More

    ರಾಹುಲ್ ಗಾಂಧಿಯ ‘ಭಾರತ್ ನ್ಯಾಯ್ ಯಾತ್ರೆ’ ಆರಂಭಕ್ಕೆ ಮುನ್ನವೇ ವಿಘ್ನ: ಅನುಮತಿ ನಿರಾಕರಿಸಿದ ಮಣಿಪುರ ಸರ್ಕಾರ!

    ನವದೆಹಲಿ: ರಾಹುಲ್ ಗಾಂಧಿ ಅವರ ಭಾರತ್ ನ್ಯಾಯ್ ಯಾತ್ರೆಗೆ ಮಣಿಪುರ ಸರ್ಕಾರ ಅನುಮತಿ ನಿರಾಕರಿಸಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ

    ಇದನ್ನೂ ಓದಿ: ‘ಭಾರತ ತಂಡದಲ್ಲಿ ಎಲ್ಲರೂ ಕುಡುಕರು’: ಹೀಗೆಂದಿದ್ದೇಕೆ ಮಾಜಿ ವೇಗಿ ಪ್ರವೀಣ್ ಕಮಾರ್​?

    ಜನವರಿ 14 ರಂದು ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್‌ನಿಂದ ಪ್ರಾರಂಭವಾಗಬೇಕಿದ್ದ ಯಾತ್ರೆಯು ಇದರೊಂದಿಗೆ ಹಿನ್ನಡೆ ಎದುರಿಸುವಂತಾಗಿದೆ.
    ಇಂಫಾಲ್ ಪೂರ್ವ ಜಿಲ್ಲೆಯಿಂದ ರಾಹುಲ್ ಗಾಂಧಿ ಅವರ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಪ್ರಾರಂಭಿಸಲು ಮಣಿಪುರ ಸರ್ಕಾರ ಅನುಮತಿ ನೀಡಲು ನಿರಾಕರಿಸಿದೆ. ಜನವರಿ 14 ರಂದು ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್‌ನಿಂದ ಯಾತ್ರೆ ಪ್ರಾರಂಭವಾಗಿ ದೇಶಾದ್ಯಂತ ಸಂಚರಿಸಬೇಕಿತ್ತು. ಆದರೆ ರಾಜ್ಯ ಸರ್ಕಾರ ಯಾತ್ರೆ ನಿರಾಕರಣೆಯೊಂದಿಗೆ ಯಾತ್ರೆ ಆರಂಭಿಸುವ ಬಗ್ಗೆ ಪರಿಶೀಲಿಸುವಂತಾಗಿದೆ ಎಂದು ಮಣಿಪುರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕೀಶಮ್ ಮೆಗಾಚಂದ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.

    ಮಣಿಪುರ ಸರ್ಕಾರದ ಈ ನಿರ್ಧಾರವು “ದುರದೃಷ್ಟಕರ” ಮತ್ತು “ಜನರ ಹಕ್ಕುಗಳ ಉಲ್ಲಂಘನೆ” ಎಂದು ಅವರು ಆರೋಪಿಸಿದ್ದಾರೆ.

    “ನಾವು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರನ್ನು ಭೇಟಿ ಮಾಡಿದ್ದೇವೆ. ಇಂಫಾಲ್ ಪೂರ್ವ ಜಿಲ್ಲೆಯ ಹಟ್ಟಾ ಕಾಂಗ್ಜೆಬುಂಗ್‌ನಲ್ಲಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಆರಂಭಿಸಲು ಅನುಮತಿ ಕೋರಿದ್ದೇವೆ. ಆದರೆ, ಮುಖ್ಯಮಂತ್ರಿಗಳು ಅದಕ್ಕೆ ಅನುಮತಿ ನೀಡಲು ನಿರಾಕರಿಸಿದ್ದಾರೆ’ ಎಂದು ಕೀಶಮ್ ಮೇಗಚಂದ್ರ ಹೇಳಿದರು.

    ಮೋದಿ ಸಂಪುಟಕ್ಕೆ ಕುಮಾರಸ್ವಾಮಿ ಜತೆ ಇನ್ನೂ ಮೂವರು ಸಿಎಂಗಳು: ಚುನಾವಣೆಗೆ ಮುನ್ನ ಬಿಜೆಪಿಯ ಬಿಗ್ ಸ್ಟ್ರಾಟಜಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts