More

    ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ಒತ್ತಾಯ

    ಅಯೋಧ್ಯೆ: ಸುಮಾರು 500 ವರ್ಷಗಳ ಸುದೀರ್ಘ ಹೋರಾಟದ ನಂತರ, ರಾಮ್ ಲಾಲಾ ವಿಗ್ರಹದ ಪ್ರತಿಷ್ಠಾಪನೆ ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ನಡೆಯಲಿದೆ. ಈ ದಿನವು ಇಡೀ ದೇಶಕ್ಕೆ ಅತ್ಯಂತ ದೊಡ್ಡ ಮತ್ತು ಐತಿಹಾಸಿಕ ಕ್ಷಣವಾಗಿದೆ. ಈ ಕಾರಣಕ್ಕಾಗಿಯೇ ಸಂತ ಸಮಾಜವು ಜನವರಿ 22, 2024 ರಂದು ಇಡೀ ದೇಶಕ್ಕೆ ರಜಾದಿನವನ್ನು ಘೋಷಿಸಲು ಸರ್ಕಾರವನ್ನು ಒತ್ತಾಯಿಸಲು ಪ್ರಾರಂಭಿಸಿದೆ. ಅಖಿಲ ಭಾರತ ಸಂತ ಸಮಿತಿಯ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷ ಮಹಂತ್ ಅನಿಕೇತ್ ಶಾಸ್ತ್ರಿ ಅವರು ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರದ ಉದ್ಘಾಟನೆಯ ದಿನವಾದ ಜನವರಿ 22, 2024 ಅನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಬೇಕು ಎಂದು ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.    

    ಮಹಂತ್ ಅನಿಕೇತ್ ಶಾಸ್ತ್ರಿ ಮಾತನಾಡಿ, ಇದು ಸಮಸ್ತ ಹಿಂದೂಗಳಿಗೆ ಸಂಭ್ರಮದ ದಿನವಾಗಿದೆ. ಭವ್ಯ ರಾಮಮಂದಿರ ಉದ್ಘಾಟನೆಗೊಳ್ಳಲಿರುವ ಜನವರಿ 22 ಅನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲು ನಾನು ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರಗಳಿಗೆ ಮನವಿ ಮಾಡುತ್ತೇನೆ. ಈ ಐತಿಹಾಸಿಕ ಕ್ಷಣವನ್ನು ಎಲ್ಲಾ ದೇಶವಾಸಿಗಳು ವೀಕ್ಷಿಸಬಹುದು ಎಂದರು. 

    ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಮತ್ತು ಉಡುಪಿ ಪೇಜಾವರ ಮಠದ ಮುಖ್ಯಸ್ಥ ಶ್ರೀ ವಿಶ್ವಪ್ರಸನ್ನ ತೀರ್ಥರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಜನವರಿ 22 ರಂದು ಮೂರ್ತಿ ಪ್ರತಿಷ್ಠಾಪನೆಯ ಸಮಯದಲ್ಲಿ ಭೇಟಿ ನೀಡಲಿದ್ದಾರೆ. ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ‘ಅಭಿಜೀತ್ ಮುಹೂರ್ತ’ದಲ್ಲಿ ಮಂದಿರದಲ್ಲಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ಭದ್ರತಾ ಕಾರಣಗಳಿಗಾಗಿ, ಉದ್ಘಾಟನಾ ದಿನದಂದು ಆಹ್ವಾನಿತ ಅತಿಥಿಗಳಿಗೆ ಮಾತ್ರ ದೇವಾಲಯಕ್ಕೆ ಪ್ರವೇಶಿಸಲು ಅವಕಾಶವಿರುತ್ತದೆ. ಉದ್ಘಾಟನೆಗೆ ಐದು ದಿನಗಳ ಮುಂಚೆಯೇ ದೇವಾಲಯದ ಆಚರಣೆಗಳು ಪ್ರಾರಂಭವಾಗಲಿವೆ.

    ಜನವರಿ 23 ರಿಂದ ಭಕ್ತರಿಗೆ ದರ್ಶನ
    ಭಗವಾನ್ ರಾಮನ ವಿಗ್ರಹವು ಐದು-ಆರು ಅಡಿ ಎತ್ತರದಲ್ಲಿದೆ. ಜನವರಿ 17 ರಂದು ಮೆರವಣಿಗೆಯಲ್ಲಿ ಸರಯು ನದಿಗೆ ಕೊಂಡೊಯ್ಯಲಾಗುತ್ತದೆ. ಮಹಾಮಸ್ತಕಾಭಿಷೇಕದ ನಂತರ ಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಗುವುದು. ಜನವರಿ 18 ರಂದು ದೇವಸ್ಥಾನದ ಗರ್ಭಗುಡಿಯಲ್ಲಿ ಇಡಲಾಗುವುದು. ಇದೇ ದಿನದಿಂದ ಮುಂದಿನ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ. ಜ.21ರಂದು ಮಹಾಮಸ್ತಕಾಭಿಷೇಕಕ್ಕೆ ಸಿದ್ಧತೆ ನಡೆಸಲಾಗುವುದು ಎಂದು ಧಾರ್ಮಿಕ ಮುಖಂಡರು ತಿಳಿಸಿದರು.  

    ಮುಂದಿನ 48 ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳು ಮುಂದುವರಿಯಲಿದ್ದು, ಈ ಸಂದರ್ಭದಲ್ಲಿ ಭಕ್ತರು ಅಯೋಧ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ. ಪೇಜಾವರ ಸಂತರು ಟ್ರಸ್ಟ್‌ನ ಇತರ ಸದಸ್ಯರೊಂದಿಗೆ ಅಕ್ಟೋಬರ್ 25 ರಂದು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಉದ್ಘಾಟನೆಗೆ ಆಹ್ವಾನಿಸಿದ್ದರು. ಈ ಬೃಹತ್ ಕಾರ್ಯಕ್ರಮಕ್ಕೆ ಅಯೋಧ್ಯೆಯಲ್ಲಿ ಭರದ ಸಿದ್ಧತೆ ನಡೆದಿದೆ. 

    ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ; ಅರ್ಚಕರ ತಂಡ ಮುನ್ನಡೆಸಲಿರುವ ಕಾಶಿಯ ವೇದ ವಿದ್ವಾಂಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts