ಆಸ್ತಿ ಮಾರುವ ಮುನ್ನ ಈ ವಿಷಯ ತಿಳಿದಿರಲಿ...

nyayadevate
Published on
ಪ್ರಶ್ನೆ: ನನಗೆ ಐದು ಮಂದಿ ಮಕ್ಕಳು. ಯಾರೂ ನಮ್ಮನ್ನು ನೋಡಿಕೊಳ್ಳುತ್ತಿಲ್ಲ. ಅವರ ಮೇಲೆ ಅಸಹ್ಯ ಹುಟ್ಟಿದೆ. ನಮ್ಮ ಜೀವನ ಆಧಾರಕ್ಕೆ ನಾವು ಪಿತ್ರಾರ್ಜಿತ ಆಸ್ತಿಯನ್ನು ಮಾರಬಹುದೇ? ಮಾರಬಹುದಾದರೆ ನಾವು ಏನು ಮಾಡಬೇಕು ಅಥವಾ ಆ ಜಮೀನಿನ ಮೇಲೆ ಸಾಲ ತಗೆದುಕೊಳ್ಳಬಹುದೆ ?

ಉತ್ತರ: ನಿಮ್ಮ ಆಸ್ತಿಯನ್ನು ಯಾರಿಗೆ ಬೇಕಾದರೂ ಮಾರಬಹುದು. ಆದರೆ ಈ ವಿಷಯವನ್ನು ನೆನಪಿಟ್ಟುಕೊಳ್ಳಿ. ಅದೇನೆಂದರೆ, ಪಿತ್ರಾರ್ಜಿತವಾಗಿ ನಿಮಗೆ ಬಂದಿರುವ ಆಸ್ತಿಯ ಭಾಗವನ್ನು ಮಾತ್ರ ನೀವು ಮಾರಲು ಅರ್ಹರು. ಆದರೆ ಪ್ರತ್ಯೇಕ ಆಸ್ತಿಯನ್ನು ಮಾರಲು ಬರುವುದಿಲ್ಲ.
ಆದ್ದರಿಂದ ಮೊದಲಿಗೆ ಆಸ್ತಿ ನಿಮ್ಮ ಪಿತ್ರಾರ್ಜಿತ ಆಸ್ತಿಯೇ ಅಥವಾ ನಿಮ್ಮ ಪ್ರತ್ಯೇಕ ಆಸ್ತಿಯೇ ಎನ್ನುವುದನ್ನು ದಾಖಲೆಗಳ ಪರಿಶೀಲನೆಯ ಮೂಲಕ ಖಚಿತ ಪಡಿಸಿಕೊಳ್ಳಿ. ನಂತರ ಮುಂದಿನ ಕ್ರಮ ತೆಗೆದುಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net