

ಕರ್ನಾಟಕ ಸರ್ಕಾರ 2014ರಲ್ಲಿ ಸ್ಥಾಪಿಸಿ ಪ್ರತಿ ಗಾಂಧಿ ಜಯಂತಿಯಂದು ನೀಡುತ್ತಿರುವ ಗಾಂಧಿ ಸೇವಾ ಪ್ರಶಸ್ತಿಗೆ ಗಾಂಧಿ ಚಿಂತಕರಾದ ಎಸ್.ಎನ್.ಸುಬ್ಬರಾವ್, ಹೋ.ಶ್ರೀನಿವಾಸಯ್ಯ, ಚನ್ನಮ್ಮಾ ಹಳ್ಳಿಕೇರಿ, ಎಚ್.ಎಸ್.ದೊರೆಸ್ವಾಮಿ, ರಂಗಕರ್ವಿು ಪ್ರಸನ್ನ, ಜಿ.ಎಸ್.ಜಯದೇವ ಈಗಾಗಲೇ ಭಾಜನರಾಗಿರುವುದು ತೃಪ್ತಿದಾಯಕ. ರಾಜ್ಯ ಸರ್ಕಾರ ನೀಡುತ್ತಿರುವ ಈ ಪ್ರತಿಷ್ಠಿತ ಪ್ರಶಸ್ತಿಗೆ ಅರವತ್ತು ಮೀರಿದ ವ್ಯಕ್ತಿಗಳಿಂದ ಮತ್ತು ಇಪ್ಪತ್ತೈದು ವರ್ಷಕ್ಕೂ ಹೆಚ್ಚು ಕಾಲ ಗಾಂಧಿ ವಿಚಾರಧಾರೆಯಲ್ಲಿ ಕೆಲಸ ಮಾಡುತ್ತಿರುವ ಸಂಘ-ಸಂಸ್ಥೆಗಳಿಂದ ಅರ್ಜಿ ಹಾಗೂ ನಾಮನಿರ್ದೇಶನಗಳನ್ನು ಕಳೆದ ಸೆಪ್ಟೆಂಬರ್ನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಹ್ವಾನಿಸಿತ್ತು.
ಸರ್ಕಾರಕ್ಕೆ ಅರ್ಹ ವ್ಯಕ್ತಿ ಅಥವಾ ಸಂಸ್ಥೆಯನ್ನು ಶಿಫಾರಸು ಮಾಡುವ ಸಲುವಾಗಿ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ತ್ರಿ ಸದಸ್ಯ ಸಮಿತಿಯನ್ನು ನೇಮಿಸಿತ್ತು. ಕೋವಿಡ್ ಹಿನ್ನೆಲೆಯಲ್ಲಿ ಈ ಸಮಿತಿಗೆ 2020 ಹಾಗೂ 2021 ಈ ಎರಡೂ ವರ್ಷಗಳ ಪ್ರಶಸ್ತಿಗಳಿಗೆ ಆಯ್ಕೆ ಮಾಡುವ ಹೊಣೆ ವಹಿಸಲಾಗಿತ್ತು. ವಿವಿಧ ಅಕಾಡೆಮಿ ಮತ್ತು ಇಲಾಖೆಗಳು ಇದೀಗ ಪ್ರಶಸ್ತಿ ವಿತರಣೆ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ 2020 ಮತ್ತು 21ನೇ ಸಾಲಿನ ಗಾಂಧಿ ಸೇವಾ ಪ್ರಶಸ್ತಿ ಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭಿಸಬಹುದೇ?
| ಡಾ. ಹೊಸ್ಕೆರೆ ಎಸ್. ಸುರೇಶ್ ಬೆಂಗಳೂರು