

ಈಗ ಭಾಗ ಕೇಳಿದರೆ, ನಿಮಗೆ ಮದುವೆ ಆಗಿ ಹತ್ತು ವರ್ಷ ಆಗಿದೆ, ಮದುವೆಗೆ ಖರ್ಚು ಮಾಡಿದ್ದೇನೆ , ಏನೂ ಕೊಡುವುದಿಲ್ಲ ಎನ್ನುತ್ತಿದ್ದಾನೆ. ಕೇಸು ಹಾಕಿದರೆ, ಕೊಂಡುಕೊಂಡವರನ್ನು ಪಾರ್ಟಿ ಮಾಡಬೇಕಾಗುತ್ತದೆಯೇ? ಆ ಕ್ರಯ ಪತ್ರಗಳನ್ನು ಕ್ಯಾನ್ಸಲ್ ಮಾಡಿ ಎಂದು ಕೇಳ ಬೇಕೇ? ಆಗ ನಾವು ಎಷ್ಟೊಂದು ಕೋರ್ಟು ಫೀಸು ಕೊಡಬೇಕು. ನಮ್ಮ ಹತ್ತಿರ ಅಷ್ಟು ದುಡ್ಡು ಇಲ್ಲ. ನೀವೇನೂ ಮಾಡಲು ಆಗುವುದಿಲ್ಲ ಎಂದು ನಮ್ಮ ಅಣ್ಣ ಹೇಳುತ್ತಿದ್ದಾನೆ. ದಯವಿಟ್ಟು ಪರಿಹಾರ ಸೂಚಿಸಿ.
ಉತ್ತರ: ನೀವು ಹೆದರ ಬೇಕಾಗಿಲ್ಲ. ಮೃತ ತಂದೆಯ ಆಸ್ತಿಯಲ್ಲಿ , ನಿಮ್ಮ ತಂದೆಯ ಎಲ್ಲ ಮಕ್ಕಳಿಗೂ (ಗಂಡು ಮತ್ತು ಹೆಣ್ಣು ಮಕ್ಕಳಿಗೂ) ಸಮಪಾಲು ಇರುತ್ತದೆ. ನಿಮ್ಮ ಮದುವೆ ಯಾವಾಗ ಆಯಿತು, ಅದಕ್ಕೆ ಎಷ್ಟು ಖರ್ಚು , ಯಾರು ಮಾಡಿದರು ಎನ್ನುವುದೆಲ್ಲ , ನಿಮಗೆ ಭಾಗ ಕೊಡುವ ವಿಷಯದಲ್ಲಿ , ಲೆಕ್ಕಕ್ಕೆ ಬರುವುದಿಲ್ಲ. ನೀವು ಧೈರ್ಯವಾಗಿ ವಿಭಾಗದ ಕೇಸು ಹಾಕಿ. ಕೊಂಡುಕೊಂಡವರನ್ನೂ ಪಾರ್ಟಿ ಮಾಡಿ.
ನಿಮ್ಮ ಅಣ್ಣ ಮಾಡಿರುವ ಪರಭಾರೆ ನಿಮ್ಮ ಹಕ್ಕನ್ನು ಬಂಧಿಸುವುದಿಲ್ಲ ಎನ್ನುವ ಹೇಳಿಕೆ ಹಾಗೂ ಪ್ರಾರ್ಥನೆ ಇದ್ದರೆ ಸಾಕು. ಈ ರೀತಿಯ ವಿಭಾಗದ ದಾವೆಗೆ ಕೋರ್ಟು ಫೀ ತುಂಬಾ ಕಡಿಮೆ ಇರುತ್ತದೆ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್ ಕ್ಲಿಕ್ಕಿಸಿ