

ಎಬಿಸಿ ಜ್ಯೂಸ್ ಎಂದೇ ಕರೆಯುವ ಇದನ್ನು ಆಪಲ್, ಬೀಟ್ರೂಟ್ ಮತ್ತು ಕ್ಯಾರೆಟ್ ಮೂರನ್ನೂ ಹಾಕಿ ತಯಾರಿಸಿ ಸೋಸಿ (ಬೇಕಿದ್ದರೆ ನಿಂಬು ಸೇರಿಸಬಹುದು) ಪ್ರತಿನಿತ್ಯ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಚೈನೀಸ್ ಹರ್ಬಲಿಸ್ಟ್ ನಲ್ಲಿ ಶ್ವಾಸಕೋಶದ ಕ್ಯಾನ್ಸರ್ಗೆ ಮದ್ದಾಗಿ ಬಳಕೆಯಾದ ಈ ಪಾನೀಯ ಈಗ ಅದರಲ್ಲಿರುವ ವಿವಿಧ ಉಪಯೋಗಗಳಿಂದ ದೇಶಾದ್ಯಂತ ಹೆಚ್ಚು ಮಹತ್ವ ಪಡೆದಿದೆ. ವಿಟಮಿನ್ ಎ, ಬಿ ಕಾಂಪ್ಲೆಕ್ಸ್, ಸಿ, ಇ ಮತ್ತು ಕೆ ಹೆಚ್ಚು ಇರುವುದರಿಂದ ಚರ್ಮವನ್ನು ಆರೋಗ್ಯವಾಗಿ ಇಡುವ ಜತೆಗೆ ಮೊಡವೆ, ಕಪ್ಪು ಕಲೆ ಬರದಂತೆ ತಡೆಯುತ್ತದೆ. ಕ್ರಮೇಣ ಮೈಬಣ್ಣವನ್ನು ತಿಳಿಯಾಗಿಸುತ್ತದೆ.
ಇದರಲ್ಲಿ ಕಡಿಮೆ ಕ್ಯಾಲರಿ ಮತ್ತು ಅಧಿಕ ಫೈಬರ್ ಇರುವುದರಿಂದ ದೇಹದ ತೂಕ ಇಳಿಸಲು ಸಹಕಾರಿ. ಶೀತ, ಅನಿಮಿಯಾ, ಅಸ್ತಮಾ ಇರುವವರಿಗೆ ಈ ಜ್ಯೂಸ್ ಮದ್ದು. ವಿಟಮಿನ್ ಎ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕಣ್ಣಿನ ಸೌಂದರ್ಯಕ್ಕೂ ಉಪಯುಕ್ತ. ದೃಷ್ಟಿಯನ್ನು ಹೆಚ್ಚು ಮಾಡುವ ಜತೆಗೆ ಕಣ್ಣಿನ ಆಯಾಸ ಕಡಿಮೆ ಮಾಡುತ್ತದೆ. ಯಾರಾದರು ಹತ್ತಿರ ಬಂದರೆ ಬಾಯಿ ಗಬ್ಬು ನಾರುತ್ತದೆ ಅಂದುಕೊಳ್ಳುವವರು ಈ ಪಾನೀಯ ಕುಡಿದು ಬಾಯಿ ವಾಸನೆ ಕಡಿಮೆ ಮಾಡಿಕೊಳ್ಳಬಹುದು.