ನೌಕರನಿಗೆ ತನ್ನ ಕೆಲಸ ತೃಪ್ತಿಕರ ಎಂದು ಸಾಬೀತುಪಡಿಸಲು ಇರುವ ಆಧಾರ ಯಾವುದು? | ಸರ್ಕಾರಿ ಕಾರ್ನರ್​

sarkari-corner4
Published on

ಪ್ರಶ್ನೆ: ಸರ್ಕಾರಿ ಇಲಾಖೆಯೊಂದರಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ 15 ವರ್ಷಗಳಿಂದ ನಾನು ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಕಡ್ಡಾಯವಾಗಿ ನಿವೃತ್ತಿಗೊಳಿಸುವ ಕ್ರಮ ಜಾರಿಯಾಗುತ್ತಿದೆ. ಇದಕ್ಕೆ ಕಾರಣ ನನ್ನ ಕೆಲಸ-ಕಾರ್ಯಗಳು ತೃಪ್ತಿಕರವಾಗಿಲ್ಲ ಎಂಬುದು. ಆದ್ದರಿಂದ ಸರ್ಕಾರಿ ನೌಕರನಿಗೆ ತನ್ನ ಕೆಲಸ-ಕಾರ್ಯಗಳು ತೃಪ್ತಿಕರವಾಗಿದೆಯೆಂದು ಸಾಬೀತುಪಡಿಸಲು ಯಾವುದು ಆಧಾರವಾಗುತ್ತದೆ?

| ಜಯಪ್ರಕಾಶ್, ಚಿಕ್ಕಮಗಳೂರು

ಉತ್ತರ: ಸರ್ಕಾರಿ ನೌಕರನ ಹಿಂದಿನ 10 ವರ್ಷಗಳ ಕಾಲಾವಧಿಯಲ್ಲಿ ಬಹುಪಾಲು 6 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಲ್ಲಿನ ಅವನ/ಳ ಕಾರ್ಯ ನಿರ್ವಹಣಾ ವರದಿಗಳಲ್ಲಿ ಯಾವುದೇ ಒಂದು ಪ್ರತಿಕೂಲ ಷರಾಗಳು ಇಲ್ಲದಿದ್ದಲ್ಲಿ ಅದೇ ಅವನಿಗೆ ತನ್ನ ಕೆಲಸ-ಕಾರ್ಯಗಳು ತೃಪ್ತಿಕರವಾಗಿದೆಯೆಂದು ಸಾಬೀತು ಪಡಿಸಲು ಆಧಾರವಾಗುತ್ತದೆಂದು ಸವೋಚ್ಚ ನ್ಯಾಯಾಲಯವು ಜೆ.ಡಿ.ಶ್ರೀವಾಸ್ತವ ವಿರುದ್ಧ ಮದ್ಯಪ್ರದೇಶ ರಾಜ್ಯ ಸರ್ಕಾರ(ಎಐಆರ್1984 (ಎಸ್​ಸಿ) 630) ಪ್ರಕರಣದಲ್ಲಿ ಆದೇಶಿಸಿದೆ. ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ ‘ಸಿ.ಸಿ.ಎ. ನಿಯಮಾವಳಿ - ಸಮಗ್ರ ಕೈಪಿಡಿ’ ಕೃತಿಯನ್ನು ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net