More

    ತಾತ ಬಾಯಿ ಮಾತಿನಲ್ಲಿ ಹೇಳಿದ ಮಾತ್ರಕ್ಕೆ ಉಳುಮೆ ಮಾಡಿದವರಿಗಷ್ಟೇ ಜಮೀನು ಸಿಗುವುದಿಲ್ಲ

    ತಾತ ಬಾಯಿ ಮಾತಿನಲ್ಲಿ ಹೇಳಿದ ಮಾತ್ರಕ್ಕೆ ಉಳುಮೆ ಮಾಡಿದವರಿಗಷ್ಟೇ ಜಮೀನು ಸಿಗುವುದಿಲ್ಲನಮ್ಮ ತಾತನಿಗೆ ಐದು ಗಂಡು ಮಕ್ಕಳು. ತಾತ ತೀರಿಕೊಂಡರು. ಆ ಮೇಲೆ ತಾತನ ಆಸ್ತಿ ಎಲ್ಲಾ ಅಜ್ಜಿಯ ಹೆಸರಿಗೆ ವರ್ಗಾವಣೆ ಆಯಿತು. ನಮ್ಮ ಅಜ್ಜಿಯೂ 2020ರಲ್ಲಿ ತೀರಿಕೊಂಡರು. ನಮ್ಮ ತಾತ ಬದುಕಿದ್ದಾಗ ಬಾಯಿ ಮಾತಿನಲ್ಲಿ ಇಂತಹವರು ಇಂತಹ ಕಡೆ ಜಮೀನು ನೋಡಿಕೊಳ್ಳಿ ಅಂತ ಹೇಳಿದ್ದರು.

    ಅದರಂತೆಯೇ ನಡೆಯುತ್ತಿತ್ತು. ನಮ್ಮ ದೊಡ್ಡಪ್ಪನಿಗೆ ಬೇರೆ ಕಡೆ ಜಮೀನು ಕೊಟ್ಟಿದ್ದಾರೆ. ಈಗ ಅವರು ನನಗೂ ನಾಲ್ಕು ಜನರಿಗೆ ಕೊಟ್ಟಿರುವ ಕಡೆಯೇ ಭಾಗ ಬೇಕು ಎನ್ನುತ್ತಿದ್ದಾರೆ. ಇಲ್ಲದಿದ್ದರೆ ನಾನು ದೊಡ್ಡ ಮಗ ಪೂರ್ತಿ ಆಸ್ತಿ ನನಗೇ ಬರುತ್ತೆ ಎನ್ನುತ್ತಿದ್ದಾರೆ. ಹಾಗೆ ಆದರೆ ನಮ್ಮ ಗತಿ ಏನು? ಈಗಲೂ ಆಸ್ತಿ ಎಲ್ಲಾ ಅಜ್ಜಿಯ ಹೆಸರಲ್ಲೇ ಇದೆ. ನಾವು ಏನು ಮಾಡಬೇಕು ತಿಳಿಸಿ.

    ಉತ್ತರ: ತಾತ ತೀರಿಕೊಂಡ ಮೇಲೆ ನಿಮ್ಮ ಅಜ್ಜಿಯ ಹೆಸರಿಗೆ ಆಸ್ತಿಗಳ ಖಾತೆ ಪಹಣಿ ಬದಲಾಗಿದ್ದರೆ ಆಸ್ತಿ ನಿಮ್ಮ ಅಜ್ಜಿಯ ಆಸ್ತಿ ಮಾತ್ರ ಆಗುವುದಿಲ್ಲ. ಈಗ ನಿಮ್ಮ ಅಜ್ಜಿಯೂ ತೀರಿಕೊಂಡಿರುವುದರಿಂದ, ಎಲ್ಲ ಆಸ್ತಿಯಲ್ಲಿಯೂ ಐದು ಮಕ್ಕಳಿಗೂ ಸಮಪಾಲು ಇರುತ್ತದೆ. ಅನುಕೂಲಕ್ಕಾಗಿ ಒಬ್ಬೊಬ್ಬರು ಒಂದೊಂದು ಕಡೆ ಉಳುಮೆ ಮಾಡುತ್ತಿದ್ದರೆ, ಆಯಾ ಆಸ್ತಿಗಳು ಅವರದೇ ಆಗುವುದಿಲ್ಲ. ವಿಭಾಗ ಆದಾಗ ಮಾತ್ರ ಯಾರ ಆಸ್ತಿ ಯಾವುದು ಎನ್ನುವುದು ತೀರ್ಮಾನ ಆಗುತ್ತದೆ.

    ನಿಮ್ಮ ತಾತನ ಮಕ್ಕಳಲ್ಲಿ ಯಾರಾದರೂ ಒಬ್ಬರು ಅಥವಾ ಇಬ್ಬರು ವಿಭಾಗಕ್ಕೇ ಕೇಸು ಹಾಕಿ. ಪ್ರಕರಣದಲ್ಲಿ ನಿಮ್ಮ ದೊಡ್ಡಪ್ಪನಿಗೆ ನೋಟಿಸ್‌ ಜಾರಿ ಆದಮೇಲೆ, ಮಧ್ಯಸ್ಥಿಕೆಗೆ ಪ್ರಕರಣ ಕಳಿಸಲು ಕೇಳಿಕೊಳ್ಳಿ. ಅಲ್ಲಿ ಕೂತು ಮಾತಾಡಿ ಯಾರಿಗೆ ಯಾವ ಆಸ್ತಿ ಎನ್ನುವ ತೀರ್ಮಾನಕ್ಕೆ ಬರಬಹುದು. ಒಪ್ಪದಿದ್ದರೆ ಕೇಸು ನಡೆಸಿ. ದೊಡ್ಡಮಗನಿಗೆ ಮಾತ್ರ ಆಸ್ತಿಯಲ್ಲಿ ಭಾಗ ಎನ್ನುವ ಕಾನೂನು ಇಲ್ಲ. ನೀವು ಹೆದರ ಬೇಕಾಗಿಲ್ಲ.

    ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ
    https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/

    ಹಿಂದೂಗಳು ತಾಯಿಯ ಅಕ್ಕನ ಮಗನನ್ನು ಮದುವೆ ಆಗುವುದು ಶಿಕ್ಷಾರ್ಹ ಅಪರಾಧವೆ?

    ಪತ್ನಿಯೊಂದಿಗೆ ಇರುವ ಮಗು ನೋಡಲು ಕೋರ್ಟ್‌ಗೆ ಅರ್ಜಿ ಸಲ್ಲಿಸುವ ಹೊರತಾಗಿ ಬೇರೆ ಉಪಾಯವಿದೆಯೆ?

    ಹೆಣ್ಣುಮಕ್ಕಳಿಗೂ ಆಸ್ತಿಯಲ್ಲಿ ಹಕ್ಕು ಇರುವಾಗ ಒಬ್ಬರೇ ದಾನಪತ್ರ ಮಾಡಲು ಸಾಧ್ಯವಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts