

ಪೂಷಣ ಎಂದರೆ ವೈದಿಕ ಸಂಪ್ರದಾಯದಲ್ಲಿ ಒಂದು ಸೌರದೇವತೆ ಎಂದು ಕರೆಯಲಾಗುತ್ತದೆ. ಈ ಮುದ್ರೆಯಲ್ಲಿ ನೀಡುವ ಮತ್ತು ಸ್ವೀಕಾರದ ಸೂಚಕವನ್ನು ಪ್ರತಿನಿಧಿಸುತ್ತದೆ. ಅಂದರೆ ಈ ಮುದ್ರೆಯಲ್ಲಿ ದೇಹದ ತ್ಯಾಜ್ಯ ತೆಗೆಯಲು ಸಹಾಯ ಹಾಗೂ ಆಹಾರ ಜೀರ್ಣವಾಗುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೂಷಣ ಮುದ್ರೆಯ ಬಗ್ಗೆ ಸರಳ ರೂಪದಲ್ಲಿ ತಿಳಿಸುವುದಾದರೆ ನಾವು ಸೇವಿಸಿದ ಆಹಾರವು ಜೀರ್ಣಗೊಂಡು, ದೇಹದಲ್ಲಿರುವ ಮಲಿನ ವಸ್ತುವನ್ನು ಚೆನ್ನಾಗಿ ಹೊರಹಾಕುತ್ತದೆ.
ವಿಧಾನ: ಪೂಷಣ ಮುದ್ರೆಯು ಎರಡು ವಿಭಿನ್ನ ಸನ್ನೆಗಳಿಂದ ಮಾಡಲ್ಪಟ್ಟಿದೆ. ಬಲಗೈಯಲ್ಲಿ ಅಪಾನ ವಾಯು ಮುದ್ರೆ ಮತ್ತು ಎಡಗೈಯಲ್ಲಿ ಪ್ರಾಣವಾಯು ಮುದ್ರೆ. ಪೂಷಣ ಮುದ್ರೆಯನ್ನು ಅಭ್ಯಾಸ ಮಾಡಲು ಈ ಹಂತಗಳನ್ನು ಅನುಸರಿಸಿ. ಬಲಗೈಯಲ್ಲಿ ವ್ಯಾನ ಮುದ್ರೆ ಮಾಡಿ. ಅಂದರೆ ಹೆಬ್ಬೆರಳಿನ ತುದಿಯನ್ನು ತೋರು ಬೆರಳು ಮತ್ತು ಮಧ್ಯದ ಬೆರಳಿನ ತುದಿಗೆ ಸೇರಿಸಿದಾಗ (ಉಳಿದ ಬೆರಳು ನೇರವಾಗಿರಲಿ) ವ್ಯಾನ ಮುದ್ರೆಯಾಗುತ್ತದೆ. ಹಾಗೇ ಎಡಗೈಯಲ್ಲಿ ಅಪಾನ ಮುದ್ರೆ ಮಾಡಿ. ಅಂದರೆ ಮಧ್ಯದ ಬೆರಳು ಮತ್ತು ಉಂಗುರ ಬೆರಳ ತುದಿಯನ್ನು ಹೆಬ್ಬೆರಳಿನ ತುದಿಗೆ ಸೇರಿಸಿ. ಉಳಿದ ಎರಡು ಬೆರಳುಗಳು ನೇರವಾಗಿರಲಿ. ಈ ಬೆರಳುಗಳ ಒತ್ತುವಿಕೆಯು ಕೆಲವು ಆಂತರಿಕ ಅಂಗಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯ ಉತ್ತಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಸುಮಾರು 5 ನಿಮಿಷದಂತೆ ನಾಲ್ಕು ಬಾರಿ ಅಭ್ಯಾಸ ಮಾಡಿ. ಪೂಷಣ ಮುದ್ರೆಯಲ್ಲಿ ಇಷ್ಟ ದೇವರು ‘ಯಾ ಓಂ ವಿಷ್ಣುವೇ ನಮಃ’ ಎಂದು 108 ಬಾರಿ ಮಂತ್ರ ಪಠಿಸಿ,
ಪ್ರಯೋಜನಗಳು: ಮಿದುಳಿನ ಕಾರ್ಯಗಳನ್ನು ಸುಸ್ಥಿತಿಯಲ್ಲಿಡಲು ಈ ಮುದ್ರೆ ಸಹಕಾರಿಯಾಗಿದೆ. ಪೂಷಣ ಮುದ್ರೆ ಮುಖ್ಯವಾಗಿ ದೇಹದಲ್ಲಿರುವ ತ್ಯಾಜ್ಯಗಳನ್ನು ತೆಗೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೊಟ್ಟೆ ಉಬ್ಬರಿಸಿದ ಸಂದರ್ಭದಲ್ಲಿ ಈ ಮುದ್ರೆಯನ್ನು ಐದು ನಿಮಿಷ ಮಾಡಿದಾಗ ಹಗುರವೆನಿಸುತ್ತದೆ. ಊಟ ಮಾಡಿದ ತಕ್ಷಣವು ಈ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಹೊಟ್ಟೆ ಮತ್ತು ಲಿವರ್ನ ಆರೋಗ್ಯ ವೃದ್ಧಿಗೊಳ್ಳುತ್ತದೆ. ನರದೋಷವು ನಿವಾರಣೆಯಾಗುತ್ತದೆ. ವಾಂತಿ, ಮತ್ತು ಗ್ಯಾಸ್ ಸಮಸ್ಯೆಯನ್ನು ನಿವರಿಸುತ್ತದೆ. ಶರೀರದ ದಣಿವು ನಿವಾರಣೆಯಾಗಿ ಲವಲವಿಕೆ ಬರುತ್ತದೆ. ಈ ಮುದ್ರೆಯ ನಾಭಿ ಪ್ರದೇಶದಲ್ಲಿರುವ ಮಣಿಪೂರ ಚಕ್ರವನ್ನು ಜಾಗೃತಗೊಳಿಸುತ್ತದೆ. ಮಣಿಪೂರ ಚಕ್ರ ಹೊಟ್ಟೆಯ ಪ್ರದೇಶದಲ್ಲಿದೆ. ಇದರಿಂದ ಜೀರ್ಣ ಶಕ್ತಿ ವೃದ್ಧಿಸುತ್ತದೆ. ಈ ಚಕ್ರ ನಾಬಿ ಕೇಂದ್ರದ ಬಳಿ ಇದೆ. ಈ ಚಕ್ರವು ಅಗ್ನಿತತ್ವ ಹೊಂದಿದೆ. (ಹೊಕ್ಕಳ ಮತ್ತು ಪಕ್ಕೆಲುಬುಗಳ ಮಧ್ಯೆ ಇದೆ) ಇದು ಮೇದೋಜೀರಕ ಪಾಂಕ್ರಿಯನ್ ಗ್ರಂಥಿಯೊಂದಿಗೆ ಸಹಯೋಗ ಹೊಂದಿ ಇನ್ಸುಲಿನ್ ಉತ್ಪಾದಿಸುತ್ತದೆ. ಈ ಮುದ್ರೆಯನ್ನು ದಿನದ ಯಾವುದೇ ಸಮಯದಲ್ಲಿ ಮತ್ತು ಕಚೇರಿಯಲ್ಲಿ ಕುರ್ಚಿಯ ಮೇಲೆ ಕೆಲಸದ ಸಮಯದಲ್ಲಿ ಸಹ ಅಭ್ಯಾಸಮಾಡಬಹುದು.