

ಉತ್ತರ: ನಿಮ್ಮ ತಂದೆ ಸ್ವಯಾರ್ಜಿತ ಆಸ್ತಿಯನ್ನು ಅವರ ಇಷ್ಟದಂತೆ ವಿಲ್ ಮಾಡಬಹುದು. ವಿಲ್ ಮಾಡುವಾಗ ಏಕೆ ಹೆಣ್ಣುಮಕ್ಕಳಿಗೆ ಏನೂ ಕೊಡುತ್ತಿಲ್ಲ , ಗಂಡು ಮಕ್ಕಳಿಗೇ ಎಲ್ಲ ಆಸ್ತಿ ಕೊಡುತ್ತಿದ್ದಾರೆ ಎನ್ನುವುದನ್ನು ಬರೆಸಿರಬೇಕು.
ಸಾಧ್ಯವಾದರೆ ನೋಂದಣಿ ಮಾಡಿಸಿದರೆ ಒಳ್ಳೆಯದು. ವಿಲ್ ಬೇರೆಯವರ ಒತ್ತಡ ಒತ್ತಾಯದಿಂದ ಮೋಸದಿಂದ ಆಗಿರದೇ ಇದ್ದರೆ, ಸ್ವ ಇಚ್ಛೆಯಿಂದ ಆಗಿದ್ದರೆ ಹೆದರಬೇಕಿಲ್ಲ. ಅಕ್ಕಂದಿರು ಕೇಸು ಹಾಕಿದರೂ ನಿಲ್ಲುವುದಿಲ್ಲ.