

ಗ್ಯಾಂಗ್ಟಾಕ್ (ಸಿಕ್ಕಿಂ): ಹಿಮಾಲಯ ರಾಜ್ಯ ಸಿಕ್ಕಿಂನಲ್ಲಿ 3640 ಮೀಟರ್ ಎತ್ತರದಲ್ಲಿ ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿ ಕಾಣಿಸಿಕೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಹುಲಿಗಳು ಕಾಣಿಸಿಕೊಂಡಿರುವ ದೇಶದ ಅತಿ ಎತ್ತರದ ಪ್ರದೇಶ ಇದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಹುಲಿ ಕಾಣಿಸಿಕೊಂಡಿರುವ ದೃಶ್ಯ ಸಿಸಿ ಕ್ಯಾಮೆರಾ ಸೆರೆಹಿಡಿದಿದೆ.
ಸಿಕ್ಕಿಂನ ಪಾಕ್ಯೊಂಗ್ ಜಿಲ್ಲೆಯ ಪಂಗೋಲಖಾ ವನ್ಯಜೀವಿ ಅಭಯಾರಣ್ಯದಲ್ಲಿ ಫೆ.25 ರಂದು ಫೋಟೋವನ್ನು ಸೆರೆಹಿಡಿಯಲಾಗಿದೆ.
ಅಧಿಕಾರಿಗಳ ಪ್ರಕಾರ, ಅರುಣಾಚಲ ಪ್ರದೇಶದಲ್ಲಿ ಇದಕ್ಕೂ ಮೊದಲು 3,630 ಮೀಟರ್ ಎತ್ತರದಲ್ಲಿ ಹುಲಿಗಳು ಕಾಣಿಸಿಕೊಂಡಿದ್ದವು. ಇದು ಇಲ್ಲಿತನಕ ಇರುವ ದಾಖಲೆಯಾಗಿತ್ತು.
ವನ್ಯಜೀವಿ ಮೀಸಲು ಪ್ರದೇಶದಲ್ಲಿ ಅಳವಡಿಸಲಾಗಿರುವ ಕ್ಯಾಮೆರಾ ಟ್ರ್ಯಾಪ್‌ಗಳು 3640 ಮೀಟರ್ ಎತ್ತರದಲ್ಲಿ ಹುಲಿ ವಿಶ್ರಮಿಸುತ್ತಿರುವುದನ್ನು ಸೆರೆಹಿಡಿದಿವೆ. ಹುಲಿಗಳು ಕಾಣಿಸಿಕೊಂಡಿರುವ ಭಾರತದ ಅತಿ ಎತ್ತರದ ಪ್ರದೇಶ ಇದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸಿಕ್ಕಿಂನ ಪಾಕ್ಯೊಂಗ್ ಜಿಲ್ಲೆಯ ಪಂಗೋಲಖಾ ವನ್ಯಜೀವಿ ಅಭಯಾರಣ್ಯದಲ್ಲಿ ಫೆಬ್ರವರಿ 25 ರಂದು ಈ ಫೋಟೋವನ್ನು ಸೆರೆಹಿಡಿಯಲಾಗಿದೆ. ಬಿಎನ್ಎಚ್ಎಸ್ ವಿಜ್ಞಾನಿಗಳಾದ ಅಥ್ರವ್ ಸಿಂಗ್ ಮತ್ತು ಇತ್ಸಿಮಾದ್ರಿ ಅವರು ಕ್ಯಾಮರಾ ಟ್ರ್ಯಾಪ್ ಸಮೀಕ್ಷೆಯನ್ನು ನಡೆಸಿದ್ದರು.
ಇದರಲ್ಲಿ 3640 ಮೀಟರ್ ಎತ್ತರದಲ್ಲಿ ನಮ್ಮ ರಾಷ್ಟ್ರೀಯ ಪ್ರಾಣಿ ಹುಲಿಯ ಅತ್ಯಧಿಕ ಎತ್ತರದಲ್ಲಿ ಕಾಣಿಸಿಕೊಂಡಿರುವುದನ್ನು ದಾಖಲಿಸಿದ್ದಾರೆ ಎಂದು ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಬುಧವಾರ ತನ್ನ ಎಕ್ಸ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದೆ. ಫೇಸ್ಬುಕ್ನ ಎಚ್ಟಿ ಚಾನೆಲ್‌ನಲ್ಲಿ ಬ್ರೇಕಿಂಗ್ ನ್ಯೂಸ್‌ನೊಂದಿಗೆ ಟ್ಯೂನ್ ಮಾಡಿ ಈ ದಾಖಲೆಯನ್ನು ಜಗಜ್ಜಾಹೀರು ಮಾಡಲಾಗಿತ್ತು.
"ಮಧ್ಯ ಏಷ್ಯಾದ ಫ್ಲೈವೇನಲ್ಲಿ ಬೀಳುವ ಕೆಲವು ಜಲಮೂಲಗಳನ್ನು ಅಧ್ಯಯನ ಮಾಡಲು ನಡೆಯುತ್ತಿರುವ ಯೋಜನೆಯ ಭಾಗವಾಗಿ ಪಂಗೋಲಖಾ ಮೀಸಲು ಪ್ರದೇಶದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದು ಬಿಎನ್ಎಚ್ಎಸ್ ಮತ್ತು ಸಿಕ್ಕಿಂ ಅರಣ್ಯ ಇಲಾಖೆಯ ಜಂಟಿ ಕಸರತ್ತಾಗಿದೆ ಎಂದು ಸಿಕ್ಕಿಂನಲ್ಲಿನ ಯೋಜನೆಗೆ ಸಂಬಂಧಿಸಿದ ಬಿಎನ್ಎಚ್ಎಸ್ ವಿಜ್ಞಾನಿಗಳಲ್ಲಿ ಒಬ್ಬರಾದ ಹಿಮಾದ್ರಿ ಶೇಖರ್ ಮೊಂಡಲ್ ಹೇಳಿದರು.
"ಈ ಹಿಂದೆ ಪಂಗೋಲಖಾದಲ್ಲಿ ಹುಲಿಗಳು ಕಾಣಿಸಿಕೊಂಡಿವೆ. ಆದರೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ ಈಗ ಸಾಕ್ಷಿ ಸಿಕ್ಕಂತಾಗಿದೆ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಸಿಕ್ಕಿಂನ ಅರಣ್ಯ ಮತ್ತು ಪರಿಸರ ಇಲಾಖೆಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಹೇಳಿದರು.
ಭೂತಾನ್‌ನಲ್ಲಿ ಹುಲಿಗಳು 4,000 ಮೀಟರ್‌ಗಿಂತಲೂ ಹೆಚ್ಚು ಎತ್ತರದಲ್ಲಿ ಕಂಡುಬಂದಿವೆ. ಸಿಕ್ಕಿಂ ಅರಣ್ಯವು ಭೂತಾನ್ ಮತ್ತು ಪಶ್ಚಿಮ ಬಂಗಾಳದ ಕಾಡುಗಳೊಂದಿಗೆ ಸಂಪರ್ಕವನ್ನು ಹೊಂದಿದೆ.