

ರೋಗಿಗಳು ವೈದ್ಯರಿಂದ ಚಿಕಿತ್ಸಾ ಸಲಹೆ ಪಡೆದುಕೊಂಡಾಕ್ಷಣ ಅದರಲ್ಲಿರುವ ನಾಲ್ಕಾರು ಔಷಧಗಳ ಪಟ್ಟಿಯನ್ನು ಗಮನಿಸುತ್ತಾರೆ. ಔಷಧಗಳು ಪ್ರತ್ಯೇಕವಾಗಿ ಯಾವುದಕ್ಕೆ ನೀಡಿದ್ದೆಂದು ತಿಳಿಯಬಯಸುತ್ತಾರೆ. ಚಿಕಿತ್ಸೆ ನೀಡುತ್ತಿರುವ ವೈದ್ಯರ ಬಳಿ ಕೇಳಲು ಸಾಧ್ಯವಾಗದಿದ್ದಾಗ ಔಷಧ ಅಂಗಡಿಗಳಲ್ಲಿ, ತಮಗೆ ತಿಳಿದಿರುವ ಆಯುರ್ವೆದ ವೈದ್ಯರಲ್ಲಿ ಕೇಳಿಕೊಳ್ಳುತ್ತಾರೆ. ನಿಜಸಂಗತಿ ಏನೆಂದರೆ ಆ ಪ್ರತಿಯೊಂದು ಔಷಧವನ್ನೂ ಯಾಕೆ ನೀಡಲಾಗಿದೆ ಎಂಬ ನಿಖರ ಜ್ಞಾನವು ಚಿಕಿತ್ಸೆ ನೀಡಿದ ವೈದ್ಯರಿಗಷ್ಟೇ ಇರುತ್ತದೆ! ಒಂದೇ ಔಷಧವನ್ನು ವಿಭಿನ್ನ ಔಷಧಗಳ ಜೊತೆಯಲ್ಲಿ ನೀಡಿದಾಗ ಅದು ದೇಹದಲ್ಲಿ ಬೇರೆ ಬೇರೆ ರೀತಿಯಲ್ಲಿ ಕಾರ್ಯವೆಸಗುತ್ತದೆ! ತುಳಸಿಗಿಡಕ್ಕೆ ನೂರಾರು ಔಷಧೀಯ ಗುಣಗಳಿವೆ ಎಂದಿದೆ ಆಯá-ರ್ವೆದ. ಅದೇ ಗಿಡದ ವಿಭಿನ್ನ ಭಾಗಗಳಿಗೆ ಬೇರೆಯೇ ತೆರನಾಗಿ ಕಾರ್ಯವೆಸಗುವ ಶಕ್ತಿ ಇರುತ್ತದೆ! ಅದೇ ಭಾಗವನ್ನು ಯಾವುದರ ಜೊತೆ ಯಲ್ಲಿ ನೀಡಲಾಗಿದೆ ಎಂಬುದನ್ನು ಹೊಂದಿಕೊಂಡು ಕಾರ್ಯವ್ಯಾಪ್ತಿಯೇ ಬದಲಾಗುತ್ತದೆ.
ಆಡುಸೋಗೆ ಎಲೆಯ ರಸವನ್ನು ಜೇನá-ತುಪ್ಪದೊಂದಿಗೆ ಕೊಟ್ಟಾಗ ಕೆಮ್ಮು ಕಡಿಮೆ ಮಾಡುತ್ತದೆ. ಅದನ್ನೇ ಜ್ಯೇಷ್ಠಮಧುವಿನೊಂದಿಗೆ ನೀಡಿದಾಗ ಕರುಳಿನ ಹುಣ್ಣು ಶಮನಗೊಳಿಸಲು ಉಪಯುಕ್ತವಾಗುತ್ತದೆ. ಕೊತ್ತಂಬರಿಯೊಂದಿಗೆ ಸೇವಿಸಿದಾಗ ವಾಂತಿಯನ್ನು ನಿಲ್ಲಿಸುತ್ತದೆ. ಭದ್ರಮುಷ್ಟಿಯೊಂದಿಗೆ ತೆಗೆದುಕೊಂಡರೆ ಮೂಗಿನ ರಕ್ತಸ್ರಾವವನ್ನು ಗುಣಪಡಿಸಲು ನೆರವಾಗುತ್ತದೆ. ಇವೆರಡಕ್ಕೆ ಅಶೋಕವೃಕ್ಷದ ಚೂರ್ಣ ಸೇರಿಸಿದರೆ ಸ್ತ್ರೀಯರಲ್ಲಿ ಮಾಸಿಕ ಋತುಸ್ರಾವ ಅಧಿಕವಾಗಿದ್ದರೆ ನಿಯಂತ್ರಿಸುತ್ತದೆ. ಲಾವಂಚದ ಬೇರಿನೊಂದಿಗೆ ಉಪಯೋಗಿಸಿದರೆ ಮೂಲವ್ಯಾಧಿಯನ್ನು ಹತೋಟಿಗೆ ತರುತ್ತದೆ. ತಿಂಗಳಾನುಗಟ್ಟಲೆ ಒಂದೇ ಔಷಧಿ ಸೇವಿಸಿ ಕಡಿಮೆಯಾಗದಿದ್ದ ಕಾಯಿಲೆ ಅದರ ಸಂಗಡ ಇನ್ನೊಂದು ಔಷಧವನ್ನು ಜತೆಗೂಡಿಸಿದಾಗ ಶೀಘ್ರ ಪರಿಣಾಮ ಬೀರುವುದನ್ನು ನೋಡá-ತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಆಯುರ್ವೇದದ ಔಷಧಗಳು ರಥದಂತೆ ಕಾರ್ಯ ನಿರ್ವಹಿಸುತ್ತವೆ! ಐದು ಕುದುರೆಗಳು ಪ್ರತ್ಯೇಕ ದಿಕ್ಕಿಗೆ ರಥವನ್ನು ಎಳೆಯುತ್ತಿದ್ದರೂ ಸಂಯು ಕ್ತಶಕ್ತಿ ಒಂದೇ ಕಡೆಗೆ ಪ್ರವಹಿಸುತ್ತದೆ. ಹಾಗಾಗಿ ರಥವು ಅದೊಂದೇ ದಿಕ್ಕಿನತ್ತ ಸಾಗುತ್ತದೆ. ರಾಸಾಯನಿಕ ಔಷಧಗಳಲ್ಲಿ ಹೀಗಾಗುವುದಿಲ್ಲ, ಅದಕ್ಕೆ ಸಂಬಂಧಿಸಿದ ಕಾರ್ಯವನ್ನಷ್ಟೇ ಅದು ಮಾಡುತ್ತದೆ. ಉಳಿದ ಔಷಧಗಳ ಕಾರ್ಯಕ್ಷಮತೆಗೂ ಅದಕ್ಕೂ ಸಂಬಂಧವೇ ಇರುವುದಿಲ್ಲ. ಪರಸ್ಪರ ಋಣಾತ್ಮಕ ಪರಿಣಾಮ ಬೀರದಿದ್ದರೆ ಸಾಕಾಗುತ್ತದೆ. ಏಕೆಂದರೆ ಅವು ಏಕಮುಖಿಗಳು. ಆಯುರ್ವೆದದ ಔಷಧಗಳು ಬಹುಮುಖಿಗಳು.
ಏಕಮೂಲಿಕಾ ಔಷಧವೆಂಬುದನ್ನು ಹಲವರು ಕೇಳಿರಬಹುದು. ಒಂದೇ ಸಸ್ಯೌಷಧಿಯನ್ನು ಬಳಸಿ ಚಿಕಿತ್ಸೆ ನೀಡುವ ಕ್ರಮ. ಬಹುತೇಕ ನಾಟಿವೈದ್ಯರು ಏಕಮೂಲಿಕೆ ಪ್ರಯೋಗವನ್ನೇ ಮಾಡುತ್ತಿರುತ್ತಾರೆ. ಹಿರಿಯರಿಂದ ಮುಖ್ಯವಾಗಿ ಒಂದೋ ಎರಡೋ ರೋಗ ಚಿಕಿತ್ಸಾಕ್ರಮ ಪರಂಪರಾಗತವಾಗಿ ಬಂದಿರುತ್ತದೆ. ಉದಾಹರಣೆಗೆ ಕಾಮಾಲೆ ರೋಗಕ್ಕೆ ನೆಲನೆಲ್ಲಿ ಗಿಡದ ಹಸಿರು ರಸವನ್ನು ತಾವೇ ತಯಾರಿಸಿ ಬಂದ ಎಲ್ಲಾ ಕಾಮಾಲೆ ರೋಗಿಗಳಿಗೂ ನೀಡುತ್ತಿರುತ್ತಾರೆ. ಅವರು ವಿಧಿವತ್ತಾಗಿ ಆಯುರ್ವೆದದ ಅಧ್ಯಯನ, ಅಭ್ಯಾಸ ಮಾಡಿರುವುದಿಲ್ಲ. ತಮಗೆ ಪರಂಪರೆಯಿಂದ ಬಂದಿರುವ ಜ್ಞಾನವನ್ನು ಉಳಿದವರಿಗೆ ಹಂಚಿ ಬದುಕಿನಲ್ಲಿ ಸಾರ್ಥಕ್ಯವನ್ನು ಕಂಡುಕೊಳ್ಳುತ್ತಾರೆ. ಅವರಿಗೆ ಬೇರೆಯದೇ ವೃತ್ತಿ ಇರುತ್ತದೆ, ಇದು ಕೇವಲ ಪ್ರವೃತ್ತಿ ಆಗಿರುತ್ತದೆ. ಈ ಚಿಕಿತ್ಸೆಯಲ್ಲಿ ಬಹಳಷ್ಟು ಜನರಿಗೆ ಫಲಿತಾಂಶ ದೊರೆಯದೇ ಇದ್ದರೂ ಅದೇನೂ ಗಮನ ಸೆಳೆಯುವುದಿಲ್ಲ. ಎಲ್ಲರಲ್ಲೂ ಫಲಿತಾಂಶ ಸಿಗದಿರಲು ಕಾರಣವೂ ಬಹಳ ಸರಳ. ಔಷಧವು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ. ಪ್ರತ್ಯೇಕ ಔಷಧವೇ ಬೇಕಾಗುತ್ತದೆ ಅಥವಾ ಬೇರೆಯದೇ ಸ್ವರೂಪದಲ್ಲಿ ವಿವಿಧ ಬಗೆಯ ಔಷಧಗಳ ಕೂಡುವಿಕೆಯಲ್ಲಿ ಚಿಕಿತ್ಸೆ ಬೇಕಾಗುತ್ತದೆ. ಈ ಬದಲಾವಣೆ ಎಂಬುದು ಕಡ್ಡಾಯವೆಂದೇನಲ್ಲ, ಏಕೆಂದರೆ ಕೆಲವರಲ್ಲಿ ಒಂದು ಔಷಧವೇ ಸೂಕ್ತವಾಗಿ ಕಾರ್ಯನಿರ್ವಹಿಸುವ ಸಾಧ್ಯತೆಯೂ ಇದೆ. ಚಿಕಿತ್ಸೆಯಲ್ಲಿ ಔಷಧವನ್ನು ವ್ಯಕ್ತಿ ನಿರ್ದಿಷ್ಟವಾಗಿ ನೀಡಿದಾಗ ಉತ್ತಮ ಫಲಿತಾಂಶವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಚಿಕಿತ್ಸೆಯ ಗುಣಮಟ್ಟ ಮೌಲ್ಯಯುತವೂ ಆಗಿರುತ್ತದೆ ಎಂಬುದು ಆಯುರ್ವೆದದ ತತ್ತ್ವ. ಎಲ್ಲರಿಗೂ ಒಂದೇ ಆಹಾರವೂ ಪ್ರಶಸ್ತವಲ್ಲ ಎಂದು ವಿವರಿಸುವ ಆಯುರ್ವೆದವು ಔಷಧದ ಸೂಕ್ತತೆ, ನಿಖರತೆ, ನಿರ್ದಿಷ್ಟತೆಗೆ ಪ್ರಾಮುಖ್ಯತೆ ನೀಡಿದೆ.