ಗ್ರಾಹಕನೇ ರಾಜ ಹಕ್ಕುಗಳ ರಕ್ಷಣೆಗೆ ಕೇಂದ್ರದ ದೃಢಕಾರ್ಯ

Customers
Published on
ಸಕಾಲಿಕ
ಗ್ರಾಹಕನಿಲ್ಲದ ವ್ಯಾಪಾರವಿಲ್ಲ, ವ್ಯಾಪಾರಿಯೂ ಒಬ್ಬ ಗ್ರಾಹಕನೇ. ಗ್ರಾಹಕ ಹಾಗೂ ವ್ಯಾಪಾರ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ದಿನಂಪ್ರತಿ ಪ್ರತಿಯೊಬ್ಬ ನಾಗರಿಕನೂ ಗ್ರಾಹಕನಾಗಿಯೇ ಇರುತ್ತಾನೆ. ಬೆಳಗ್ಗೆದ್ದು ಹಾಲುನ್ನು ಖರೀದಿ ಮಾಡುವುದರಿಂದ ಹಿಡಿದು ರಾತ್ರಿ ಮಲಗುವವರೆಗೆ ಹತ್ತಾರು ವಸ್ತುಗಳನ್ನು ಖರೀದಿ ಮಾಡುತ್ತಲೇ ಇರುತ್ತಾನೆ. ಹಾಗಾಗಿ, ಅರ್ಥಿಕತೆಯಲ್ಲಿ ಗ್ರಾಹಕನಿಗೆ ನ್ಯಾಯ ಒದಗಿಸುವ ಮಹತ್ವದ ಜವಾಬ್ದಾರಿ ನಮ್ಮದು.

ಡಿಸೆಂಬರ್ 24 ದೇಶಕ್ಕೆ ಮಹತ್ವದ ದಿನ. ಪ್ರತಿ ವರ್ಷ ಈ ದಿನವನ್ನು ರಾಷ್ಟ್ರೀಯ ಗ್ರಾಹಕರ ದಿನವನ್ನಾಗಿ ಆಚರಿಸಲಾಗುತ್ತದೆ. ಈ ದಿನ, ‘ಗ್ರಾಹಕ ರಕ್ಷಣಾ ಕಾಯಿದೆ (ಇಟ್ಞಠ್ಠಞಛ್ಟಿ ಕ್ಟಟಠಿಛ್ಚಿಠಿಜಿಟ್ಞ ಅಠಿಇಕಅ) 1986’ ಜಾರಿಗೆ ಬಂದ ದಿನವನ್ನು ಗೌರವಿಸುವ ಮತ್ತು ಗ್ರಾಹಕರ ಹಕ್ಕುಗಳನ್ನು ಗುರುತಿಸುವ ಮಹತ್ವಪೂರ್ಣ ಕ್ಷಣವಾಗಿದೆ. ಈ ಕಾಯಿದೆ ಭಾರತೀಯ ಗ್ರಾಹಕರಿಗೆ ಆಯ್ಕೆ ಮಾಡುವ ಹಕ್ಕು, ಸುರಕ್ಷತೆ, ಶಿಕ್ಷಣ ಮತ್ತು ಅನ್ಯಾಯಕರ ವ್ಯಾಪಾರಿಕ ಕ್ರಮಗಳ ವಿರುದ್ಧ ಹೋರಾಡಲು ಹಕ್ಕುಗಳನ್ನು ನೀಡಿದ ಪ್ರಮುಖ ಕಾನೂನಾಗಿದೆ. ಭಾರತದ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಜಾರಿಗೆ ಬಂದ ಮೊದಲ ಕಾನೂನು ಇದಾಗಿತ್ತು. 1986ರಲ್ಲಿ ಜಾರಿಯಾದ ಈ ಕಾನೂನಿಗೆ 2019ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ತರಲಾಯಿತು. ಭಾರತವು ಪ್ರಪಂಚದ ಐದನೇ ದೊಡ್ಡ ಆರ್ಥಿಕತೆ ಮತ್ತು ನಾಲ್ಕನೇ ದೊಡ್ಡ ಗ್ರಾಹಕ ಮಾರುಕಟ್ಟೆ ಆಗಿರುವ ಹಿನ್ನಲೆಯಲ್ಲಿ, ಗ್ರಾಹಕರ ರಕ್ಷಣಾ ವ್ಯವಸ್ಥೆಯು ಅನಿವಾರ್ಯವಾಗಿ ಪರಿಷ್ಕೃತವಾಗಬೇಕಾಗಿತ್ತು.

ಈ ಕಾಯಿದೆ ಗ್ರಾಹಕರಿಗೆ ವ್ಯವಹಾರದಲ್ಲಿ ನ್ಯಾಯ ಮತ್ತು ಸತ್ಯವನ್ನು ನೀಡಲು ಇಟ್ಟ ದೊಡ್ಡ ಹೆಜ್ಜೆಯಾಗಿದೆ. 2019ರಲ್ಲಿ ಸ್ಥಾಪಿತವಾದ ‘ಕೇಂದ್ರ ಗ್ರಾಹಕ ರಕ್ಷಣೆ ಪ್ರಾಧಿಕಾರ’ ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಪರಿಣಾಮಕಾರಿ ಸಾಧನವಾಗಿದೆ. ಪ್ರಾಧಿಕಾರವು ದಾರಿತಪ್ಪಿಸುವ ಜಾಹೀರಾತುಗಳ ತಡೆಗಟ್ಟುವಿಕೆಗಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಕೇಂದ್ರ ಗ್ರಾಹಕ ರಕ್ಷಣೆ ಪ್ರಾಧಿಕಾರ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು ಮಾತ್ರವಲ್ಲದೆ, ತಪ್ಪು ವ್ಯಾಪಾರ ನಡೆಸುವ ಕಂಪನಿಗಳಿಗೆ -ಠಿ; 50 ಲಕ್ಷದವರೆಗೆ ದಂಡ ಹಾಕುವ ಅಧಿಕಾರ ಹೊಂದಿದೆ.

ವಿದ್ಯಾರ್ಥಿಗಳನ್ನು ಕೇಂದ್ರಬಿಂದುವಾಗಿಸಿಕೊಂಡು ಖಾಸಗಿ ಕೋಚಿಂಗ್ ಸೆಂಟರ್​ಗಳು ಮಕ್ಕಳನ್ನು ದಾರಿತಪ್ಪಿಸುವ ಕೆಲ ಜಾಹೀರಾತುಗಳನ್ನು ಪ್ರಕಟಿಸಿವೆ. ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಸುಮಾರು 45 ನೋಟಿಸ್​ಗಳನ್ನು ಇಂತಹ ಕೋಚಿಂಗ್ ಸೆಂಟರ್​ಗಳಿಗೆ ನೀಡಿದ್ದು, -ಠಿ; 61.60 ಲಕ್ಷ ದಂಡ ವಿಧಿಸಿದೆ ಮತ್ತು ಅವರ ವಂಚಕ ಕಾರ್ಯಗಳನ್ನು ನಿಲ್ಲಿಸಲು ಕಟ್ಟುನಿಟ್ಟಾದ ಕ್ರಮ ವಹಿಸಲಾಗಿದೆ.

ಗ್ರಾಹಕರನ್ನು ದಾರಿತಪ್ಪಿಸುವ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಪಾಯ ಉಂಟುಮಾಡುವ ಜಾಹೀರಾತುಗಳನ್ನು ಪ್ರದರ್ಶಿಸಿದ್ದ 13 ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸುವ ಮೂಲಕ ಸಾರ್ವಜನಿಕರನ್ನು ಜಾಗರೂಕವಾಗಿಸಿದೆ. ವಿಮಾನದ ಆನ್​ಲೈನ್ ಟಿಕೆಟ್ ರದ್ದುಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿಗಳು ಬಾಕಿಯಿರಿಸಿದ್ದ -ಠಿ; 1,454 ಕೋಟಿ ಹಣವನ್ನು ಗ್ರಾಹಕರಿಗೆ ಹಿಂದಿರುಗಿಸುವಲ್ಲಿ ಪ್ರಾಧಿಕಾರ ಯಶಸ್ವಿಯಾಗಿದೆ. ಅಲ್ಲದೆ, ಭಾರತವು ನಕಲಿ ವಿಮರ್ಶೆಗಳಿಂದ ಗ್ರಾಹಕರನ್ನು ರಕ್ಷಿಸುವ ಮಾನದಂಡಗಳನ್ನು ಸ್ಥಾಪಿಸಿದ ಮೊದಲ ದೇಶವಾಗಿರುವುದು ಹೆಮ್ಮೆ.

ಗ್ರಾಹಕ ರಕ್ಷಣಾ ಕಾಯಿದೆಯ ಅಡಿಯಲ್ಲಿ ಗ್ರಾಹಕ ವಿವಾದಗಳನ್ನು ಬಗೆಹರಿಸಲು ಮೂರು ಹಂತಗಳ ನ್ಯಾಯಾಲಯದ ವ್ಯವಸ್ಥೆಯನ್ನು ಸ್ಥಾಪಿಸಲಾಗಿದೆ. ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ (ಜಿಲ್ಲಾ ವೇದಿಕೆ), ರಾಜ್ಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ರಾಜ್ಯ ಆಯೋಗ) ಮತ್ತು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ (ರಾಷ್ಟ್ರೀಯ ಆಯೋಗ).

ಗ್ರಾಹಕರ ವೈಯಕ್ತಿಕ ವೈಶಿಷ್ಟ್ಯಗಳ ವಿವಾದಗಳನ್ನು ಪರಿಹರಿಸುವ ಪ್ರಕ್ರಿಯೆಯಲ್ಲಿ ಮಹತ್ವಪೂರ್ಣ ಪ್ರಗತಿ ಸಾಧಿಸಲಾಗಿದೆ. ರಾಷ್ಟ್ರೀಯ ಆಯೋಗದ ಅಡಿಯಲ್ಲಿ ಜನವರಿ 2024ರಿಂದ ನವೆಂಬರ್ 2024ವರೆಗೆ 3,628 ಪ್ರಕರಣಗಳು ಸಲ್ಲಿಕೆಯಾಗಿವೆ ಹಾಗೂ ಜನವರಿ 2024ರಿಂದ ನವೆಂಬರ್ 2024ರವರೆಗೆ ಬಾಕಿ ಉಳಿದಿದ್ದ 6,587 ಪ್ರಕರಣಗಳನ್ನು ಚುಕ್ತಿಗೊಳಿಸಲಾಗಿದೆ. ಹೀಗೆಯೇ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯ ಆಯೋಗಗಳು ಉತ್ತಮ ಕಾರ್ಯ ನಡೆಸುತ್ತಿವೆ. ದೂರು ಪ್ರಕ್ರಿಯೆಯನ್ನು ಸರಳಗೊಳಿಸಲು, ಕೇಂದ್ರ ಸರ್ಕಾರವು 2020ರಲ್ಲಿ ಛಿಈಚಚkಜಜ್ಝಿ ಪೋರ್ಟಲ್ ಪ್ರಾರಂಭಿಸಿದೆ. ಜನವರಿ 2024ರಿಂದ ನವೆಂಬರ್ 2024ರ ಅವಧಿಯಲ್ಲಿ 82,430 ಹೊಸ ಬಳಕೆದಾರರು ನೋಂದಾಯಿಸಿಕೊಂಡಿದ್ದಾರೆ. ಈವರೆಗೂ 2,00,312 ಪ್ರಕರಣಗಳು ದಾಖಲು ಮಾಡಲಾಗಿದೆ. 2024ರ ಜನವರಿಯಿಂದ ನವೆಂಬರ್​ವರೆಗೆ ಒಟ್ಟು 96,274 ಪ್ರಕರಣಗಳು ಛಿಈಚಚkಜಜ್ಝಿ ಪೋರ್ಟಲ್​ನಲ್ಲಿ ದಾಖಲಾಗಿದೆ.

ಹಾಲ್​ವಾರ್ಕಿಂಗ್​ನ್ನು 2021ರ ಜೂನ್ 23ರಿಂದ ಕಡ್ಡಾಯಗೊಳಿಸಲಾಗಿದೆ. ಈವರೆಗೂ 361 ಜಿಲ್ಲೆಗಳಲ್ಲಿ, 1600ಕ್ಕೂ ಹೆಚ್ಚು ಅಸೆಸಿಂಗ್ ಮತ್ತು ಹಾಲ್​ವಾರ್ಕಿಂಗ್ ಕೇಂದ್ರಗಳು ಆಐಖ ಮಾನ್ಯತೆ ಪಡೆದಿವೆ. ರಾಷ್ಟ್ರೀಯ ಪರೀಕ್ಷಾ ಗೃಹ (ಘಖಏ) ಗುಣಮಟ್ಟವನ್ನು 1912ರಿಂದ ಕಾಪಾಡುವ ಸಂಸ್ಥೆಯಾಗಿದೆ. ಮುಂದುವರಿದು ಗುಣಮಟ್ಟ ಪರೀಕ್ಷೆ, ಪರೀಕ್ಷೆಗಳಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸುತ್ತಿದೆ. ರಾಷ್ಟ್ರೀಯ ಪರೀಕ್ಷಾ ಗೃಹ ಭಾರತಾದ್ಯಾಂತ ಹಲವಾರು ಪ್ರಯೋಗ ಶಾಲೆಗಳನ್ನು ಹೊಂದಿದೆ. ಕೋಲ್ಕತ್ತ, ಗಾಜಿಯಾಬಾದ್, ಮುಂಬೈ, ಚೆನ್ನೈ, ಜೈಪುರ್ ಮತ್ತು ಗುವಾಹಟಿ ಸೇರಿದಂತೆ ಎಲ್ಲ ಪ್ರಯೋಗಶಾಲೆಗಳು ಘಅಆಔ ಮತ್ತು ಆಐಖ ಮಾನ್ಯತೆ ಪಡೆದಿವೆ. ಜೊತೆಗೆ, ವಾರಾಣಸಿ ಮತ್ತು ಬೆಂಗಳೂರಿನಲ್ಲಿ ರಾಷ್ಟ್ರೀಯ ಪರೀಕ್ಷಾ ಗೃಹದ ಉಪ ಕೇಂದ್ರಗಳಿವೆ.

ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಘಇಏ) ಏಕೀಕೃತ ದೂರು ಪರಿಹಾರ ವ್ಯವಸ್ಥೆ ಆಗಿ ಕಾರ್ಯನಿರ್ವಹಿಸುತ್ತಿದೆ. ರಾಷ್ಟ್ರೀಯ ಗ್ರಾಹಕ ಹೆಲ್ಪ್​ಲೈನ್ ಗ್ರಾಹಕರಿಗೆ ಸುಲಭ ರೀತಿಯಲ್ಲಿ ದೂರಗಳನು ್ನ ವೆಬ್ ಫೊರ್ಟಲ್ ಮತ್ತು ಕಾಲ್ ಸೆಂಟರ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಿದೆ. 2024ರಲ್ಲಿ ತಿಂಗಳಿಗೆ ಸರಾಸರಿ 1,12,468 ದೂರುಗಳು ದಾಖಲಾಗುತ್ತಿವೆ. ರಾಷ್ಟ್ರೀಯ ಗ್ರಾಹಕ ಹೆಲ್ಪ್​ಲೈನ್ ಇದೀಗ ಘಇಏ 2.0 ಯೋಜನೆಯನ್ನು ಮುಕ್ತವಾಗಿಸಿದೆ. ಎಐ ಆಧಾರಿತ ಭಾಷಾ ಗುರುತಿಸುವಿಕೆ, ಭಾಷೆಯ ಪರಿವರ್ತನಾ ವ್ಯವಸ್ಥೆ, ಬಹುಭಾಷಾ ಚಾಟ್​ಬಾಟ್ ಹೀಗೆ ಪ್ರಮುಖ ತಂತ್ರಜ್ಞಾನಗಳನ್ನು ಸೇರಿಸಲಾಗಿದೆ. ‘ಜಾಗೋ ಗ್ರಾಹಕ ಜಾಗೋ’ ಅಭಿಯಾನವು ಗ್ರಾಹಕರನ್ನು ಮೋಸ ಮತ್ತು ಸಾಮಾನ್ಯ ಸಮಸ್ಯೆಗಳ ಬಗ್ಗೆ ಶಿಕ್ಷಣ ನೀಡುತ್ತದೆ.

ಗ್ರಾಹಕರ ನ್ಯಾಯವು ಕೇವಲ ದೂರುಗಳನ್ನು ಪರಿಹರಿಸುವುದನ್ನು ಮೀರಿದೆ, ಇದು ಗ್ರಾಹಕರನ್ನು ಸಬಲೀಕರಣಗೊಳಿಸುವುದು, ಸುರಕ್ಷಿತ, ತಿಳಿವಳಿಕೆ ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಒದಗಿಸುವುದರ ಹೊರತಾಗಿ, ಭಾರತ ಸರ್ಕಾರವು ಬೆಲೆಗಳನ್ನು ಸ್ಥಿರಗೊಳಿಸಲು ವಿವಿಧ ಕ್ರಮಗಳನ್ನು ಜಾರಿಗೆ ತಂದಿದೆ. ಇದು ಗ್ರಾಹಕರು ಮತ್ತು ರೈತರಿಗೆ ಪ್ರಯೋಜನಕಾರಿಯಾಗಿದೆ. ಬೆಲೆ ಮೇಲ್ವಿಚಾರಣಾ ಕಾರ್ಯವಿಧಾನ ಮತ್ತು ಬೆಲೆ ಸ್ಥಿರೀಕರಣ ನಿಧಿ ಮೂಲಕ, ಗ್ರಾಹಕ ವ್ಯವಹಾರಗಳ ಇಲಾಖೆ ಬೆಲೆ ಏರಿಳಿತವನ್ನು ನಿಯಂತ್ರಿಸಲು ಮತ್ತು ಗ್ರಾಹಕರಿಗೆ ಕೈಗೆಟುಕುವ ಅಗತ್ಯ ಸರಕುಗಳನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದೆ.

ತಂತ್ರಜ್ಞಾನದ ನೆರವಿನಿಂದ ಗ್ರಾಹಕರಿಗೆ ಬಲ: ಭಾರತವು 950 ದಶಲಕ್ಷ ಇಂಟರ್​ನೆಟ್ ಬಳಕೆದಾರರೊಂದಿಗೆ ಪ್ರಪಂಚದ ಎರಡನೇ ಅತಿ ದೊಡ್ಡ ಇಂಟರ್​ನೆಟ್ ಮಾರುಕಟ್ಟೆಯಾಗಿದೆ. ಇ-ವಾಣಿಜ್ಯವು ಟಯರ್-2 ಮತ್ತು ಟಯರ್- 3 ನಗರಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೂ ವ್ಯಾಪಿಸಿಕೊಂಡಿದೆ. ಸರ್ಕಾರ 2020ರಲ್ಲಿ ಗ್ರಾಹಕ ರಕ್ಷಣಾ (ಇ-ವಾಣಿಜ್ಯ) ನಿಯಮಗಳನ್ನು ಪರಿಚಯಿಸಿತು. ಈ ನಿಯಮಗಳು ಇ-ವಾಣಿಜ್ಯ ಕ್ಷೇತ್ರದಲ್ಲಿ ಅನ್ಯಾಯದ ವ್ಯವಹಾರಗಳನ್ನು ತಡೆಯಲು ಮತ್ತು ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ರೂಪಿಸಲ್ಪಟ್ಟಿವೆ. ಆನ್​ಲೈನ್ ವೇದಿಕೆಗಳು ಈಗ ಉತ್ಪನ್ನದ ಸರಿಯಾದ ವಿವರಗಳು, ಸ್ಪಷ್ಟ ಬೆಲೆಗಳನ್ನು ನೀಡಬೇಕಾಗಿದೆ, ದೇಶದ ಮೂಲವನ್ನು ನಮೂದಿಸಬೇಕಾಗಿದೆ. ವಸ್ತುಗಳ ವಾಪಾಸಾತಿ ಹಾಗೂ ಮರುಪಾವತಿ ನೀತಿ ಹಾಗೂ ಉತ್ಪನ್ನಗಳ ಗುಣಮಟ್ಟ ಖಾತ್ರಿಪಡಿಸುವ ನಿಯಮಗಳನ್ನು ಜಾರಿಗೆ ತರಲಾಗಿದೆ.

(ಲೇಖಕರು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ಸಚಿವರು)

ಗ್ರಾಹಕನು ಆರ್ಥಿಕತೆಯಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತಾನೆ. ಭಾರತದ ಸರ್ಕಾರವು ಗ್ರಾಹಕ ರಕ್ಷಣೆಗೆ ಮಾತ್ರವಲ್ಲದೆ, ಗ್ರಾಹಕ ಆತ್ಮನಿರ್ಣಯಕ್ಕೂ ಗಮನ ಹರಿಸುತ್ತಿದೆ.

| ನರೇಂದ್ರ ಮೋದಿ ಪ್ರಧಾನಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net