

ಜಗತ್ತು ಕಂಡ ಶ್ರೇಷ್ಠ ಇಂಜಿನಿಯರ್ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ . ಇಂದು ಅವರ ಜನ್ಮ ದಿನ. ಈ ಮಹಾನ್ ಪ್ರತಿಭೆ ಕರ್ನಾಟಕದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಇಂದಿಗೂ ಸ್ಮರಣೀಯ. ಕೃಷಿ, ಶಿಕ್ಷಣ ಸಂಸ್ಥೆ, ಮೈಸೂರ ಸ್ಯಾಂಡಲ್ ಸೋಪ್ ಕಾರ್ಖಾನೆ, ಗ್ರಂಥಾಲಯಗಳು, ಸಾಹಿತ್ಯ ಪರಿಷತ್ತು, ಕೈಗಾರಿಕೆ, ಬ್ಯಾಂಕಿಂಗ್, ಅಣೆಕಟ್ಟುಗಳು, ಕಟ್ಟಡಗಳಿಂದ ಹಿಡಿದು ಸಮಗ್ರ ಅಭಿವೃದ್ಧಿಯಲ್ಲಿ ಇವರ ಇಂಜಿನಿಯರಿಂಗ್ ಬುದ್ಧಿಮತ್ತೆ ಕೆಲಸ ಮಾಡಿದೆ. ಇದೇ ಕಾರಣಕ್ಕೆ ನಾಡು ಇಂದಿಗೂ ಅವರನ್ನು ನೆನಪಿಸುತ್ತಿದೆ; ಈ ದಿನವನ್ನು ಇಂಜಿನಿಯರ್ಗಳ ದಿನ ಎಂದು ಆಚರಿಸಲಾಗುತ್ತಿದೆ. ಆ ಕಾಲಘಟ್ಟಕ್ಕೂ ಈಗಿನ ಕಾಲಘಟ್ಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಆ ಕಾಲಘಟ್ಟದಲ್ಲಿ ಇಂದಿನಂತೆ ಎಲ್ಲವೂ ಗಣಕೀಕರಣಗೊಂಡಿರಲಿಲ್ಲ. ಈಗ ಎಲ್ಲವೂ ಗಣಕೀಕರಣಗೊಂಡಿದ್ದು, ಇಂಜಿನಿಯರಿಂಗ್ ಕ್ಷೇತ್ರದ ವ್ಯಾಪ್ತಿ ಮತ್ತು ವ್ಯಾಖ್ಯೆ ವಿಸ್ತಾರಗೊಂಡಿದೆ. ಇಷ್ಟಾದರೂ, ಇಂದಿನ ನಮ್ಮ ಯುವಕರ ಒಂದು ಮನಸ್ಥಿತಿ ಹೇಗಿದೆ ಎಂದರೆ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ಬಿಟ್ಟರೆ ಬೇರೊಂದು ಕೋರ್ಸ್ ಇಂಜಿನಿಯರಿಂಗ್ನಲ್ಲಿ ಇಲ್ಲ ಎಂಬಂತಿದೆ! ವಿಸ್ತಾರಗೊಂಡಿರುವ ಕ್ಷೇತ್ರದಲ್ಲಿ ಇಂಜಿನಿಯರಿಂಗ್ ಪದವಿ ಮಾಡಿಕೊಂಡು ನಿರುದ್ಯೋಗಿಗಳಾಗಿಯೋ, ಅಥವಾ ಇನ್ಯಾವುದೋ ಉದ್ಯೋಗಕ್ಕೆ ಹೋಗಬೇಕಾದ ಪರಿಸ್ಥಿತಿ ನಿಜವಾಗಿಯೂ ಇಲ್ಲ. ಇಂಜಿನಿಯರಿಂಗ್ನಲ್ಲಿ ಬಹಳಷ್ಟು ಉತ್ತಮ ಬೇಡಿಕೆಯ ಕೋರ್ಸ್ಗಳಿವೆ. ಅವುಗಳನ್ನು ಕಲಿತುಕೊಂಡು ಬದುಕು ರೂಪಿಸಿಕೊಳ್ಳಬಹುದು.
ದೇಶದಲ್ಲಿರುವ ಸಂಸ್ಥೆಗಳು: ಎಐಸಿಟಿಇ ಮಾಹಿತಿ ಪ್ರಕಾರ, ದೇಶದಲ್ಲಿ ಒಟ್ಟು 2,978 ಇಂಜಿನಿಯರಿಂಗ್ ಕಾಲೇಜುಗಳಿವೆ. ಇದರಲ್ಲಿ 15.48 ಲಕ್ಷ ವಿದ್ಯಾರ್ಥಿಗಳಿಗೆ ಕಲಿಯವುದಕ್ಕೆ ಅವಕಾಶವಿದೆ. ಆದರೆ, 2019-20ರಲ್ಲಿ ಅಡ್ಮಿಷನ್ ಆಗಿದ್ದು 12.86 ಲಕ್ಷ ಮಾತ್ರ. ಕಳೆದ 10 ವರ್ಷಗಳಲ್ಲೇ ಕನಿಷ್ಠ ಅಡ್ಮಿಷನ್ ಇದಾಗಿದೆ.
ದೇಶದ ಶೇ.10 ಸಂಸ್ಥೆಗಳಲ್ಲಷ್ಟೇ ಎಐ, ಡೇಟಾ ಸೈನ್ಸ್ ಕೋರ್ಸ್: ಆಲ್ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್(ಎಐಸಿಟಿಇ) ಮಾಹಿತಿ ಪ್ರಕಾರ 2019-20ರಲ್ಲಿ ದೇಶದ 127 ಡಿಪ್ಲೊಮಾ ಸಂಸ್ಥೆಗಳು, 663 ಪದವಿ ಕಾಲೇಜಗಳಷ್ಟೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಡೇಟಾ ಸೈನ್ಸ್ ಮತ್ತು ಅನಲಿಟಿಕ್ಸ್, ಬ್ಲಾಕ್ಚೇನ್, ಮಷಿನ್ ಲರ್ನಿಂಗ್, ರೊಬಾಟಿಕ್ಸ್ ಮುಂತಾದ ಕೋರ್ಸ್ಗಳಿವೆ. ನಿಖರವಾಗಿ ಹೇಳಬೇಕು ಎಂದರೆ 222 ಸಂಸ್ಥೆಗಳಲ್ಲಿ ಎಐ ಮತ್ತು ಮಷಿನ್ ಲರ್ನಿಂಗ್, 186 ಸಂಸ್ಥೆಗಳಲ್ಲಿ ಎಐ ಮತ್ತು ಡೇಟಾ ಸೈನ್ಸ್, 52 ಸಂಸ್ಥೆಗಳಲ್ಲಿ ಕಂಪ್ಯೂಟರ್ ಸೈನ್ಸ್, 45ರಲ್ಲಿ ಡಿಸೈನ್ ಕೋರ್ಸ್, 29 ಡೇಟಾಸೈನ್ಸ್ ಮತ್ತು ಎಐ ಕೋರ್ಸ್ಗಳಿವೆ.
ಪಿಯುಸಿ ಸೈನ್ಸ್ ಓದಿರಬೇಕಿಲ್ಲ!: ಸಾಂಪ್ರದಾಯಿಕ ಪದ್ಧತಿಯಂತೆ ಪಿಯುಸಿ ಸೈನ್ಸನಲ್ಲಿ ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ ಓದುವುದು ಕಡ್ಡಾಯವಾಗಿತ್ತು. ಇನ್ನು ಬಿ.ಇ./ಬಿ.ಟೆಕ್ ಮಾಡಬಯಸುವವರಿಗೆ ಇದು ಕಡ್ಡಾಯವಲ್ಲ ಎಂಬುದು ಎಐಸಿಟಿಇನ ಪರಿಷ್ಕೃತ ನಿಯಮ. ಇದರಂತೆ, ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಕಂಪ್ಯೂಟರ್ ವಿಜ್ಞಾನ, ಎಲೆಕ್ಟ್ರಾನಿಕ್ಸ್, ಮಾಹಿತಿ, ತಂತ್ರಜ್ಞಾನ, ಜೀವಶಾಸ್ತ್ರ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ತಾಂತ್ರಿಕ ವೃತ್ತಿಪರ ವಿಷಯ, ಕೃಷಿ, ಇಂಜಿನಿಯರಿಂಗ್, ಗ್ರಾಫಿಕ್ಸ್, ಬಿಸಿನೆಸ್ ಸ್ಟಡೀಸ್, ಉದ್ಯಮಶೀಲತೆ -ಇವುಗಳಲ್ಲಿ ಯಾವುದಾದ್ರೂ 3 ವಿಷಯ ಗಳೊಂದಿಗೆ ವಿದ್ಯಾರ್ಥಿಗಳು 10+2 ಉತ್ತೀರ್ಣರಾದರೆ ಸಾಕು.
ಪ್ರಾದೇಶಿಕ ಭಾಷೆಯಲ್ಲಿ ಕಲಿಕೆ: ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನ್ವಯ ಪ್ರಾದೇಶಿಕ ಭಾಷೆಗಳಲ್ಲಿಯೆ ಶಿಕ್ಷಣವನ್ನು ನೀಡಬೇಕೆಂಬ ನಿಯಮವನ್ನು ಸರ್ಕಾರ ಜಾರಿಗೊಳಿಸಿದೆ. ಈ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್ ಕಲಿಕೆ ಈಗ ಇನ್ನೂ ಸರಳವಾಗಲಿದೆ. ಕನ್ನಡದಲ್ಲಿ ಇಂಜಿನಿಯರಿಂಗ ಕಲಿಯಲು ಸಕಲ ಸಿದ್ದತೆಗಳನ್ನು ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ನಿರ್ಧರಿಸಿದೆ. ಅದಕ್ಕಾಗಿ ಕನ್ನಡದಲ್ಲಿ ಪಠ್ಯಪುಸ್ತಕಗಳನ್ನು ಪ್ರಕಟಿಸುವ ಕೆಲಸ ಪ್ರಗತಿಯಲ್ಲಿದೆ. ವಿತಾವಿ ಸಂಯೋಜಿತ 5 ಕಾಲೇಜುಗಳಲ್ಲಿ ಈ ಪ್ರಯೋಗ ನಡೆಯಲಿದೆ. ಕನ್ನಡಕ್ಕೆ ಹೊರತಾಗಿ ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಗುಜರಾತಿ, ಮಲಯಾಳಂ, ಅಸ್ಸಾಮೀಸ್, ಪಂಜಾಬಿ, ಒಡಿಯಾ ಸೇರಿ 11 ಪ್ರಾದೇಶಿಕ ಭಾಷೆಗಳಲ್ಲಿ ಇಂಜಿನಿಯರಿಂಗ್ ಕಲಿಕೆಗೆ ಎಐಸಿಟಿಇ ಅನುಮತಿ ನೀಡಿದೆ.
ಕೆಲವು ವಿಶೇಷ ಕೋರ್ಸ್ಗಳಿವು: ಇಲೆಕ್ಟ್ರಿಕಲ್, ಇಲೆಕ್ಟ್ರಾನಿಕ್ಸ್, ಸಿವಿಲ್, ಕೆಮಿಕಲ್, ಐಟಿ, ಐಪಿಇ, ಮೈನಿಂಗ್, ಸಿಲ್ಕ್, ಟೆಕ್ಸ್ಟೈಲ್, ಮೆಡಿಕಲ್, ಎನ್ವಿರಾನ್ವೆುಂಟಲ್ ಹೊರತುಪಡಿಸಿ ಹೊಸ ಕೋರ್ಸ್ಗಳೂ ಇವೆ. ಓಷಿಯನ್ ಇಂಜಿನಿಯರಿಂಗ್, ಅಗ್ರಿಕಲ್ಚರಲ್ ಇಂಜಿನಿಯರಿಂಗ್, ಸೌಂಡ್ ಇಂಜಿನಿಯರಿಂಗ್, ಎನರ್ಜಿ, ಎಥಿಕಲ್ ಹ್ಯಾಕಿಂಗ್, ಫೋಟೋನಿಕ್ಸ್ ಇಂಜಿನಿಯರಿಂಗ್, ಸ್ಪೋರ್ಟ್ಸ್ ಟೆಕ್ನಾಲಜಿ ಇಂಜಿನಿಯರಿಂಗ್, ಹೈಡ್ರಾಲಿಕ್ ಇಂಜಿನಿಯರಿಂಗ್, ಜೆನೆಟಿಕ್ಸ್, ಏರೋನಾಟಿಕಲ್, ಡೇರಿ, ಪವರ್, ಪ್ರೊಡಕ್ಷನ್, ಮೆರೈನ್, ನಾವೆಲ್, ಮೆಟಲರ್ಜಿ, ಆರ್ಕಿಟೆಕ್ಚರ್, ಫುಡ್ ಪ್ರೊಸೆಸಿಂಗ್ ಮುಂತಾದ ಇಂಜಿನಿಯರಿಂಗ್ ಕೋರ್ಸ್ಗಳಿವೆ.
ಅಮೆರಿಕದ ಸಿವಿಲ್ ಇಂಜಿನಿಯರ್ ಫ್ರೊಫೆಸರ್ ಹೆನ್ರಿಪೆಟ್ರೋಸ್ಕಿ ಇದನ್ನು ‘ಖ್ಚಜಿಛ್ಞಿ್ಚ ಜಿಠ ಚಚಿಟ್ಠಠಿ kಟಡಿಜ್ಞಿಜ, ಉಜಜ್ಞಿಛಿಛ್ಟಿಜ್ಞಿಜ ಚಚಿಟ್ಠಠಿ ಈಟಜ್ಞಿಜ’ ಎಂದು ಸರಳವಾಗಿ ತಿಳಿಸಿಕೊಟ್ಟಿದ್ದಾರೆ. ಅಂದರೆ, ಕಲಿತ ವಿಚಾರಗಳನ್ನು ನಿಜ ಜೀವನದಲ್ಲಿ ಅಳವಡಿಸುವುದು ತುಂಬಾ ಮಹತ್ವದ ವಿಚಾರ. ಹೀಗಿರುವಾಗ, ಇಂಜಿನಿಯರಿಂಗ್ ಪದವಿ ಮುಗಿಸಿ ಉದ್ಯೋಗ ಕ್ಷೇತ್ರಕ್ಕೆ ಇಳಿಯುವಾಗಲೇ ಕ್ಷೇತ್ರದ ನೈಜ ಸಮಸ್ಯೆ ಫ್ರೆಶರ್ಗಳಿಗೆ ಅರ್ಥವಾಗುವಂಥದ್ದು. ಅನೇಕ ಇಂಜಿನಿಯರಿಂಗ್ ಪದವೀಧರರಿಗೆ ತಮ್ಮ ಅರ್ಹತೆಗೆ ತಕ್ಕುದಾದ ಹುದ್ದೆ ಸಿಗುವುದಿಲ್ಲ; ಮಾತ್ರವಲ್ಲ ಇದರಿಂದ ಹತಾಶೆಗೆ ಒಳಗಾಗಿ ತಮ್ಮ ಕ್ಷೇತ್ರ ಬಿಟ್ಟು ಇತರ ಉದ್ಯೋಗಗಳತ್ತ ಗಮನ ಹರಿಸುತ್ತಾರೆ. ಇದು ವಿಷಾದನೀಯ ಬೆಳವಣಿಗೆ.
ಹಾಗಂತ ಉದ್ಯೋಗಾವಕಾಶ ಇಲ್ಲ ಎಂದಲ್ಲ. ಇಂಜಿನಿಯರ್ ಪದವೀಧರರಿಗೆ ಭಾರತದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಇದ್ದರೂ ಒಬ್ಬ ಅರ್ಹ ಪದವೀಧರನಿಗೆ ಸರಿಯಾದ ಹುದ್ದೆ ಯಾಕೆ ಲಭಿಸುವುದಿಲ್ಲ? ಪರಾಮಶಿಸಿದರೆ, ಇಲ್ಲಿ ಉದ್ಯೋಗಾರ್ಥಿಗಳ ಸಂದರ್ಶನದ ವೇಳೆ ಕೇವಲ ಅಂಕಗಳನ್ನಷ್ಟೇ ಅಲ್ಲ ಕೌಶಲಗಳನ್ನೂ ಪರಿಗಣಿಸುತ್ತಾರೆ. ಜತೆಗೆ ಅವನ ಉದ್ಯೋಗದ ಅನುಭವಗಳನ್ನು ಪರಿಗಣಿಸಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಒಬ್ಬ ಫ್ರೆಶರ್ಗೆ ಶೈಕ್ಷಣಿಕ ಅಂಕ, ಕೌಶಲಗಳು ಇದ್ದರೂ ಉದ್ಯೋಗ ಮರೀಚಿಕೆಯಾಗುತ್ತದೆ. ಅಥವಾ ಒಂದು ವೇಳೆ ಉದ್ಯೋಗ ದೊರಕಿದರೂ ಅನುಭವದ ಕೊರತೆಯ ಕಾರಣ ವೇತನವು ಕಡಿಮೆಯಾಗಿರುತ್ತದೆ. ಇಂತಹ ಸಂದರ್ಭಗಳಲ್ಲಿ ಆ ಉದ್ಯೋಗಾರ್ಥಿಯು ತನ್ನ ಕ್ಷೇತ್ರವನ್ನು ಬಿಟ್ಟು ಇತರ ಉದ್ಯೋಗಗಳತ್ತ ಗಮನ ಹರಿಸಬೇಕಾದ ಅನಿವಾರ್ಯತೆ ಒದಗಿಬರುತ್ತದೆ.
ಬದುಕು ಬದಲಿಸುವ ನಿರ್ಧಾರ: ಉದ್ಯೋಗದ ವಿಚಾರಕ್ಕೆ ಬಂದರೂ ತರಬೇತಿಯ ಕೊರತೆಯಿಂದ ಅಥವಾ ಕಲಿತ ವಿಚಾರಗಳನ್ನು ಅಗತ್ಯ ಸಂದರ್ಭದಲ್ಲಿ ಬಳಸಲು ಅರಿವಿಲ್ಲದೆ ಹಲವಾರು ಬಾರಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಸಹಜವಾಗಿಯೇ ಹೊಸಬರಲ್ಲಿ ಹಿಂಜರಿಕೆ ಕಂಡುಬರುತ್ತದೆ. ಕಾಲೇಜುಗಳಲ್ಲಿ ಕೇವಲ ಖಜಛಿಟ್ಟಢ ಮಾತ್ರವನ್ನಷ್ಟೇ ಕಲಿಸುತ್ತಾರೆ. ಆದರೆ ಕೆಲಸಕ್ಕೆ ಸೇರಿದಾಗ ಕಲಿತ ವಿಷಯಕ್ಕೂ ಎದುರಿಸುತ್ತಿರುವ ಸಮಸ್ಯೆಗಳಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಅದೃಷ್ಟವಶಾತ್ ಹೊಸ ತಲೆಮಾರಿಗೆ ಈ ಸಮಸ್ಯೆ ಇರಲಾರದು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಾಗುತ್ತಿದ್ದು, ಹೊಸ ರೀತಿಯ ಸವಾಲುಗಳನ್ನು ಎದುರಿಸಬೇಕಾಗಬಹುದು. ಆದರೆ, ಇಂತಹ ಸಮಸ್ಯೆಗಳೇ ಇಂಜಿನಿಯರ್ಗಳನ್ನು ಮಾನಸಿಕವಾಗಿ ದೃಢಪಡಿಸುತ್ತವೆ ಮತ್ತು ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತವೆ ಎಂದರೆ ತಪ್ಪಲ್ಲ.
ಶಾಲಾ ಹಂತದಲ್ಲಿ ವೃತ್ತಿ ಸಮಾಲೋಚನೆ (ಕರಿಯರ್ ಕೌನ್ಸೆಲಿಂಗ್)ಯು ಕೇವಲ ಕಾಲೇಜು ಅಥವಾ ವೃತ್ತಿಯ ಆಯ್ಕೆಗೆ ವಿದ್ಯಾರ್ಥಿಗಳಿಗೆ ನೆರವಾಗುವುದಕ್ಕಷ್ಟೆ ಸೀಮಿತವಾಗಿತ್ತು. ಆದರೆ, ಇಂದು ಹಾಗಲ್ಲ. ವೃತ್ತಿ ಸಮಾಲೋಚನೆ ಎಂಬುದು ವಿದ್ಯಾರ್ಥಿಗಳ ಭವಿಷ್ಯ ನಿರ್ಣಯಿಸುವ ವೇದಿಕೆಯಾಗಿ ರೂಪುಗೊಂಡಿದೆ. ಉದ್ಯೋಗಕ್ಕೆ ಪೂರಕವಾದ ವಿಷಯಗಳನ್ನು ಆಯ್ಕೆ ಮಾಡುವುದರಿಂದ ಹಿಡಿದು ಅವರವರ ಆಸಕ್ತಿ, ಕಲಿಕಾ ವಿಷಯಕ್ಕೆ ಸಂಬಂಧಿಸಿದ ಪ್ಯಾಷನ್, ತುಡಿತಗಳು ಇಲ್ಲಿ ನಿರ್ಣಾಯಕ ಅಂಶಗಳಾಗುತ್ತವೆ. ಉದ್ಯೋಗ ಕ್ಷೇತ್ರಗಳೂ ಈಗ ಮೊದಲಿನಂತಿಲ್ಲ. ಕಾಲಕಾಲಕ್ಕೆ ಅಪ್ಡೇಟ್ ಆಗುತ್ತಿವೆ. ಅದಕ್ಕೆ ತಕ್ಕಂತೆ ವೃತ್ತಿಪರತೆ, ಕೌಶಲಗಳನ್ನೂ ಅಪ್ಡೇಟ್ ಮಾಡಿಕೊಳ್ಳುವ ಬಹುದೊಡ್ಡ ಸವಾಲು ವಿದ್ಯಾರ್ಥಿ ಯುವ ಸಮೂಹದ ಎದುರಿಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಶಿಕ್ಷಣ ಕ್ಷೇತ್ರವೂ ಈಗ ಅಪ್ಡೇಟ್ ಆಗತೊಡಗಿದೆ. ಹೈಸ್ಕೂಲ್ಗಳಲ್ಲಿ ವೃತ್ತಿ ಸಮಾಲೋಚಕರು: ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈಗ ಎಂಟನೇ ತರಗತಿಯಿಂದಲೇ ವೃತ್ತಿ ಸಮಾಲೋಚನೆ ನಡೆಸಬೇಕಾದ್ದು ಇಂದಿನ ಅಗತ್ಯವಾಗಿ ಕಾಣತೊಡಗಿದೆ. ಪ್ರತಿಶಾಲೆಗಳಲ್ಲಿ ಈಗ ವೃತ್ತಿ ಸಮಾಲೋಚಕರನ್ನು ನೇಮಕ ಮಾಡಿಕೊಳ್ಳಬೇಕು. ಈ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಬೇಕು. ಇವರು ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗೆ ಅನುಗುಣವಾಗಿ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಲು, ಭವಿಷ್ಯ ಮತ್ತು ಸ್ವಂತಿಕೆ ರೂಪಿಸಲು ಶಿಕ್ಷಕರೊಡಗೂಡಿ ನೆರವಾಗಬೇಕು.
ಕಾಲೇಜುಗಳಲ್ಲಿ ಕರಿಯರ್ ಕೌನ್ಸೆಲರ್: ಕಾಲೇಜು ಹಂತ ದಾಟಿದ ಕೂಡಲೇ ಯುವ ಸಮುದಾಯ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತ ದೇಶದ ಭವಿಷ್ಯ ರೂಪಿಸಲು ಮುಂದಾಗುತ್ತಾರೆ. ಇದು ನಿರ್ಣಾಯಕ ಹಂತವಾಗಿದ್ದು, ಇಲ್ಲೂ ವೃತ್ತಿ ಸಮಾಲೋಚಕರ ನೆರವು ವಿದ್ಯಾರ್ಥಿಗಳಿಗೆ ಅಗತ್ಯವಿದೆ. ಸರಿಯಾದ ಕೌಶಲಗಳನ್ನು ರೂಢಿಸಿಕೊಳ್ಳಲು, ವಿಶೇಷ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಮುಂದುವರಿಯುವುದಕ್ಕೆ ಈ ಕ್ರಮ ನೆರವಾಗಬಲ್ಲದು.