

ಜಪಾನಿನಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸುವ ಕಾಲಕ್ಕೆ ಅವರು ಹಲವು ಫೋಟೋಗಳನ್ನು ಕ್ಲಿಕ್ಕಿಸಿದ್ದರು. ಅದರಲ್ಲಿ ಒಬ್ಬ ಭಿಕ್ಷುಕನದ್ದೂ ಇತ್ತು. ಅಲ್ಲಿಯ ಸ್ಟುಡಿಯೋದವನು ಈ ಫೊಟೋಗಳನ್ನು ಡೆವೆಲಪ್ ಮಾಡಿ ಕೊಡುವ ಕಾಲಕ್ಕೆ ಬೇರೆಲ್ಲಾ ಫೋಟೋಗಳನ್ನು ಕೊಟ್ಟಿದ್ದ; ಆದರೆ ಭಿಕ್ಷುಕನದ್ದನ್ನು ಮಾತ್ರ ತನ್ನಲ್ಲೇ ಉಳಿಸಿಕೊಂಡು ಬಿಟ್ಟಿದ್ದ. ಈ ಭಾರತೀಯ ಹಿರಿಯರು ಎಷ್ಟೇ ಬಲವಂತ ಮಾಡಿದರೂ ಸುತರಾಂ ಕೊಡಲಿಲ್ಲ. ಏಕೆಂದು ಕೇಳಿದಾಗ ಅವನಿತ್ತ ಉತ್ತರ ಭಾರತೀಯರ ಕಣ್ದೆರೆಸುವಂತಿದೆ. ಅವನು ಹೇಳಿದ್ದೇನೆಂದರೆ ‘ನೀವು ಈ ಫೋಟೋಗಳ ಹಣವನ್ನೇ ಕೊಡಬೇಡಿ. ಚಿಂತೆಯಿಲ್ಲ. ಆದರೆ ಭಿಕ್ಷುಕನ ಫೋಟೋ ಕೊಡುವುದಿಲ್ಲ. ನನ್ನ ದೇಶಕ್ಕೆ ಅವಮಾನವಾಗುವುದು ನನಗಿಷ್ಟವಿಲ್ಲ’ ಎಂದು.
ಇಂಥದ್ದೇ ಇನ್ನೊಂದು ಘಟನೆ. ಹಿಂದಿನ ಸೀಟಿನಲ್ಲಿ ಕುಳಿತಿದ್ದ ಭಾರತೀಯನೊಬ್ಬ ತನ್ನ ದೇಶದಲ್ಲಿ ಮಾಡುವಂತೆಯೇ ಮುಂದಿನ ಸೀಟಿನ ಮೇಲೆ ಕಾಲುಗಳನ್ನಿಟ್ಟುಕೊಂಡು ಕುಳಿತಿದ್ದ. ಎಷ್ಟೇ ಆಗಲಿ ತನ್ನ ದೇಶದಲ್ಲಿ ಹೀಗೆಯೇ ನಡೆದುಕೊಂಡು ಅಭ್ಯಾಸವಲ್ಲವೇ?! ಎಷ್ಟು ಅಸಭ್ಯವಾಗಿ ನಡೆದುಕೊಳ್ಳುತ್ತೇವೆಯೋ, ಎಷ್ಟು ನಿಯಮಗಳನ್ನು ಮುರಿಯುತ್ತೇವೆಯೋ ಅಷ್ಟು ದೊಡ್ಡವರಲ್ಲವೇ ನಮ್ಮ ದೇಶದಲ್ಲಿ?! ಇದನ್ನು ಗಮನಿಸಿದ ಜಪಾನೀ ಮಹಿಳೆಯೊಬ್ಬಳು ಸೀಟಿನ ಮೇಲೆ ತನ್ನ ಕರವಸ್ತ್ರವನ್ನು ಹಾಸಿ ಅದರ ಮೇಲೆ ಅವನ ಕಾಲುಗಳನ್ನು ಇಡುವಂತೆ ಹೇಳಿದಳು. ಇಂಥದ್ದು ಸಾಮಾನ್ಯವಾಗಿ ಭಾರತದಲ್ಲಿ ನಡೆಯುವುದರ ವಿರುದ್ಧ! ‘ನಿಮ್ಮ ಕರವಸ್ತ್ರ ಗಲೀಜಾಗುವುದಿಲ್ಲವೇ’ ಎಂದು ಕೇಳಿದ ಈ ಭೂಪನಿಗೆ ಅವಳು ಉತ್ತರಿಸಿದ್ದು ‘ನನ್ನ ಬಟ್ಟೆಗಳನ್ನು ನಾನು ಪ್ರತಿನಿತ್ಯ ತೊಳೆಯುವುದಿದ್ದೇ ಇದೆ. ಆದರೆ ಬಸ್ಸನ್ನು ಯಾರು ತೊಳೆಯುತ್ತಾರೆ?’ ಇದನ್ನು ಕೇಳಿದ ಭಾರತೀಯನಿಗೆ ಇದೆಂಥಾ ವಿಚಿತ್ರ ದೇಶ ಎಂದೆನಿಸಿದ್ದರೆ ಆಶ್ಚರ್ಯವಿಲ್ಲ.
1945ರಲ್ಲಿ ಹಿರೋಶಿಮಾ, ನಾಗಸಾಕಿ ನಗರಗಳ ಮೇಲೆ ಅಮೆರಿಕಾ ಅಣುಬಾಂಬನ್ನು ಸಿಡಿಸಿದಾಗ ಸುಟ್ಟು ಬೂದಿಯಾಗಿದ್ದ ಜಪಾನ್ ಕೇವಲ ಇಪ್ಪತೆôದು ವರ್ಷಗಳಲ್ಲಿ ಸೂಪರ್ ಪವರ್ ಆಗಿದ್ದು ಮೇಲೆ ಪ್ರಸ್ತಾಪಿಸಿದ ವ್ಯಕ್ತಿಗಳಂಥವರನ್ನು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸೃಷ್ಟಿಸಿದ್ದರಿಂದ. ಈ ಇಪ್ಪತೆôದು ವರ್ಷಗಳ ಕಾಲ ಜಪಾನೀಯರು ಬದುಕಿದ್ದು ತಪಸ್ವಿಗಳಂತೆ. ಕೂತರೆ ನಿಂತರೆ, ಕನಸಿನಲ್ಲಿ ಮನಸಿನಲ್ಲಿ ಅವರಿಗಿದ್ದದ್ದು ಒಂದೇ ಭಾವನೆ- ಇಂಗ್ಲೆಂಡ್ ಆಫ್ ದಿ ಈಸ್ಟ್ ಎಂಬ ಬಿರುದನ್ನು ಹೊತ್ತಿದ್ದ ಜಪಾನ್ ಯುರೋಪ್ ಮತ್ತು ಏಷ್ಯಾಗಳ ದೈತ್ಯ ರಾಷ್ಟ್ರಗಳಾದ ರಷ್ಯಾ ಹಾಗೂ ಚೈನಾಗಳನ್ನು ಕ್ರಮವಾಗಿ ಯುದ್ಧದಲ್ಲಿ ಸೋಲಿಸಿ ತನ್ನ ಪ್ರತಿಷ್ಠೆಯನ್ನು ನಭೋಮಂಡಲಕ್ಕೆ ಏರಿಸಿಕೊಂಡಿದ್ದ ಜಪಾನಿಗೆ ಎರಡನೇ ಮಹಾಯುದ್ಧದಲ್ಲಿನ ಸೋಲು ಒಪ್ಪಿಕೊಳ್ಳುವುದಕ್ಕೇ ಸಾಧ್ಯವಾಗಲಿಲ್ಲ. ಆ ರಾಷ್ಟ್ರದ ಪುನರ್ನಿರ್ವಣದಲ್ಲಿ ಕೆಲಸ ಮಾಡಿದ ಏಕಮೇವ ಸೂತ್ರ ‘ಮೊದಲು ಜಪಾನ್ ನಂತರ ಮತ್ತೆಲ್ಲಾ’ ಎಂಬುದು. ಮೊದಲಿಂದಲೂ ರಾಷ್ಟ್ರಪ್ರೇಮಕ್ಕೆ ಹೆಸರಾಗಿದ್ದ ಜಪಾನ್ ಅದನ್ನು ನೂರ್ಮಡಿಸಿಕೊಂಡು ಅಭೂತಪೂರ್ವ ಯಶಸ್ಸನ್ನು ಸಾಧಿಸಿ ಅಲೈಸ್ ಎನಿಸಿದ್ದ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಇತ್ಯಾದಿಗಳಿಗೆ ಸೆಡ್ಡು ಹೊಡೆಯಿತು.
ರೋಮನ್ನರ ದಾಳಿಯಿಂದ ತತ್ತರಿಸಿ ಹೋದ ಯಹೂದ್ಯರು ಜಗತ್ತಿನೆಲ್ಲೆಡೆ ಚದುರಿ ಹೋಗಿ ಸುಮಾರು 1400 ವರ್ಷಗಳ ನಂತರ ಒಂದು ಬಲಿಷ್ಠ ರಾಷ್ಟ್ರವಾಗಿ ಪುನರ್ನಿರ್ವಣಗೊಂಡಿದ್ದರ ಹಿನ್ನೆಲೆಯಲ್ಲಿ ಮಹಾನ್ ಪ್ರೇರಣೆ, ಪ್ರಚೋದನೆಗಳು ಬಂದದ್ದು ತಮ್ಮ ಜನಾಂಗ, ಸಂಸ್ಕೃತಿ, ರಾಷ್ಟ್ರಧರ್ಮ ಇತ್ಯಾದಿಗಳ ಸಂಕೀರ್ಣವೇ ಆದ ಆತ್ಮಗೌರವ ಮತ್ತು ಆತ್ಮಪ್ರತಿಷ್ಠೆಗಳನ್ನು ಜಾಗೃತಗೊಳಿಸಿಕೊಳ್ಳುವುದರ ಮೂಲಕ.
ಸರ್ ಥಾಮಸ್ ರೋ ಭಾರತಕ್ಕೆ ಬರುವುದಕ್ಕಿಂತ ಮುಂಚೆ ಈಸ್ಟ್ ಇಂಡಿಯಾ ಕಂಪನಿ ಅಂದಿನ ಚಕ್ರವರ್ತಿ ಜಹಾಂಗೀರ್ನಿಂದ ಭಾರತದಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ಪಡೆದುಕೊಳ್ಳುವುದರಲ್ಲಿ ಹಿನ್ನಡೆಯನ್ನೇ ಅನುಭವಿಸುತ್ತಿತ್ತು. ಜಹಾಂಗೀರನಿಗೆ ವೈಯಕ್ತಿಕವಾಗಿ ಯಾವುದೋ ವಿಷಯಕ್ಕೆ ನೆರವು ನೀಡಿದ ಥಾಮಸ್ ರೋನನ್ನು ತಾನು ಯಾವ ರೀತಿ ಅವನಿಗೆ ಋಣ ಸಂದಾಯ ಮಾಡಬಹುದು ಎಂದು ಕೇಳಿದಾಗ ರೋ ಉತ್ತರಿಸಿದ್ದು ‘ಇಂಗ್ಲೆಂಡಿನ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ನೀಡುವುದರ ಮೂಲಕ’ ಎಂದಿದ್ದ. ಇದು ಮುಂದೆ ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಸ್ಥಾಪಿತಗೊಳ್ಳುವುದಕ್ಕೆ ಅತ್ಯವಶ್ಯವಿದ್ದ ಭದ್ರ ಬುನಾದಿಯನ್ನು ಹಾಕಿತು.
ಮೇಲಿನ ಹಲವು ಉದಾಹರಣೆಗಳಲ್ಲಿ ಒಂದು ಸಾಮಾನ್ಯ ಅಂಶವನ್ನು ನೀವೆಲ್ಲಾ ಗಮನಿಸಿರಬಹುದು. ಅದೇ ‘ಮನುಷ್ಯನಲ್ಲಿ ಹುದುಗಿರುವ ಭಾವನೆಗಳನ್ನು ಜಾಗೃತಗೊಳಿಸಿ ಸರಿಯಾದ ದಿಕ್ಕಿನಲ್ಲಿ ಹರಿಸಿದಾಗ ಹೊಸ ಸೃಷ್ಟಿಯನ್ನೇ ಅದು ನಿರ್ಮಾಣ ಮಾಡಬಲ್ಲದು’ ಎಂದು. ಭಾವನೆಗಳು ಒಣಗಿ ಹೋಗಬಾರದು. ಹೃದಯ ಮತ್ತು ನದಿ ಎಂದೂ ಬತ್ತಿ ಹೋಗಬಾರದು. ಅವು ಮೊದಲಿಗೆ ಬೇಕಾದರೆ ವಿಧ್ವಂಸಕವೇ ಆಗಿರಲಿ. ಅನರ್ಥಕಾರಿ ನದಿಯೂ ಸಹ ಅಣೆಕಟ್ಟು ಕಟ್ಟಿ ನಾಲೆಗಳಲ್ಲಿ ಹರಿದಾಗ ಮರುಭೂಮಿಯನ್ನು ನಂದನವನವನ್ನಾಗಿಸಬಲ್ಲದು. ಹಾಗೆಯೇ ಕ್ರೋಧ, ಕ್ರೌರ್ಯ, ಹಿಂಸಾಕೃತ್ಯ ಇವೂ ಕೂಡ ಬೆಳೆದು ಉದಾತ್ತಗೊಂಡಾಗ ಜಾಗತಿಕ ಕಲ್ಯಾಣವನ್ನೇ ನಿರ್ವಿುಸಿವೆ. ಭಾವನೆಗಳ ಶಕ್ತಿ ಅಷ್ಟು ಬೃಹತ್ತಾದುದು. ವಾಲ್ಮೀಕಿ, ವಿಶ್ವಾಮಿತ್ರ, ಅಂಗುಲಿಮಾಲ, ಸೇಂಟ್ ಪಾಲ್, ಯೋಗಿ ವೇಮನ ಇವರೆಲ್ಲ ವಿಕೃತ ಮನಸ್ಸುಗಳ ಸಮುದ್ರವೇ ಆಗಿದ್ದವರು. ಆದರೆ ಕೊನೆಗೆ ತಮ್ಮನ್ನು ಸಂಸ್ಕರಿಸಿಕೊಂಡವರು. ಇದು ಹೇಗೆ ಸಾಧ್ಯವಾಯಿತು?
ಮನುಷ್ಯ ಕಲ್ಲಲ್ಲ. ಅವನಿಗೆ ಭಾವನೆಗಳಿವೆ. ಭಾವಸಮುದ್ರವೇ ಅವನು. ಕೇವಲ ಖಿಠಿಜ್ಝಿಜಿಠಿಚ್ಟಜಿಚ್ಞ ಠಠಿಚ್ಞಛಚ್ಟಛಠ ಅನ್ನೇ ನಂಬುವ ಅಥವಾ ‘ನದಿಯಲ್ಲಿ ಮುಳುಗು ಹಾಕಿದರೆ ಬಡತನ ಹೋಗುವುದೇ’ ಎಂದು ಬಾಯಿ ಬಿರಿಯುವ ವ್ಯಕ್ತಿಗಳಿಗೆ ಇವೆಲ್ಲಾ ಅರ್ಥವಾಗುವುದು ಕಷ್ಟ. ಎರಡೂವರೆ ಸಹಸ್ರಮಾನದಷ್ಟು ದೀರ್ಘ ಕಾಲದ ದಾಖಲಿತ ಚರಿತ್ರೆಯಲ್ಲಿ ಭಾರತಕ್ಕೆ ಬಡತನ ಬಂದಿದ್ದು ಪರಕೀಯರ ದೌರ್ಜನ್ಯದಿಂದಾಗಿ. ಅವರ ತೆಕ್ಕೆಗೆ ರಾಷ್ಟ್ರದ ಭವಿಷ್ಯ ಜಾರಿದ್ದೇ ಅಂದಿನ ಆಡಳಿತಗಾರರ ರಾಷ್ಟ್ರಪ್ರೇಮದ ಕೊರತೆಯಿಂದಾಗಿ. ರಾಷ್ಟ್ರಪ್ರೇಮ ಯಾವ ರಾಷ್ಟ್ರೀಯ ಲಕ್ಷಣವನ್ನೂ ಕೊಲ್ಲುವುದಿಲ್ಲ. ಬದಲಾಗಿ ರಾಷ್ಟ್ರದ ಹಿರಿಮೆ ಗರಿಮೆಗಳಿಗೆ ಕಾರಣೀಭೂತವಾದ ಪ್ರತಿ ಅಂಶವನ್ನೂ ಉಳಿಸುತ್ತದೆ ಮತ್ತು ಬೆಳೆಸುತ್ತದೆ. ಆರ್ಯ ಸಂಸ್ಕೃತಿ ಅಥವಾ ಸನಾತನ ಸಂಸ್ಕೃತಿ ಬಹುತ್ವ ಮತ್ತು ವೈವಿಧ್ಯವನ್ನು ಮಾತೃಭಾಷೆಯ ಪರಿಮಿತಿಗಳ ಆಚೆಗೆ ಎಂದೂ ಹೋಗದ ಕನಿಷ್ಠ ಬೌದ್ಧಿಕ ವ್ಯಾಪ್ತಿಯುಳ್ಳ ಅರೆಬೆಂದ ತಲೆಗಳಿಂದ ಕಲಿಯಬೇಕಾದ ಅವಶ್ಯಕತೆಯೂ ಇಲ್ಲ. ಭಾರತೀಯ ಸಂಸ್ಕೃತಿಯಲ್ಲಿ ವೈವಿಧ್ಯವನ್ನು ಕಾಣದಿದ್ದಲ್ಲಿ ಬೇರೆಲ್ಲಿ ಕಾಣುವಿರಿ? ಪ್ರತಿ ನೂರು ಕಿಲೋಮೀಟರ್ಗೆ ಇಲ್ಲಿ ಭಾಷೆ, ವೇಷ, ಹಬ್ಬ, ನಂಬಿಕೆಗಳು ಬದಲಾವಣೆಯಾಗುತ್ತವೆ. ಭಾರತೀಯರ ವಿಪರೀತವೆನ್ನುವಮಟ್ಟಿಗಿನ ವೈವಿಧ್ಯವನ್ನು ಕಂಡ ಯುರೋಪಿಯನ್ನರು ಅಂದಿನ ಭಾರತವನ್ನು ಕರೆದಿದ್ದು ಉಪಖಂಡ ಎಂದು. ಅಂದರೆ ಏಷ್ಯಾ ಖಂಡದಲ್ಲಿನ ಮತ್ತೊಂದು ಚಿಕ್ಕ ಖಂಡವೇ ಇದಾಗಿದೆ ಎಂದು. ಅಷ್ಟೊಂದು ಭಾಷೆಗಳು, ಅಷ್ಟೊಂದು ಸಂಪ್ರದಾಯಗಳು, ಅಷ್ಟೊಂದು ಪಂಥಗಳು, ಗ್ರಂಥಗಳು. ಊಟದಲ್ಲಿ, ಪಾಠದಲ್ಲಿ ಪ್ರತಿಯೊಂದರಲ್ಲೂ ಅಚ್ಚರಿ ಮೂಡಿಸುವಷ್ಟು ವೈವಿಧ್ಯ. ಇದೊಂದು ದೇಶವಾಗಿಯಾದರೂ ಹೇಗೆ ಉಳಿದಿದೆ ಎಂದು ಅವರು ಅಚ್ಚರಿಪಟ್ಟಿದ್ದು ಅಷ್ಟಿಷ್ಟಲ್ಲ. ಇದೇ ಭಾರತದ ಸಾಧನೆ. ಭಾರತದ ಆಳ, ಅಂತರ್ಯಗಳಲ್ಲಿನ ಅಂತಃಸತ್ವ. ಭಾರತೀಯರ ಗ್ರಹಣ ಸಾಮರ್ಥ್ಯ ಇದನ್ನು ವೇದಕಾಲಕ್ಕೆ ಅರ್ಥ ಮಾಡಿಕೊಂಡಿದ್ದರು. ಸತ್ಯ ಒಂದೇ ಆದರೂ, ಅದರ ವ್ಯಕ್ತತೆ ಅನಂತ ರೂಪಗಳಲ್ಲಿ ಎಂದು ಕಂಡುಕೊಂಡ ಅವರು ಏಕತ್ವವನ್ನು ಉಳಿಸಿಕೊಂಡರು, ಬಹುತ್ವವನ್ನೂ ಬೆಳೆಸಿದರು. ಋಗ್ವೇದದ ‘ಏಕಮ್ ಸತ್ ವಿಪ್ರಾಃ ಬಹುಧಾ ವದಂತಿ’ ಅರ್ಥಾತ್, ಸತ್ಯ ಒಂದೇ ಆದರೆ ವ್ಯಕ್ತತೆ ಬಹು ರೀತಿಯಲ್ಲಿ. ಆದ್ದರಿಂದ ನಾಮಗಳೂ ಬಹು. ಇದೇ ಭಾರತೀಯ ಸಂಸ್ಕೃತಿಯ ಉದ್ದಕ್ಕೂ ಕಾಣುವ ಈ ದೇಶದ ಮ್ಯಾಗ್ನಕಾರ್ಟ. ಈ ಇಡೀ ಪ್ರಕೃತಿಯೇ ವೈವಿಧ್ಯದ ಗೂಡು. ಕೇವಲ ಗಿಣಿಗಳಲ್ಲೇ 370 ಬೇರೆ ಬೇರೆ ಪ್ರಭೇದಗಳು ಇವೆ. 84 ಲಕ್ಷ ಬೇರೆ ಬೇರೆ ಜೀವಿಗಳಿವೆ ಎನ್ನುವುದು ಪ್ರತೀತಿ. ಇದರಲ್ಲಿ ಸಸ್ಯ ಸಂಕುಲ ಸೇರಿಲ್ಲ. ಆದರೆ ಇವುಗಳ ಆಂತರ್ಯದಲ್ಲಿ ಮಾತ್ರ ಏಕವೇ ಅಡಗಿದೆ.
ಅತ್ತ ಪಾಶ್ಚಾತ್ಯರೆಡೆಗೆ ಸ್ವಲ್ಪ ಗಮನಹರಿಸೋಣ. ಸ್ಕಾ್ಯಂಡಿನೇವಿಯಾದಿಂದ ಅಲಾಸ್ಕಾದವರೆಗಿನ ಆ ಇಡೀ ಪಶ್ಚಿಮಾರ್ಧಗೋಳದಲ್ಲಿ ಒಂದೇ ರೀತಿಯ ರಸ್ತೆಗಳು, ಒಂದೇ ರೀತಿಯ ಮೈಬಣ್ಣ, ಒಂದೇ ರೀತಿಯ ಮನೆ ಬಿಟ್ಟು ಬೇರೇನಿದೆ? ಇದ್ದ ವೈವಿಧ್ಯಗಳನ್ನು ಚ್ಠಿlಛಟ್ಢಛಿ ಮಾಡಿ ಪುನರ್ನಿರೂಪಿಸಿಕೊಂಡ ಒಂದೇ ಧರ್ಮ! ಇವುಗಳಲ್ಲೇ ಜೀವನ ಸಾರ್ಥಕತೆಗಳನ್ನು ಕಂಡುಕೊಳ್ಳುವ ಯುರೋಪಿಯನ್ನರಿಗೆ ವೈವಿಧ್ಯ ಅರ್ಥವೂ ಆಗುವುದಿಲ್ಲ. ಬಹುಶಃ ಪಥ್ಯವೂ ಇಲ್ಲ. ಇವರ ಚಿಂತನೆಗಳನ್ನೇ ಗಿಳಿಪಾಠ ಮಾಡಿ ಒಪ್ಪಿಸುವ; ಅದನ್ನೇ ಸಕಲ ಅರ್ಥಗಳಿಂದಲೂ ಸಾಧನೆ ಎಂದು ಪರಿಗಣಿಸುವ ಕೆಲವು ಭಾರತೀಯ ಮನಸ್ಸುಗಳಿಗೆ ಇವೆಲ್ಲಾ ಅರ್ಥವಾಗುವುದು, ಒಪ್ಪಿಗೆಯಾಗುವುದು ಕಷ್ಟವಾದರೂ ವಿಜ್ಞಾನ ಎನ್ನುವುದೊಂದಿದೆಯಲ್ಲಾ. ವೈಜ್ಞಾನಿಕ ದೃಷ್ಟಿಕೋನ ಎನ್ನುವುದಿದೆಯಲ್ಲಾ. ಅಲ್ಲಿ ವೈಯಕ್ತಿಕ ಆದ್ಯತೆಗಳಿಗಿಂತ ಸತ್ಯವೇ ಮುಖ್ಯವಾಗುತ್ತದೆ ಎಂದಾದರೂ ಇವರಿಗೆ ಅರ್ಥವಾಗಿದ್ದಿದ್ದರೆ ಎಷ್ಟೋ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೋಲಾಹಲಗಳು ಉದ್ಭವಿಸುತ್ತಿರಲಿಲ್ಲ. ಅಲ್ಲಾ! ಇಂಥಾ ಚಿಂತನೆಗಳೆಲ್ಲಾ ಹುಟ್ಟುವ ಮೆದುಳಿನ ರಚನೆಯಾದರೂ ಹೇಗಿರುತ್ತೆ ಎಂದು ಸಂಶೋಧಿಸಿದರೆ ಮೆಡಿಕಲ್ ಸೈನ್ಸ್ನಲ್ಲಿ ಹೊಸ ಆಯಾಮವೇ ಹುಟ್ಟಿಕೊಳ್ಳಬಹುದೇನೋ.
ಹತ್ತೊಂಬತ್ತನೇ ಶತಮಾನದಲ್ಲಿ ಇಂಥಾ ವಿಚಿತ್ರ ಚಿಂತನೆ (ಐಛಛಿಟಠಢ್ಞcಚ್ಚಜಿಛಿಠ)ಗಳನ್ನು ಹುಟ್ಟುಹಾಕುತ್ತಿದ್ದ ಕಲ್ಕತ್ತಾ ಮತ್ತು ಮದ್ರಾಸಿನ ಅಂದಿನ ಸಾಮಾಜಿಕ ಸುಧಾರಕರಿಗೆ ವಿವೇಕಾನಂದರು ಉತ್ತರಿಸಿದ್ದು ್ಗ್ಠ ್ಚ್ಞ ಠ್ಚ್ಟಚಿಚ್ಝಿಛಿ ಚ ್ಛಡಿ ಡಿಟ್ಟಛಠ ಚ್ಞಛ ಠಿಜಛ್ಟಿಛಿ ಜಿಠ ಚ ್ಛಟ್ಝ ಠಿಟ ಟ್ಠಚ್ಝಿಜಿಠಜ ಛಿಡಛ್ಟಿಢಠಿಜಜ್ಞಿಜ ಢಟ್ಠ ಜಚಡಛಿ ಡ್ಟಿಜಿಠಿಠಿಛ್ಞಿ ಛಟಛಿಠ ್ಞಠಿ ಞಛಿಚ್ಞ ಢಟ್ಠ ್ಚ್ಞ ಛಜ್ಚಿಠಿಚಠಿಛಿ ಠಿಛ್ಟಿಞಠ ಠಿಟ ಠಿಜಜಿಠ ್ಚuಠ್ಟಿಢ ಎಂದು. ಇದನ್ನೇ ಪ್ರಸ್ತುತ ಸಂದರ್ಭಕ್ಕೆ ಅನ್ವಯಿಸಿಕೊಂಡರೆ ಹೀಗೂ ಹೇಳಬಹುದೇ? ಬರೆಯುವವರು ಸಾವಿರ. ಬರೆದಿದ್ದೆಲ್ಲಾ ಬರಹವಾಗಬಹುದೇ ಹೊರತು ಸಾಹಿತ್ಯವಾಗಲಾರದು. ಪಠ್ಯವಂತೂ ಮೊದಲೇ ಆಗಲಾರದು. ಹಿತವನ್ನೊಳಗೊಂಡ ಬರಹ ಮಾತ್ರ ಸಾಹಿತ್ಯ. ಸಾಹಿತ್ಯ, ಸಹಿತ ಎನ್ನುವು ದರ ನಾಮ ವಾಚಕ. ಅದರಲ್ಲಿ ತರ್ಕವೂ ಇರಬೇಕು, ಉದ್ಭೋದಕವೂ ಆಗಿರಬೇಕು. ಜೈ ಹಿಂದ್ ಎನ್ನುವುದು, ರಾಷ್ಟ್ರಮಾತೆಗೆ ಜಯವಾಗಲಿ ಎನ್ನುವುದು ಬೇರೊಬ್ಬರಿಗೆ ಸೋಲಾಗಲಿ ಎಂಬ ಅರ್ಥವೇ? ತರ್ಕದ ಲೇಶವಾದರೂ ಇಲ್ಲಿದೆಯೇ? ಒಬ್ಬರಿಗೆ ಪ್ರಶಸ್ತಿ ಬಂದರೆ ಬೇರೆಯವರು ನಿಷ್ಪ್ರಯೋಜಕರು ಎಂತಲೇ? ಮತ್ತು ಅರೆ ಬೆಂದ ಮೆದುಳುಗಳು ಭಾರತೀಯ ವಿಜಯವನ್ನು ಜರ್ಮನಿಯ ವಿಜಯಕ್ಕೋ, ರೋಮನ್ನರ ವಿಜಯಕ್ಕೋ, ಅರಬ್ಬರ ವಿಜಯಕ್ಕೋ ಹೋಲಿಸಿದರೆ ಹೇಗೆ? ಭಾರತೀಯರು ತಮ್ಮ ವಿಜಯಗಳನ್ನು ಹೇಗೆ ಸಾಧಿಸಿದ್ದಾರೆ ಎನ್ನುವುದನ್ನು ವಿಲ್ ಡ್ಯೂರೆಂಟ್, ವಾಲ್ಟೈರ್, ಫ್ರೆಡ್ರಿಕ್ ಶಿಲೆಗಲ್, ಅಣು ಬಾಂಬಿನ ಜನಕ ರಾಬರ್ಟ್ ಓಪನೀಮರ್, ಕಾರ್ಲ್ ಯೂಂಗ್, ಪೊ›ಫೆಸರ್ ಓಕಾಕುರಾ ಇತ್ಯಾದಿ ಜಗತ್ಪ್ರಸಿದ್ಧ ಚಿಂತಕರ ಬರಹಗಳಿಂದ ಅರಿಯಬೇಕೇ ಹೊರತು ಎಲ್ಲಿಂದಲೋ, ಯಾರಿಂದಲೋ ಪಡೆದುಕೊಂಡರೆ ವಿದ್ಯಾರ್ಥಿಗಳ ಮೆದುಳುಗಳು ನಿದ್ದೆ ಮಾಡೀತು. ಮೆಕಾಲೆ ಪ್ರಣೀತ ಶಿಕ್ಷಣ ಪದ್ಧತಿ ಈಗಾಗಲೇ ಇಲ್ಲಿಯ ಮೆದುಳುಗಳಿಗೆ ತುಕ್ಕು ಹಿಡಿಸಿರುವುದು ಸಾಕು. ಜವಾಬ್ದಾರಿ ಸ್ಥಾನಗಳಲ್ಲಿರುವವರ ಎಚ್ಚರಗೇಡಿತನ ಆಘಾತಕಾರಿ ಮತ್ತು ಅಹಿತಕ್ಕೆ ಬುನಾದಿ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)