ಮಂಡಿ ನೋವಿಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪರಿಹಾರ ಏನಿದೆ?

aptha
Published on
ಪ್ರಶ್ನೆ: ಕೆಲವು ತಿಂಗಳಿಂದ ಮೊಣಕಾಲು ನೋವು ಕಾಡುತ್ತಿದೆ. ನನ್ನ ವಯಸ್ಸು 42. ತೂಕ 70 ಕೆಜಿ. ಮಾತ್ರೆ ತೆಗೆದುಕೊಳ್ಳುವಷ್ಟು ದಿನ ನೋವಿರುವುದಿಲ್ಲ. ಉಳಿದಂತೆ ಎದ್ದು, ಕುಳಿತು ಮಾಡಲು ಸಹ ಕಷ್ಟವಾಗುತ್ತದೆ. ಏನಾದರೂ ಪರಿಹಾರ ಇದೆಯೇ?

ಉತ್ತರ: ನೀವು ಪ್ರತಿದಿನ ಎಳ್ಳೆಣ್ಣೆಯಲ್ಲಿ ಕರ್ಪೂರ ಬೆರೆಸಿ ಬಿಸಿ ಮಾಡಿ ಮಂಡಿಯ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ ಒಂದು ಗಂಟೆ ಬಿಟ್ಟು ಬಿಸಿನೀರು ಹಾಕಿಕೊಳ್ಳಿ.

ಮಹಾಯೋಗರಾಜ ಗುಗ್ಗುಳು ಮಾತ್ರೆಯನ್ನು ದಿನಕ್ಕೆ ಮೂರು ಬಾರಿ ಎರಡು ಮಾತ್ರೆಯಂತೆ ಊಟದ ನಂತರ ಸೇವಿಸಿ. ನೀವು ಬಗ್ಗೆ ಕೆಲಸ ಮಾಡುವುದು, ಕೆಳಗೆ ಕುಳಿತುಕೊಳ್ಳುವುದನ್ನು ಸದ್ಯ ಮಾಡಬೇಡಿ.

ಅಲ್ಲದೆ, ಮಲ ವಿಸರ್ಜನೆಗೆ ಕಮೋಡ್ ಬಳಸುವುದು ಒಳ್ಳೆಯದು. ಒಮ್ಮೆ ಹತ್ತಿರದ ಆಯುರ್ವೇದ ಆಸ್ಪತ್ರೆಗೆ ಹೋಗಿ ಕಟಿಬಸ್ತಿ ಚಿಕಿತ್ಸೆಯನ್ನು ಒಂದು ವಾರ ಕಾಲ ಪಡೆಯುವುದು ಉತ್ತಮ. ಅಲ್ಲದೆ, ಒಮ್ಮೆ ತೂಕ ಕಡಿಮೆ ಮಾಡಿಕೊಳ್ಳಲು ಕರಿದ ಪದಾರ್ಥ, ಸಿಹಿ ಸೇವನೆ ವರ್ಜಿಸಿ. ರಾತ್ರಿ ಮಿತಪ್ರಮಾಣದ ಆಹಾರ ಸೇವನೆ ಇರಲಿ. ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟ ಬಿಸಿನೀರು ಕುಡಿಯುವುದನ್ನು ರೂಢಿಸಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net