ಉನ್ನತ ಶಿಕ್ಷಣಕ್ಕಾಗಿ ವೇತನರಹಿತ ರಜೆ ಪಡೆದುಕೊಳ್ಳಬಹುದೇ? | ಸರ್ಕಾರಿ ಕಾರ್ನರ್​

Leave
Published on

ಪ್ರಶ್ನೆ: ನಾನು ಅಡುಗೆ ಸಹಾಯಕನಾಗಿ (ಡಿ-ದರ್ಜೆ) ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮೂರೂವರೆ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ನನ್ನ ಪರಿವೀಕ್ಷಣೆ ಅವಧಿಯು ಪೂರ್ಣಗೊಂಡಿರುತ್ತದೆ. ನಾನು, ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ 2 ವರ್ಷಗಳ ಉನ್ನತ ಶಿಕ್ಷಣಕ್ಕಾಗಿ (ಬಿ.ಇಡಿ) ವೇತನರಹಿತ ರಜೆಯನ್ನು ಪಡೆದುಕೊಳ್ಳಬಹುದೇ?

| ಮಲ್ಲಿಕಾರ್ಜುನ, ಬೀದರ್

ಉತ್ತರ: ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿಯ ನಿಯಮ 61ರಂತೆ ಸಾರ್ವಜನಿಕ ಸೇವೆಯ ಅವಶ್ಯಕತೆಗನುಸಾರವಾಗಿ ಅವನ ಕರ್ತವ್ಯಕ್ಕೆ ನೇರವಾಗಿ ಸಂಬಂಧಿಸಿದ ವೃತ್ತಿಪರ ಅಥವಾ ತಾಂತ್ರಿಕ ವಿಷಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ರಜೆ ಪಡೆದುಕೊಳ್ಳಬಹುದು. ಅಲ್ಲದೆ, ದಿನಾಂಕ: 6-9-1986ರ ಸುತ್ತೋಲೆ ಸಂಖ್ಯೆ: ಡಿಪಿಎಆರ್ 9 ಎಸ್​ಆರ್​ಸಿ 1986 ರಂತೆ ಸಿ ಮತ್ತು ಡಿ ಗುಂಪಿನ ನೌಕರರಿಗೆ ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹ ನೀಡಬೇಕೆಂದು ಸೂಚಿಸಿದೆ. ಆದರೆ, ನಿಮ್ಮ ಹುದ್ದೆಗೆ ಅನ್ವಯಿಸದಿದ್ದರೂ ಈ ಸುತ್ತೋಲೆಯನ್ವಯ 2021ರ ಕರ್ನಾಟಕ ಸರ್ಕಾರಿ ಸೇವಾ (ನಡತೆ) ನಿಯಮಾವಳಿಯ ನಿಯಮ 35ರಂತೆ ನಿಗದಿತ ಪ್ರಾಧಿಕಾರದಿಂದ ಅನುಮತಿ ಪಡೆದು ಉನ್ನತ ವ್ಯಾಸಂಗವನ್ನು ವೇತನರಹಿತ ರಜೆಯೊಂದಿಗೆ ಮಾಡಬಹುದು. ಹೆಚ್ಚಿನ ವಿವರಗಳಿಗೆ ಎಂ.ಉಮೇಶ್ ಅವರ ‘ನಡತೆ ನಿಯಮಗಳು-ಸಮಗ್ರ ಕೈಪಿಡಿ’ ಕೃತಿ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net