ಭಾರತದ ಅತ್ಯಂತ ಯಶಸ್ವಿ ಪ್ರಧಾನಮಂತ್ರಿ ಮೋದಿ: ಮುಖೇಶ್ ಅಂಬಾನಿ ಶ್ಲಾಘನೆ

mukesh
Published on

ಅಹಮದಾಬಾದ್ (ಗುಜರಾತ್): ದೇಶದ ಇತಿಹಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅತ್ಯಂತ ಯಶಸ್ವಿ ನಾಯಕ ಎಂದು ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಕೊಂಡಾಡಿದರು.

ವೈಬ್ರೆಂಟ್ ಗುಜರಾತ್ ಜಾಗತಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಈ ಶೃಂಗ ಸಭೆಯನ್ನು 20 ವರ್ಷದಿಂದ ನಡೆಸುತ್ತ ಬಂದ ಕೀರ್ತಿಯು ಪ್ರಧಾನಿ ಮೋದಿ ಅವರ ದೂರದರ್ಶಿತ್ವ ಹಾಗೂ ಸ್ಥಿರತೆಗೆ ಸಾಕ್ಷಿ ಎಂದರು.

ಉದ್ಯಮ ರಂಗದಲ್ಲಿ ಬೇರೆ ಯಾವುದೇ ಶೃಂಗ ಸಭೆಯೂ ಸತತ ಹಾಗೂ ನಿರಂತರ 20 ವರ್ಷಗಳ ಕಾಲ ಯಶಸ್ವಿಯಾಗಿ ಸಾಗಿ ಬಂದಿಲ್ಲ. ವರ್ಷದಿಂದ ವರ್ಷಕ್ಕೆ ಈ ಶೃಂಗ ಸಭೆ ಶಕ್ತಿಯುತ ಆಗುತ್ತಲೇ ಸಾಗಿದೆ ಎಂದು ಹೇಳಿದರು.

ಅಷ್ಟೇ ಅಲ್ಲ, ಗುಜರಾತ್ ರಾಜ್ಯವನ್ನು ನವ ಭಾರತದ ಹೊಸ ಮುಖವನ್ನಾಗಿ ಪರಿವರ್ತಿಸಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕು. ಮೋದಿ ಅವರ ದೂರದೃಷ್ಟಿ ಹಾಗೂ ಸ್ಥಿರತೆಯಿಂದಾಗಿ ಇದೆಲ್ಲಾ ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ವಿದೇಶೀಯರು ನವ ಭಾರತದ ಬಗ್ಗೆ ಕಲ್ಪಿಸಿಕೊಂಡಾಗ ಅವರ ಕಣ್ಮುಂದೆ ಗುಜರಾತ್ ಬಂದು ನಿಲ್ಲುತ್ತದೆ.

ಮೋದಿ ಅವರು ಜಾಗತಿಕ ಮಟ್ಟದ ಮಹಾನ್ ನಾಯಕನಾಗಿ ನಮ್ಮ ಕಾಲ ಘಟ್ಟದಲ್ಲಿ ಹೊರಹೊಮ್ಮಿದ್ದು ನಮ್ಮ ಅದೃಷ್ಟ ಡಂದು ಮುಖೇಶ್ ಅಂಬಾನಿ ಮೋದಿ ಅವರ ಗುಣಗಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net