

ಕೋಲ್ಕತಾ: ಗರ್ಭಿಣಿಯಾದ ನಂತರ ಮಗು ಯಾರದ್ದು ಎಂದು ತಿಳಿಯದೇ ಭಾರಿ ಟ್ರೋಲ್‌ಗೆ ಒಳಗಾಗಿದ್ದ ವಿವಾದಿತ ನಟಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಈಗ ಮುದ್ದು ಗಂಡುಮಗುವಿನ ತಾಯಿಯಾಗಿದ್ದಾರೆ.
ಮುಸ್ಲಿಂ ಸಮುದಾಯಕ್ಕೆ ಸೇರಿರುವ ನುಸ್ರತ್ ಅವರು, 2019ರಲ್ಲಿ ಟರ್ಕಿಯಲ್ಲಿ ಹೋಗಿ ಉದ್ಯಮಿ ನಿಖಿಲ್ ಜೈನ್ ಅವರನ್ನು ಮದುವೆಯಾಗಿದ್ದರು. ಆದರೆ ಭಾರತಕ್ಕೆ ಬಂದು ಎಷ್ಟೇ ಹೇಳಿದರೂ ಈ ವಿವಾಹವನ್ನು ನೋಂದಣಿ ಮಾಡಲು ಆಕೆ ತಯಾರು ಇರಲಿಲ್ಲ. ಈ ನಡುವೆಯೇ ಆರೇಳು ತಿಂಗಳಿನಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಇರಲಿಲ್ಲ. ಆದರೂ ಆಕೆ ಗರ್ಭ ಧರಿಸಿ, ಭಾರಿ ಟ್ರೋಲ್ ಆಗಿದ್ದರು.
ಸಂಸದೆಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ನಿಖಿಲ್ ಜೈನ್ ತಮ್ಮ ಪತಿ ಎಂದಿದ್ದ ಇವರು ಸಂಸದೆಯಾಗಿ ಆಯ್ಕೆಯಾದ ಮೇಲೆ ಅವರು ನನ್ನ ಕಾನೂನುಬದ್ಧವಾಗಿ ಪತಿಯೇ ಅಲ್ಲ ಎಂದು ವಿವಾದ ಸೃಷ್ಟಿಸಿದ್ದರು. ಮುಸ್ಲಿಂ ಸಮಯದಾಯದ ಮತದ ಜತೆಗೆ ಚುನಾವಣೆಯಲ್ಲಿ ಹಿಂದೂ ಸಮುದಾಯದವರ ಮತವನ್ನು ಪಡೆಯುವುದಕ್ಕಾಗಿ ಜೈನ್ ಜೀವನದ ಜತೆ ಚೆಲ್ಲಾಟವಾಡಿದ್ದಾರೆ, ತಮ್ಮ ಹೆಸರಿನ ಮುಂದೆ ಹಿಂದೂ ಹೆಸರನ್ನು ಸೇರಿಸಿಕೊಂಡು ಹಿಂದೂಗಳ ವಿಶ್ವಾಸವನ್ನು ಗಳಿಸುವುದಕ್ಕಾಗಿ ಈ ರೀತಿ ಮಾಡಿದ್ದಾರೆ, ಸಂಸದೆಯಾಗಿ ಆಯ್ಕೆಯಾದ ಮೇಲೆ ಗಂಡನನ್ನು ಹೊರಕ್ಕೆ ಅಟ್ಟಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದವು.
ಹಚ್ಚಿದ ಮೆಹಂದಿ ಮಾಸಿತು, ಮಾಡಿಕೊಂಡ ಮೇಕಪ್ ಕಳಚಿತು, ತಲಾಕ್ ನೀಡಲಾಯಿತು ಎಂಬ ಶೀರ್ಷಿಕೆಯಲ್ಲಿ ಜಾಲತಾಣದಲ್ಲಿ ಆರೋಪಗಳ ಸುರಿಮಳೆಯೇ ಹರಿದಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಚುನಾವಣಾ ನೀತಿ ನಿರೂಪಕರಾಗಿದ್ದ ಪ್ರಶಾಂತ್ ಕಿಶೋರ್ ಅವರ ತಲೆ ಇದರ ಹಿಂದಿದೆ ಎಂಬ ಆರೋಪಗಳೂ ಜಾಲತಾಣದಲ್ಲಿ ಹರಿದಾಡುತ್ತಿದ್ದವು.
ಪಶ್ಚಿಮ ಬಂಗಾಳದ ಟಿಎಂಸಿ ಅಭ್ಯರ್ಥಿಯಾಗಿದ್ದ ಯಶ್ ದಾಸ್ ಗುಪ್ತಾ ಜತೆ ಹಲವಾರು ಕಡೆಗಳಲ್ಲಿ ಸುತ್ತಾಡುತ್ತ ಡೇಟಿಂಗ್ ಮಾಡುತ್ತಿದ್ದ ನುಸ್ರತ್ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದು ಕೂಡ ಹೇಳಿದ್ದರು. ಆದರೆ ಇದೀಗ ಗುಪ್ತಾ ಜತೆಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ, ಪ್ರಸವದ ಸಮಯದಲ್ಲಿಯೂ ಗುಪ್ತಾ ತನ್ನ ಜತೆಯೇ ಇರಬೇಕು ಎಂದು ನುಸ್ರತ್ ಹೇಳಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿವೆ.
"ಭಯದ ನಡುವೆಯೂ ನಂಬಿಕೆ’ ಎಂಬ ಕ್ಯಾಪ್ಷನ್ ನೀಡಿ ತಾವು ತಾಯಿಯಾಗಿರುವ ವಿಷಯವನ್ನು ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇವರನ್ನು ಕಾಲೆಳೆಯುತ್ತಿರುವವರು ಮಾತ್ರ ಮಗು ಹುಟ್ಟಿದ ಮೇಲಾದರೂ ಅದರ ಅಪ್ಪ ಯಾರು ಎಂದು ನಿಮಗಾದರೂ ತಿಳಿದಿದೆಯೇ ಎಂದು ಪ್ರಶ್ನಿಸಿದರೆ, ಅಭಿಮಾನಿಗಳು ಅಮ್ಮನಾದುದಕ್ಕೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅಮ್ಮ ಮತ್ತು ಮಗು ಇಬ್ಬರೂ ಆರೋಗ್ಯದಿಂದ ಇರುವುದಾಗಿ ವೈದ್ಯರು ಹೇಳಿದ್ದಾರೆ.