ನೌಕರರ ಮಕ್ಕಳಿಗೆ ಪಿಂಚಣಿ ಸೌಲಭ್ಯ ಸಿಗುವುದೇ? | ಸರ್ಕಾರಿ ಕಾರ್ನರ್​

Pension
Published on

ಪ್ರಶ್ನೆ: ನೌಕರರ ಮಕ್ಕಳಿಗೆ ಪಿಂಚಣಿ ಸೌಲಭ್ಯ ನನ್ನ ತಂದೆ ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿರುತ್ತಾರೆ. ನನ್ನ ತಾಯಿ ಮರಣ ಹೊಂದಿದ್ದು, ನನ್ನ ಗಂಡ ಕೂಡ ನಿಧನರಾಗಿರುವ ಕಾರಣ 2 ಮಕ್ಕಳ ಸಹಿತ ತಂದೆ ಜತೆಯಲ್ಲಿ ನಾನು ವಾಸವಾಗಿದ್ದೇನೆ. ಹಾಗಾಗಿ, ನನ್ನ ತಂದೆ ಮರಣಾಂತರ ಪಿಂಚಣಿ ಸೌಲಭ್ಯ ವಿಧವೆಯಾದ ನನಗೆ ಸಿಗುವುದೇ?

| ಸುನೀತಾ, ಚಾಮರಾಜನಗರ 

ಉತ್ತರ: 2002ರ ಕರ್ನಾಟಕ ಸರ್ಕಾರಿ ನೌಕರರ (ಕುಟುಂಬ ಪಿಂಚ) ನಿಯಮಾವಳಿಯ ನಿಯಮ 9ರಂತೆ ಸರ್ಕಾರಿ ನೌಕರನ ಮಗಳು 21 ವರ್ಷಗಳ ವಯೋಮಿತಿ ಹೊಂದುವವರೆಗೆ ನಿವೃತ್ತ ನೌಕರ ನಿಧನವಾದರೆ ಕುಟುಂಬ ಪಿಂಚ ಲಭ್ಯವಾಗುತ್ತದೆ. ಅಲ್ಲದೆ ಮಾನಸಿಕ ಅಸ್ವಸ್ಥರು, ದೈಹಿಕ ಅಂಗವಿಕಲರಾಗಿದ್ದು, ಜೀವನೋಪಾಯ ಸಾಧ್ಯವಾಗದಂಥ ಸ್ಥಿತಿಯಲ್ಲಿದ್ದರೆ, ಎಷ್ಟೇ ವಯಸ್ಸಾಗಿದ್ದರು ಪಿಂಚಣಿ ಸಿಗುತ್ತದೆ. ಆದರೆ, ವಿಧವೆ ಮಗಳಾದ ನಿಮಗೆ ಈ ಕುಟುಂಬ ಪಿಂಚಣಿ ಲಭ್ಯವಾಗುವುದಿಲ್ಲ. ಹೆಚ್ಚಿನ ವಿವರಗಳಿಗೆ ಇದೇ ಲೇಖಕರ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು ಪುಸ್ತಕ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net