

ಉತ್ತರ: ವಿಚ್ಛೇದಿತ ಪತಿಯ ಆಸ್ತಿಯಲ್ಲಿ ಪತ್ನಿಗೆ, ವಿಚ್ಛೇದಿತ ಪತ್ನಿಯ ಆಸ್ತಿಯಲ್ಲಿ ಪತಿಗೆ ಯಾವುದೇ ಹಕ್ಕೂ ಬರುವುದಿಲ್ಲ. ಹಿಂದೂ ವಾರಸಾ ಕಾಯ್ದೆಯ ಕಲಂ 15ರಂತೆ, ಮೃತ ಹಿಂದೂ ಮಹಿಳೆಯ ಆಸ್ತಿ ಆಕೆಯ ಮೊದಲನೆಯ ದರ್ಜೆಯ ವಾರಸುದಾರರಾಗಿ ಆಕೆಯ ಮಕ್ಕಳಿಗೂ ಮತ್ತು ಪತಿಗೂ ಸಲ್ಲುತ್ತದೆ. ನಿಮ್ಮ ವಿಷಯದಲ್ಲಿ ಆಕೆಗೆ ಮಕ್ಕಳಿಲ್ಲ ಮತ್ತು ಪತಿ ಎನ್ನುವುದರ ವ್ಯಾಪ್ತಿಯಲ್ಲಿ ವಿಚ್ಛೇದಿತ ಪತಿ ಬರುವುದಿಲ್ಲ.
ಹೀಗಾಗಿ ನಿಮಗೆ ಯಾವ ಹಕ್ಕೂ ಬರುವುದಿಲ್ಲ. ಕಲಂ 15 (ಎ) ರಂತೆ ಪತಿ ಮಕ್ಕಳು ಇಲ್ಲದೇ ಇರುವುದರಿಂದ ಮತ್ತು ಕಲಂ 15(ಬಿ) ರಂತೆ ಪತಿಯ ವಾರಸುದಾರರು ಎನ್ನುವುದರ ಪ್ರಶ್ನೆ ಉದ್ಭವಿಸದೇ ಹೋಗುವುದರಿಂದ. ಕಲಂ 15(ಸಿ) ರಂತೆ, ಆಕೆಯ ತಂದೆ ತಾಯಿ ಇಲ್ಲದೇ ಇರುವುದರಿಂದ, ಕಲಂ 15 (ಡಿ)ರಂತೆ ಆಕೆಯ ತಂದೆಯ ವಾರಸುದಾರರಿಗೆ ಆಕೆಯ ಆಸ್ತಿ ಹೋಗಬೇಕಾಗುತ್ತದೆ. ಹೀಗಾಗಿ ನಿಮ್ಮ ವಿಚ್ಛೇದಿತ ಪತ್ನಿಯ ಹೆಸರಿನಲ್ಲಿ ಇರುವ ಎಲ್ಲ ಆಸ್ತಿಗಳೂ ಆಕೆಯ ಸಹೋದರ ಸಹೋದರಿಯರಿಗೆ ಹೋಗುತ್ತದೆಯೇ ವಿನಾ ನಿಮಗೆ ಬರುವುದಿಲ್ಲ.