ನೌಕಾಪಡೆ ನಮ್ಮ ಹೆಮ್ಮೆ; ಇಂದು ನೇವಿ ದಿನ..

ಸಾಂದರ್ಭಿಕ ಚಿತ್ರ
Published on
ಮೂರು ದಿಕ್ಕುಗಳಲ್ಲಿ ಸಾಗರ ಹೊಂದಿರುವ ಭಾರತ ಅಷ್ಟು ಸುಲಭವಾಗಿ ಸುಮ್ಮನಿರುವಂತಿಲ್ಲ. ಒಂದೆಡೆ ಚೀನಾ, ಮತ್ತೊಂದೆಡೆ ಪಾಕಿಸ್ತಾನ ಭಾರತದಲ್ಲಿ ಅಶಾಂತಿ ಸೃಷ್ಟಿಸುವ ಸಂಚನ್ನು ಹೆಣೆಯುತ್ತಲೇ ಇರುತ್ತವೆ. ಈ ಷಡ್ಯಂತ್ರದ ಭಾಗವಾಗಿ ಉಗ್ರರು ಕೂಡ ಸಮುದ್ರ ಮಾರ್ಗವಾಗಿ ದಾಳಿ ನಡೆಸಲು ಯತ್ನಿಸುತ್ತಾರೆ. ಇಂಥ ಸನ್ನಿವೇಶದಲ್ಲಿ ದೇಶವನ್ನ್ಲು ಕಣ್ಣಿಟ್ಟು ಕಾಯುವ ನಮ್ಮನೌಕಾಪಡೆಯ ಶೌರ್ಯ, ಸೇವಾನಿಷ್ಠೆಯನ್ನು ಎಷ್ಟು ಹೊಗಳಿದರೂ ಕಡಿಮೆಯೇ. ನೌಕಾಪಡೆ ದಿನದ ನಿಮಿತ್ತ ನಮ್ಮ ನೌಕಾಸೇನೆಯ ಕುರಿತ ಅವಲೋಕನ ಇಲ್ಲಿದೆ.

| ಬಿ.ಎಸ್. ಮಂಜುನಾಥ

ದಿನದ ವೈಶಿಷ್ಟ್ಯ

ಡಿ.4 ಭಾರತ ತನ್ನ ನೌಕಾಸೇನೆಯಿಂದ ಪಾಕಿಸ್ತಾನದ ವಿರುದ್ಧ ವಿಜಯ ಸಾಧಿಸಿದ ದಿನ. 1971ರ ಭಾರತ-ಪಾಕ್ ಯುದ್ಧದಲ್ಲಿ ಭಾರತೀಯ ನೌಕಾಪಡೆ ಮೊದಲ ಬಾರಿ ಹಡಗು ನಿಗ್ರಹ ಕ್ಷಿಪಣಿ ಬಳಸಿ ಪಾಕ್​ನ ಮೂರು ಯುದ್ಧ ಹಡಗುಗಳನ್ನು ಕರಾಚಿಯ ಸಮುದ್ರದಲ್ಲಿ ಹೊಡೆದುಹಾಕಿತು. ಆ ದಿನದ ನೆನಪಿಗಾಗಿ ನೌಕಾದಿನ ಆಚರಿಸಲಾಗುತ್ತದೆ.

ಮಹತ್ವದ ವಿಚಾರಗಳು

  • ಬ್ರಿಟಿಷರು 1612ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ನೌಕಾಪಡೆ ಸ್ಥಾಪಿಸಿದರು. 1950 ಡಿ.26ರಂದು ಇದಕ್ಕೆ ಭಾರತೀಯ ನೌಕಾಪಡೆ ಎಂದು ನಾಮಕರಣ ಮಾಡಲಾಯಿತು.
  • ಭಾರತೀಯ ನೌಕಾಪಡೆ 1961ರಲ್ಲಿ ಗೋವಾ ವಿಮೋಚನೆ ಸಂದರ್ಭದಲ್ಲಿ ಪೋರ್ಚುಗೀಸ್ ನೌಕಾಪಡೆ ವಿರುದ್ಧ ಮೊದಲ ಕಾರ್ಯಾಚರಣೆ ನಡೆಸಿತು
  • ಬ್ರಹ್ಮೋಸ್ ಕ್ಷಿಪಣಿ ಭಾರತೀಯ ನೌಕಾಪಡೆಯ ಅತ್ಯಂತ ವೇಗದ ನೌಕಾಕ್ಷಿಪಣಿ ಎಂಬ ಗೌರವಕ್ಕೆ ಪಾತ್ರವಾಗಿದೆ
  • ಕೇರಳದ ಕಣ್ಣೂರಿನ ಎಳಿಮಲಾ ನೇವಲ್ ಅಕಾಡೆಮಿ ಏಷ್ಯಾದಲ್ಲೇ ದೊಡ್ಡ ನೇವಲ್ ಅಕಾಡೆಮಿ. ಮಹಿಳಾ ನೌಕಾ ಪೈಲಟ್ ಶುಭಾಂಗಿ ಸ್ವರೂಪ್ ಇಲ್ಲಿ ನೇಮಕಗೊಂಡಿದ್ದಾರೆ.
  • ಛತ್ರಪತಿ ಶಿವಾಜಿ ‘ಭಾರತೀಯ ನೌಕಾಪಡೆಯ ಜನಕ’ ಎಂದು ಖ್ಯಾತಿ ಪಡೆದಿದ್ದರು.
  • ಐಎನ್​ಎಸ್ ವಿರಾಟ್, ಭಾರತೀಯ ನೌಕಾನೆಲೆಯ ಅತ್ಯಂತ ಹಳೆಯ ವಿಮಾನ ವಾಹಕ ನೌಕೆ.

7516 ಕಿ.ಮೀ: ಭಾರತದ ನೌಕಾ ವ್ಯಾಪ್ತಿ

ಭಾರತದ ಗುರಿ, ನಿರೀಕ್ಷೆ: 3 ವಿಮಾನವಾಹಕ ನೌಕೆಗಳು, 4 ನ್ಯೂಕ್ಲಿಯರ್ ಸಬ್​ವೆುರಿನ್, 16 ಸಾಂಪ್ರದಾಯಿಕ ಸಬ್​ವೆುರಿನ್, 32 ದಾಳಿ ಸಮರ ನೌಕೆ, ಸೈನಿಕರನ್ನು ಕ್ಷಿಪ್ರಗತಿಯಲ್ಲಿ ದೂರದ ಪ್ರದೇಶಗಳಿಗೆ ಸಾಗಿಸಬಲ್ಲ 4 ಸಾಗಣೆ ನೌಕೆಗಳು, 4 ತೈಲ ಸಾಗಣೆ ಟ್ಯಾಂಕರ್, 12 ಕ್ಷಿಪಣಿ ಉಡಾವಣಾ ನೌಕೆ, 12 ಮೈನ್ ನಾಶಕ ನೌಕೆ, 12 ಗಸ್ತು ನೌಕೆ , 20 ವೇಗವಾಗಿ ದಾಳಿ ನಡೆಸುವ ನೌಕೆ, 12 ಗಸ್ತು ವಿಮಾನ, 24 ಮಲ್ಟಿರೋಲ್ ಮತ್ತು 36 ಲಘು ಹೆಲಿಕಾಪ್ಟರ್​ಗಳನ್ನು ಹೊಂದುವ ಮೂಲಕ ಭಾರತ ತನ್ನ ನೌಕಾದಳವನ್ನು ಇನ್ನಷ್ಟು ಬಲಗೊಳಿಸಲು ಉದ್ದೇಶಿಸಿದೆ.

ಆತ್ಮನಿರ್ಭರ: 4 ದೇಶೀಯ ನಿರ್ವಿುತ ಜಲಾಂತರ್ಗಾಮಿ ಯುದ್ಧ ನೌಕೆಗಳಾದ ಐಎನ್​ಎಸ್ ಕವರಟ್ಟಿ ನೌಕಾಪಡೆಗೆ ಸೇರ್ಪಡೆಯಾಗಿವೆ. ಹಡಗಿನಲ್ಲಿ ಶೇ.90 ಸ್ಥಳೀಯ ಸಾಧನ, ಸಲಕರಣೆ ಬಳಸಲಾಗಿದೆ.

ನಿರ್ಮಾಣಕ್ಕೂ ಸೈ: ಹಲವು ಸ್ವದೇಶಿ ನಿರ್ವಿುತ ಯುದ್ಧನೌಕೆ, ಸಬ್​ವೆುರಿನ್​ಗಳನ್ನು ಸೇವೆಗೆ ನಿಯೋಜಿಸಲಾಗಿದೆ. ಕೊಚ್ಚಿ, ವಿಶಾಖಪಟ್ಟಣ, ಮುಂಬೈ ಸೇರಿ ವಿವಿಧೆಡೆ ಯುದ್ಧನೌಕೆ ಕಟ್ಟುವ ಕೆಲಸ ನಡೆಯುತ್ತಿದೆ.

ಪ್ರಮುಖ ಕಾರ್ಯಾಚರಣೆ

  • ಆಪರೇಷನ್ ಕ್ಯಾಕ್ಟಸ್- ಮಾಲ್ಡೀವ್ಸ್​ನಲ್ಲಿ ಉಗ್ರರ ವಿರುದ್ಧ ನಡೆದ ಕಾರ್ಯಾಚರಣೆ
  • ಆಪರೇಷನ್ ಲೀಚ್-ಮ್ಯಾನ್ಮಾರ್​ನಲ್ಲಿ ನಡೆದ ಕಾರ್ಯಾಚರಣೆ
  • ಆಪರೇಷನ್ ಪವನ್-ಶ್ರೀಲಂಕಾದಲ್ಲಿ ನಡೆದ ಕಾರ್ಯಾಚರಣೆ
  • ಕಾರ್ಗಿಲ್ ಯುದ್ಧ: ಆಪರೇಷನ್ ಬ್ಲಾ್ಯಕ್ ಟೊರ್ನಾಡೊ, ಆಪರೇಷನ್ ಸೈಕ್ಲೋನ್
  • ಮುಂಬೈ ದಾಳಿ- 2008ರಲ್ಲಿ ಉಗ್ರರ ದಾಳಿಯನ್ನು ಹತ್ತಿಕ್ಕಿದ್ದು

ಹೆಗ್ಗಳಿಕೆಗಳು

  • ಭಾರತೀಯ ನೌಕಾಪಡೆ ಜಗತ್ತಿನ 5ನೇ ಅತಿ ದೊಡ್ಡ ನೌಕಾಪಡೆ
  • 80 ಸಾವಿರ ಜನರು ಕಾರ್ಯ ನಿರತ.
  • ಏಷ್ಯಾ ಖಂಡದಲ್ಲಿ ರುವ 2 ವಾಯು ಯುದ್ಧನೌಕೆಗಳಲ್ಲಿ ಐಎನ್​ಎಸ್ ವಿರಾಟ್ ಒಂದು
  • 2023ರ ವೇಳೆಗೆ ವಿಶ್ವದ ಶಕ್ತಿಶಾಲಿ ನೌಕಾಸೇನೆ ಹೊಂದಿರುವ 3ನೇ ರಾಷ್ಟ್ರದ ಗೌರವ ಭಾರತಕ್ಕೆ

ಭಾರತದ ನೌಕಾಶಕ್ತಿ

  • 67,252 ಪೂರ್ಣ ಪ್ರಮಾಣದ ಅಧಿಕಾರಿಗಳು
  • 55,000 ಅರೆಕಾಲಿಕ ಸಿಬ್ಬಂದಿ
  • 137 ದೊಡ್ಡ ಗಾತ್ರದ ಯುದ್ಧ ನೌಕೆ, 14 ಚಿಕ್ಕ ಯುದ್ಧನೌಕೆಗಳಿವೆ
  • 300 ವಿಮಾನಗಳಿವೆ
  • 1-ವಿಮಾನ ಹೊತ್ತೊಯ್ಯುವ ನೌಕೆ,
  • 1-ಭೂಮಿ ಮತ್ತು ನೀರಿನ ಮೇಲೆ ಚಲಿಸುವ ವಾಹನ ನೌಕೆ
  • 8-ಲ್ಯಾಂಡಿಂಗ್ ನೌಕೆ
  • 22-ಜಲಾಂತರ್ಗಾಮಿ ನೌಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net