್ಗೆ ತಿಳಿದುಕೊಂಡು ಉದ್ಯಮ ಕಟ್ಟೋಕೆ ಶುರು ಮಾಡಿ.
ತರಬೇತಿ ಕಾರ್ಯಾಗಾರ: ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್ವತಿಯಿಂದ ಗಾಣದ ಎಣ್ಣೆ (ಆಯಿಲ್ ಮಿಲ್) ಬಿಸಿನೆಸ್ ತರಬೇತಿ ಕಾರ್ಯಾಗಾರ ಮತ್ತು ಉದ್ಯಮ ಮಾರ್ಗದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಕಾರ್ಯಾಗಾರ ಜರುಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 7975465873ಕ್ಕೆ ಕರೆ ಮಾಡಿ.